Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಶ್ರೀರಾಮ ಫೈನಾನ್ಸ್ ಶಾಖಾ ಕಛೇರಿ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಶ್ರೀರಾಮ ಫೈನಾನ್ಸ್ ಕೋ. ಲಿ. ಇದರ ಸ್ಥಳಾಂತರಿತ ಶಾಖಾ ಕಛೇರಿ ಇಲ್ಲಿನ ಸೈಂಟ್ ಮರಿಯಾ ಕಟ್ಟಡದಲ್ಲಿ ಸೋಮವಾರ ಶುಭಾರಂಭಗೊಂಡಿತು.

ಶ್ರೀರಾಮ ಫೈನಾನ್ಸ್ ಉಪಾಧ್ಯಕ್ಷ ಹಾಗೂ ಝೋನಲ್ ಬಿಸಿನೆಸ್ ಹೆಡ್ ಶರಶ್ಚಂದ್ರ ಭಟ್ ಕಕ್ಕುಂಜೆ ನವೀಕೃತ ಶಾಖೆಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕುಂದಾಪುರ ಪುರಸಭಾ ಅಧ್ಯಕ್ಷೆ ವೀಣಾ ಭಾಸ್ಕರ್, ಉದ್ಯಮಿಗಳಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ದೇವಾನಂದ್ ಶೆಟ್ಟಿ, ಮಂಗಳೂರು ಝೋನ್ ಕಲೆಕ್ಷನ್ ಹೆಡ್ ನಾಗರಾಜ ಬಿ., ಟೆರಿಟರಿ ಲೀಗಲ್ ಹೆಡ್ ಉಲ್ಲಾಸ್ ವಿ. ನಾಯಕ್ ಅತಿಥಿಗಳಾಗಿದ್ದರು.

ರೀಜನಲ್ ಕ್ರೆಡಿಟ್ ಹೆಡ್ ಮಹೇಶ್ ಕುಮಾರ್ ಸಿ.ಹೆಚ್., ರೀಜನಲ್ ಬಿಸಿನೆಸ್ ಹೆಡ್ ಸದಾಶಿವ್, ರೀಜನಲ್ ಕಛೇರಿ ಸಿಬ್ಬಂದಿಗಳಾದ ಗಣಪತಿ ನಾಯ್ಕ್, ನವೀನ್ ಕುಮಾರ್, ಯೋಗೀಶ್, ಅಮಿತ್, ಕುಂದಾಪುರ ಬ್ರ್ಯಾಂಚ್ ಮ್ಯಾನೇಜರ್ ಸಂದೀಪ್ ಕುಮಾರ್, ಕಲೆಕ್ಷನ್ ಮ್ಯಾನೇಜರ್ ರಾಘವೇಂದ್ರ ಜಿ., ಉಪಸ್ಥಿತರಿದ್ದರು.

ಈ ವೇಳೆ ಸಂಸ್ಥೆಯಿಂದ 14 ಮಂದಿ ಗ್ರಾಹಕರನ್ನು ಸನ್ಮಾನಿಸಲಾಯಿತು. ರೀಜನಲ್ ಬಿಜಿನೆಸ್ ಹೆಡ್ ಸದಾಶಿವ್ ಸ್ವಾಗತಿಸಿ, ರೀಜನಲ್ ಸೇಲ್ಸ್ ಹೆಡ್ ಸದಾನಂದ ಪೈ ನಿರೂಪಿಸಿ, ವಂದಿಸಿದರು.

Exit mobile version