Site icon Kundapra.com ಕುಂದಾಪ್ರ ಡಾಟ್ ಕಾಂ

ಗುಜ್ಜಾಡಿ: ಸೆಲ್ಕೋ ಸೋಲಾರ್ ಹೊಲಿಗೆ ಯಂತ್ರ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗುಜ್ಜಾಡಿ ಗ್ರಾಮದ ಜನತಾ ಕಾಲೋನಿ ನಿವಾಸಿ ಸುಮನ ಖಾರ್ವಿ ಅವರ ಮನೆಯಲ್ಲಿ ಸೆಲ್ಕೋ ಸೋಲಾರ್ ವತಿಯಿಂದ ಅಳವಡಿಸಲಾಗಿರುವ ಹೊಲಿಗೆ ಯಂತ್ರವನ್ನು ಕರ್ಣಾಟಕ ಬ್ಯಾಂಕ್ ತ್ರಾಸಿ ಶಾಖೆಯ ಪ್ರಬಂಧಕ ಅಮರನಾಥ ಪಿ. ಭಂಡಾರಿ ಬುಧವಾರ ಉದ್ಘಾಟಿಸಿದರು.

ಹೊಲಿಗೆ ಯಂತ್ರ ಖರೀದಿಗೆ ತ್ರಾಸಿ ಕರ್ಣಾಟಕ ಬ್ಯಾಂಕ್ ಆರ್ಥಿಕ ಸಹಾಯವನ್ನು ನೀಡಿದೆ ಅಲ್ಲದೆ ಜಿ.ಐ.ಝೆಡ್ ಸಂಸ್ಥೆಯು ಶೇ.೨೫ ಸಬ್ಸಿಡಿ ಅನುದಾನ ನೀಡಿದೆ. ಸೆಲ್ಕೋ ಸಂಸ್ಥೆಯ ಏರಿಯಾ ಮ್ಯಾನೇಜರ್ ಶೇಖರ್ ಶೆಟ್ಟಿ, ಶಾಖಾ ಪ್ರಬಂಧಕ ಮಂಜುನಾಥ್, ಎಕ್ಸಿಕ್ಯೂಟಿಯಾದ ಮಂಜುನಾಥ್ ಬಿ. ಶೆಟ್ಟಿ ಮತ್ತು ಶಾಂತ ಖಾರ್ವಿ ಉಪಸ್ಥಿತರಿದ್ದರು.

Exit mobile version