ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ 2021-22ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಕುಂದಾಪುರದ ಆರ್.ಎನ್ ಶೆಟ್ಟಿ ಸಭಾಂಗಣದಲ್ಲಿ ನಡೆಯಿದೆ.
ಸಂಘದ ಅಧ್ಯಕ್ಷರಾದ ಜಾನ್ಸನ್ ಡಿ’ಅಲ್ಮೇಡಾ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘವು 2022ರ ಆಗಸ್ಟ್ ಅಂತ್ಯಕ್ಕೆ ಒಟ್ಟು ರೂ.130 ಕೋಟಿ ಠೇವಣಿ ಹಾಗೂ ರೂ.106 ಕೋಟಿ ಸಾಲ ಹೊಂದಿದೆ. ಒಟ್ಟು ರೂಪಾಯಿ 500 ಕೋಟಿ ವ್ಯವಹಾರ ಮಾಡಲಾಗಿದ್ದು, ರೂ. 2.11 ಕೋಟಿ ನಿವ್ವಳ ಲಾಭವನ್ನು ಗಳಿಸಿದೆ. ಸಂಘದ ಸದಸ್ಯರಿಗೆ ಶೇ. 20% ಡಿವಿಡೆಂಡ್ ಘೋಷಿಸಲಾಗುತ್ತಿದೆ ಎಂದರು.
ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೊಸೈಟಿಯನ್ನು ಮುಂದಿನ ದಿನಗಳಲ್ಲಿ ಇತರ ಜಿಲ್ಲೆಗಳಿಗೆ ವಿಸ್ತರಿಸಲು ಹಾಗೂ ಬಾಕಿ ಇರುವ ಶಾಖೆಗಳಿಗೆ ಸ್ವಂತ ಕಟ್ಟಡ, ಗ್ರಾಹಕರ ಅನುಕೂಲಕ್ಕಾಗಿ ಹೊಸ ಶಾಖೆ, ಸಂಘದ ಮುಂದಿನ ಭವಿಷ್ಯಕ್ಕಾಗಿ ಕುಂದಾಪುರದ ಆಸುಪಾಸಿನಲ್ಲಿ ಒಂದು ಸ್ವಂತ ಜಾಗ ಖರೀದಿ, ಸಂಘದ ಪ್ರಧಾನ ಕಛೇರಿಯ ಮೂರನೇ ಅಂತಸ್ತಿನಲ್ಲಿ ಸಭಾಂಗಣ ಮಾಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸಂಘದ ಮುಖ್ಯ ಸಲಹೆದಾರರಾದ ವಂ| ಸ್ಟೇನಿ ತಾವ್ರೋ ಮಾತನಾಡಿ, ಉತ್ತಮ ನಿರ್ದೇಶಕರ ತಂಡ ಹಾಗೂ ಸಿಬ್ಬಂದಿಗಳ ಕಾರ್ಯತತ್ಪರತೆ ಜೊತೆಗೆ ಗ್ರಾಹಕರ ಪ್ರಾಮಾಣಿಕತೆಯಿಂದಾಗಿ ಸಂಘವು ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣವಾಯಿತು. ಅಲ್ಲದೆ ಮುಂದೆಯೂ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹರಸಿದರು.
ಸಭೆಯಲ್ಲಿ ಸಂಘದ ನಿರ್ದೇಶಕರಾದ ವಿನೋದ್ ಕ್ರಾಸ್ಟೋ, ಬ್ಯಾಪ್ಟಿಸ್ಟ್ ಡಾಯಾಸ್, ಓಜಲಿನ್ ರೆಬೆಲ್ಲೊ, ಪ್ರಕಾಶ್ ಲೋಬೋ, ಶಾಂತಿ ಡಯಾಸ್, ಸಂತೋಷ್ ಓಝೋಲ್ಡ ಡಿ ಸಿಲ್ವಾ, ವಿಲ್ಫ್ರೆಡ್ ಮಿನೇಜಸ್, ಟೆರೆನ್ಸ್ ಸುವಾರಿಸ್, ಮತ್ತು ತಿಯೋದರ ಒಲಿವೇರ ಉಪಸ್ಥಿತರಿದ್ದರು.
ಸಂಘದ ನಿರ್ದೇಶಕ ಡೇರಿಕ್ ಡಿ’ಸೋಜಾ ಪರಿಶೋಧಿತ ಲೆಕ್ಕಪತ್ರಗಳನ್ನು ಮಂಡಿಸಿದರು. ಸಂಘದ ಸ್ಥಾಪಕ ಹಾಗೂ ಪ್ರಸ್ತುತ ನಿರ್ದೇಶಕರಾದ ಫಿಲಿಪ್ ಡಿ ಕೋಸ್ಟಾ ಸ್ವಾಗತಿಸಿದರು. ನಿರ್ದೇಶಕ ವಿಲ್ಸನ್ ಡಿ ಸೋಜಾ ಪ್ರಾಸ್ತವಿಕ ಭಾಷಣ ನುಡಿದರು ನಿರ್ದೇಶಕಿ ಡೈನಾ ಡಿ ಅಲ್ಮೇಡ ವಂದಿಸಿದರು. ನಿರ್ದೇಶಕಿ ಶಾಂತಿ ಆರ್ ಕರ್ವಾಲ್ಲೊ , ಶ್ರೀ ಕಿರಣ್ ಮೇಲ್ವಿನ್ ಲೋಬೋ ಕಾರ್ಯಕ್ರಮ ನಿರೂಪಿಸಿದರು