ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೆಂಗಳೂರು ಯಲಹಂಕ ಬಳಿ ಭಾನುವಾರ ಸಂಭವಿಸಿದ ಸ್ಕೂಟಿ ಹಾಗೂ ಟ್ಯಾಂಕರ್ ನಡುವಿನ ಅಪಘಾತದಲ್ಲಿ ಬೈಂದೂರು ತಾಲೂಕು ಹೊಸ್ಕೋಟೆ ನಿವಾಸಿ ಮಹಿಳೆ ಮೃತಪಟ್ಟಿದ್ದಾರೆ. ಹೊಸ್ಕೋಟೆ ಬೊಳ್ಳುಗುಡ್ಡೆ ನಿವಾಸಿ ಪ್ರೇಮ ಪೂಜಾರಿ (35) ಮೃತಪಟ್ಟ ದುರ್ದೈವಿ.
ಕಳೆದ ಎರಡು ವರ್ಷದಿಂದ ಬೆಂಗಳೂರು ಅಂಚೆ ಕಚೇರಿಯಲ್ಲಿ ಪ್ರೇಮಾ ಪೂಜಾರಿ ಸೇವೆ ಸಲ್ಲಿಸುತ್ತಿದ್ದು, ಪತಿ ಜೊತೆ ತೆರಳುತ್ತಿದ್ದಾಗ ಅಪಘಾತದಲ್ಲಿ ಪ್ರೇಮಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸೋಮವಾರ ಬೊಳ್ಳುಗುಡ್ಡೆಯಲ್ಲಿ ಅಂತ್ಯಕ್ರಿಯೆ ನಡೆದಿದೆ. ಮೃತರು ಪತಿ, ಇಬ್ಬರು ಮಕ್ಕಳ ಅಗಲಿದ್ದಾರೆ.

