Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಜಿಲ್ಲಾ ಮಟ್ಟದ ಪ್ರಾಥಮಿಕ – ಪ್ರೌಢಶಾಲಾ ಖೋ ಖೋ ಪಂದ್ಯಾಟ ಉದ್ಘಾಟನೆ

ಬೈಂದೂರು ಜ್ಯೂನಿಯರ್ ಕಾಲೇಜು ಆತಿಥ್ಯದಲ್ಲಿ ಅಚ್ಚುಕಟ್ಟು ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಸೆ
.12: ಕ್ರೀಡೆಯಲ್ಲಿ ಸೋಲು ಗೆಲುವಿನ ಲೆಕ್ಕಾಚಾರಕ್ಕಿಂತ ಕ್ರೀಡಾ ಸ್ಪೂರ್ತಿ ಮುಖ್ಯವಾದುದು. ಗೆದ್ದರೆ ಸಂತೋಷ ಪಡುವ ಸೋತರೆ ಮುಂದಿನ ಗೆಲುವಿಗೆ ತಯಾರಿ ನಡೆಸುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕಿದೆ ಎಂದು ಉಡುಪಿ ಅರಣ್ಯ ಸಂಚಾರಿದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ ಪಿ. ಹೇಳಿದರು.

ಅವರು ಕ್ಷೇತ್ರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಸಹಭಾಗಿತ್ವದಲ್ಲಿ ಬೈಂದೂರು ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಖೋ ಖೋ ಪಂದ್ಯಾಟದಲ್ಲಿ ಕಲ್ಪಪುಪ್ಪವನ್ನರಳಿಸಿ ಶುಭಹಾರೈಸಿದರು.

ಬೈಂದೂರು ಬಂಟರ ಸಂಘದ ಅಧ್ಯಕ್ಷರಾದ ಜಗನ್ನಾಥ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಎಸ್ಡಿಎಂಸಿ ಅಧ್ಯಕ್ಷ ಗಣಪ ಜಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಜಿಪಂ ಮಾಜಿ ಸದಸ್ಯರುಗಳಾದ ಬಾಬು ಶೆಟ್ಟಿ, ಸುರೇಶ್ ಬಟವಾಡಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯ ಜಯಾನಂದ ಹೋಬಳಿದಾರ್, ತಾಪಂ ಮಾಜಿ ಸದಸ್ಯ ಪುಪ್ಪರಾಜ ಶೆಟ್ಟಿ, ಪ್ರಾ.ಶಾ ಶಿಕ್ಷಕ ಸಂಘದ ಅಧ್ಯಕ್ಷ ಶೇಖರ ಪೂಜಾರಿ, ಪ್ರೌ.ಶಾ ಸ.ಹಿ ಸಂಘದ ಅಧ್ಯಕ್ಷ ಸದಾನಂದ ಶೆಟ್ಟಿ, ಬವಳಾಡಿ ಸಂಸ್ಕೃತ ವಿದ್ಯಾಪೀಠ ತಿರುಮಲೇಶ್ವರ ಭಟ್, ಮಾದರಿ ಶಾಲಾ ಮುಖ್ಯೋಪಾಧ್ಯಾಯರಾದ ಜನಾರ್ದನ ದೇವಾಡಿಗ, ಪ್ರೌಢಶಾಲಾ ದೈ.ಶಿ.ಶಿ ಸಂಘದ ಅಧ್ಯಕ್ಷ ಸತ್ಯನಾರಾಯಣ ಜಿ., ಪ್ರಾಥಮಿಕ ಶಾಲಾ ದೈ.ಶಿ. ಸಂಘದ ಅಧ್ಯಕ್ಷ ಸತೀಶ್ ಅತಿಥಿಗಳಾಗಿದ್ದರು.

ಈ ಸಂದರ್ಭ ಜಗನ್ನಾಥ ಶೆಟ್ಟಿ, ಜಯಾನಂದ ಹೋಬಳಿದಾರ್ ಹಾಗೂ ಶ್ರೀಧರ ಪಿ. ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಸಪಪೂ ಕಾಲೇಜು ಪ್ರಾಂಶುಪಾಲರಾದ ಎಮ್.ಪಿ. ನಾಯ್ಕ್, ಜಿಲ್ಲಾ ದೈಹಿಕ ಶಿಕ್ಷ ಪರಿವೀಕ್ಷಣಾಧಿಕಾರಿ ರಘುನಾಥ್, ಬೈಂದೂರು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ, ಪ್ರಾ.ಶಾ.ಶಿ.ಸಂಘದ ಕಾರ್ಯದರ್ಶಿ ಗಣಪತಿ ಹೋಬಳಿದಾರ್, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಭಾಗೀರಥಿ, ಉದ್ಯಮಿ ಶ್ರೀಪತಿ, ದಿನಕರ ಪಟವಾಲ್ ಪಡುವರಿ, ಎಸ್ಡಿಎಂಸಿ ಸದಸ್ಯರಾದ ಬಾಲಚಂದ್ರ ಪ್ರಭು, ಶ್ರೀನಿವಾಸ್ ಶೇಟ್, ರೋನಿ, ಭಾಸ್ಕರ, ಸುವರ್ಣ ಶೆಟ್ಟಿ, ಚಂದ್ರ, ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಭಾಕರ್ ಎಸ್. ಹಾಗೂ ಪುಪ್ಪಾ ಟಿ.ಟಿ. ಉಪಸ್ಥಿತರಿದ್ದರು.

ಎಸ್ಡಿಎಂಸಿ ಕಾರ್ಯಾಧ್ಯಕ್ಷ ಸದಾಶಿವ ಡಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪಪ್ರಾಂಶುಪಾಲರಾದ ಪದ್ಮನಾಭ ಸ್ವಾಗತಿಸಿದರು. ಸಹಸಶಿಕ್ಷಕಿ ಚಿತ್ರ ಶೆಣೈ ವಂದಿಸಿದರು. ಸಹಶಿಕ್ಷಕರುಗಳಾದ ರವೀಂದ್ರ ಪಿ., ದತ್ತಾತ್ರೆಯ ಭಟ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಬೈಂದೂರು ಸೇನೇಶ್ವರ ದೇವಸ್ಥಾನದಿಂದ ಗಾಂಧಿ ಮೈದಾನದ ತನಕ ವಿದ್ಯಾರ್ಥಿಗಳಿಂದ ಭವ್ಯ ಪುರಮೆರವಣಿಗೆ ಜರುಗಿತು.

ಚಿತ್ರಗಳು – ಶಶಾಂಕ್ ಕಾರಂತ್ ಬೈಂದೂರು

Exit mobile version