ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬಂದೂರು ತಾಲೂಕಿನ ನೂತನ ತಹಶೀಲ್ದಾರರಾಗಿ ಶ್ರೀಕಾಂತ್ ಎಸ್. ಹೆಗ್ಡೆ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ಮೂಲತಃ ತೀರ್ಥಹಳ್ಳಿಯವರಾದ ಶ್ರೀಕಾಂತ್ ಅವರು, ಈ ಹಿಂದೆ ಹೊಸನಗರ ತಾಲೂಕು ಪಂಚಾಯತಿಯಲ್ಲಿ ಉಪ ತಹಶೀಲ್ದಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ಬಳಿಕ ಗ್ರೇಡ್-2 ತಹಶೀಲ್ದಾರರಾಗಿ ಭಡ್ತಿ ಹೊಂದಿದ್ದರು.
ಈ ಮೊದಲು ತಹಶಿಲ್ದಾರರಾಗಿದ್ದ ಶೋಭಾಲಕ್ಷ್ಮೀ ಹೆಚ್. ಎಸ್. ಅವರ ವರ್ಗಾವಣೆಯ ಬಳಿಕ ತೆರವಾದ ಸ್ಥಾನಕ್ಕೆ ಶ್ರೀಕಾಂತ್ ಎಸ್ ಅವರು ನೇಮಕಗೊಂಡಿದ್ದಾರೆ. ಈ ನಡುವೆ ಕುಂದಾಪುರ ತಹಶೀಲ್ದಾರ್ ಕಿರಣ್ ಗೌರಯ್ಯ ಬೈಂದೂರು ತಾಲೂಕಿನ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಂಡಿದ್ದರು.