Kundapra.com ಕುಂದಾಪ್ರ ಡಾಟ್ ಕಾಂ

ಸಮಾಜಕ್ಕೆ ಒಳ್ಳೆಯದ್ದನ್ನೇ ಮಾಡುವುದು ಭಗವಂತನಿಗೆ ನಾವು ಸಲ್ಲಿಸುವ ತೆರಿಗೆ: ಕೆರಾಡಿ ಚಂದ್ರಶೇಖರ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಸುಂದರ ಸಮಾಜ ನಿರ್ಮಾಣದ ಮೂಲಕ ದೇಶವನ್ನು ಕಟ್ಟುವ ಕೆಲಸ ಮಡಬೇಕು. ಎಲ್ಲವನ್ನೂ ಕೊಟ್ಟ ಸಮಾಜದ ಋಣವನ್ನು ತೀರಿಸುವ ನೆಲೆಯಲ್ಲಿ ಜಿಸಿಐನಂತಹ ಸಂಘಟನೆಯ ಮೂಲಕ ಸಮಾಜಮುಖಿ ಕಾರ್ಯಗಳು ನಡೆಯುವಂತಾಗಬೇಕು. ಉತ್ತಮ ಜನರ ಸಹವಾಸ ಗೆಳೆತನ ಬೆಳೆಸಿಕೊಂಡರೆ ಮಾತ್ರ ಜೀವನ ಉತ್ತಮವಾಗಲು ಸಾಧ್ಯ ಎಂದು ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಹೇಳಿದರು.

ಉಪ್ಪುಂದ ಮಾತೃಸ್ರೀ ಸಭಾಭವನದಲ್ಲಿ ಒಂದು ವಾರಗಳ ಕಾಲ ನಡೆದ ಜೇಸಿಐ ಸಪ್ತಾಹ ಸಮ್ಮಿಲನದ ಸಮಾರೋಪದಲ್ಲಿ ಮಾತನಾಡಿದರು. ವಿದ್ಯಾರ್ಥಿವೇತನಕ್ಕಿಂತ ಮಾಹಿತಿ ತರಬೇತಿ ಶಿಬಿರಗಳಿಂದ ಹೆಚ್ಚಿನ ಲಾಭ ವಿದ್ಯಾರ್ಥಿಗಳಿಗೆ ದೊರೆಯುತ್ತದೆ. ಜ್ಞಾನವನ್ನು ವಿಸ್ತರಿಸಿಕೊಂಡು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳಲು ಅವಶ್ಯವಿರುವ ಮಾಹಿತಿ ತರಬೇತಿ ಪಡೆದುಕೊಳ್ಳಲು ಜೆಸಿಐ ವತಿಯಿಂದ ಕಾರ್ಯಗಾರಗಳನ್ನು ಆಯೋಜಿಸಬೇಕು. ಹುಟ್ಟುವಾಗ ಏನನ್ನೂ ತರದ ನಾವುಗಳು ಸಾಯುವಾಗಲೂ ಬರಿಕೈಯಲ್ಲಿ ಹೋಗುತ್ತೇವೆ. ಹುಟ್ಟು ಸಾವಿನ ನಡುವಿನ ನಮ್ಮ ಬದುಕಿನಲ್ಲಿ ಸಮಾಜಕ್ಕೆ ಒಳ್ಳೆಯದ್ದನ್ನೇ ಮಾಡಬೇಕಿದೆ. ಇದು ಭಗವಂತನಿಗೆ ನಾವು ಸಲ್ಲಿಸುತ್ತಿರುವ ತೆರಿಗೆಯಾಗಿದೆ ಎಂದರು.

ಉಪ್ಪುಂದ ಜೆಸಿಐ ಘಟಕದ ಅಧ್ಯಕ್ಷ ನಾಗರಾಜ್ ಪೂಜಾರಿ ಉಬ್ಜೇರಿ ಅಧ್ಯಕ್ಷತೆವಹಿಸಿದ್ದರು. ಉದ್ಯಮಿ ಗುರುದತ್ ಶೇಟ್ ಇವರಿಗೆ ಉದ್ಯಮರತ್ನ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಚಲನಚಿತ್ರ, ಕಿರುತೆರೆ ನಿರ್ದೇಶಕ, ಛಾಯಾಗ್ರಾಹಕ ನಾಗರಾಜ್ ಉಪ್ಪುಂದ ಇವರನ್ನು ಸನ್ಮಾನಿಸಲಾಯಿತು. ಪೂವಾಧ್ಯಕ್ಷ ಪುರುಷೋತ್ತಮದಾಸ್ ಇವರಿಗೆ ಕಮಲಪತ್ರ ಪ್ರಶಸ್ತಿ ಪ್ರದಾನಿಸಲಾಯಿತು.

ನಾವುಂದ ಲಯನ್ಸ್ ಕ್ಲಬ್ ಅಧ್ಯಕ್ಷ ಜಗದೀಶ ಶೆಟ್ಟಿ ಕುದ್ರುಕೋಡು, ಉದ್ಯಮಿಗಳಾದ ಬಿ. ಎಸ್. ಸುರೇಶ ಶೆಟ್ಟಿ, ಜನಾರ್ದನ ದೇವಾಡಿಗ, ಯು. ಎ. ಮಂಜು ದೇವಾಡಿಗ, ಜೆಸಿಐ ಬೈಂದೂರು ಸಿಟಿ ಅಧ್ಯಕ್ಷೆ ಸವಿತಾ ದಿನೇಶ್, ಪೂರ್ವಾಧ್ಯಕ್ಷ ಪ್ರಿಯದರ್ಶಿನಿ ಬೆಸ್ಕೂರು, ಗ್ರಾಪಂ ಸದಸ್ಯ ವೀರೇಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಪೂರ್ವಾಧ್ಯಕ್ಷ ದೇವರಾಯ ದೇವಾಡಿಗ ಸ್ವಾಗತಿಸಿದರು. ಕಾರ್ಯದರ್ಶಿ ಜಗದೀಶ್ ದೇವಾಡಿಗ ವಂದಿಸಿದರು. ಸುಬ್ರಹ್ಮಣ್ಯ ಜಿ. ನಿರೂಪಿಸಿದರು. ನಂತರ ರಿದಂ ಬೈಂದೂರು ತಂಡದವರಿಂದ ನೃತ್ಯವೈವಿದ್ಯ ನಡೆಯಿತು.

Exit mobile version