Kundapra.com ಕುಂದಾಪ್ರ ಡಾಟ್ ಕಾಂ

ಸ್ವಾತಂತ್ರ್ಯ ಅಮೃತಮಹೋತ್ಸವ ವನದಲ್ಲಿ ಬೈಂದೂರು ಇನ್ನರ್ ವೀಲ್ ಕ್ಲಬ್ ವನಮಹೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿನ ಸ್ವಾತಂತ್ರ್ಯ ಅಮೃತಮಹೋತ್ಸವ ವನದಲ್ಲಿ ಇನ್ನರ್ ವೀಲ್ ಕ್ಲಬ್ ವತಿಯಿಂದ ವಿವಿಧ ಹಣ್ಣಿನ ಗಿಡಗಳು ಮತ್ತು ಔಷಧೀಯ ಸಸ್ಯಗಳನ್ನು ನೆಟ್ಟು ವನಮಹೋತ್ಸವ ಆಚರಿಸಲಾಯಿತು.

ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಡಾ. ರಘು ನಾಯ್ಕ, ಬೈಂದೂರು ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಭಾನುಮತಿ ಬಿ. ಕೆ., ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಅಧ್ಯಕ್ಷರಾದ ಪ್ರಸಾದ್, ಇನ್ನರ್ ವೀಲ್ ಕ್ಲಬ್ ಬೈಂದೂರಿನ ಪದಾಧಿಕಾರಿಗಳಾದ ಸುಜಾತಾ ರವಿರಾಜ್, ಶಾರದಾ ನಾರಾಯಣ, ರಾಜೀವಿ ಗೋವಿಂದ ಮತ್ತು ಗುಲಾಬಿ ಉಪಸ್ಥಿತರಿದ್ದರು.

Exit mobile version