Kundapra.com ಕುಂದಾಪ್ರ ಡಾಟ್ ಕಾಂ

ಕರ್ನಾಟಕ ಮುಸ್ಲಿಂ ಜಮಾಅತ್ ಬೈಂದೂರು ತಾಲೂಕು ಅಧ್ಯಕ್ಷರಾಗಿ ಇಲ್ಯಾಸ್, ಕಾರ್ಯದರ್ಶಿಯಾಗಿ ಶಭ್ಬೀರ್ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು:
ಕರ್ನಾಟಕ ಮುಸ್ಲಿಂ ಜಮಾಅತ್ ಬೈಂದೂರು ತಾಲೂಕು ಅಧ್ಯಕ್ಷರಾಗಿ ನ್ಯಾಯವಾದಿ ಇಲ್ಯಾಸ್ ಕೆ. ಎಂ., ಪ್ರಧಾನ ಕಾರ್ಯದರ್ಶಿಯಾಗಿ ಶಭ್ಬೀರ್ ಬೈಂದೂರು ಆಯ್ಕೆಯಾಗಿದ್ದಾರೆ.

ನೂತನ ಸಮಿತಿ ಪದಾಧಿಕಾರಿಗಳಾಗಿ ಕೋಶಾಧಿಕಾರಿ ಸಯ್ಯಿದ್ ಅಜ್ಮಲ್ ಶಿರೂರು, ಸಂ.ಕಾರ್ಯದರ್ಶಿಯಾಗಿ ಮುಸ್ತಫ ಬಡಾಕೆರೆ, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಖಾದರ್ ಬಡಾಕೆರೆ, ಅಂದು ಕಾಯಿ ಹಾಜಿ ಚಾತನಕೆರೆ, ಅಬ್ದುಲ್ ಗಫ್ಫಾರ್ ಶಿರೂರು, ಸುಲ್ತಾನ್ ಬೈಂದೂರು, ಕಾರ್ಯದರ್ಶಿಗಳಾಗಿ ಕೊಂಬಾಳಿ ಕೆ.ಎಂ.ಎಚ್ ಝುಹುರಿ, ಖಾಸಿಂ ನಾವುಂದ, ಜಾಫರ್ ಬೈಂದೂರು, ಅಬ್ಬಾಸ್ ಮರವಂತೆ ಆಯ್ಕೆಯಾಗಿದ್ದಾರೆ.

Exit mobile version