Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ತಹಶೀಲ್ದಾರರ ಕಛೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜಯಂತಿ ಆಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ತಹಶೀಲ್ದಾರರ ಕಛೇರಿ ಬೈಂದೂರಿನಲ್ಲಿ 168ನೇ ನಾರಾಯಣ ಗುರು ಜಯಂತಿಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಉಪತಹಶೀಲ್ದಾರ ಭೀಮಪ್ಪ ಬಿಲ್ಲಾರ್ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಬೈಂದೂರು ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗಣೇಶ ಪೂಜಾರಿ, ಬಿಲ್ಲವ ಸಂಘದ ಮುಖಂಡರಾದ ಎಸ್. ರಾಜು ಪೂಜಾರಿ, ಕಾರ್ಯದರ್ಶಿ ವಾಸುದೇವ ಪೂಜಾರಿ, ಶೇಖರ ಪೂಜಾರಿ ಉಪ್ಪುಂದ, ದೊಟ್ಟಯ್ಯ ಪೂಜಾರಿ, ಕುಂದಾಪುರ ಸಹಾಯಕ ಕಮಿಷನರ್ ಇಲಾಖೆಯ ಸಿಬ್ಬಂದಿ ಮಂಜುನಾಥ ಬಿಲ್ಲವ, ಬೈಂದೂರು ಬಿಲ್ಲವ ಸಂಘದ ಮುಖಂಡರು ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.

ಇದನ್ನೂ ಓದಿ:
► ಕುಂದಾಪುರ: ತಾಲೂಕು ಆಡಳಿತದಿಂದ ಗುರು ಅವರ 168ನೇ ಜಯಂತಿ ಆಚರಣೆ – https://kundapraa.com/?p=62019 .

Exit mobile version