ವಿದ್ಯೆಯೇ ಮನುಷ್ಯನ ದೊಡ್ಡ ಸಂಪತ್ತು: ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಂಪತ್ತು ಎಷ್ಟಿದೆ ಎನ್ನೋದು ಮುಖ್ಯವಲ್ಲ ಅದನ್ನು ಬಳಸುವುದು ಗೇಗೆ ಎನ್ನುವುದು ಗೊತ್ತಿತಬೇಕು. ವಿದ್ಯೆ ಇದ್ದವರಿಗೆ ಸಂಪತ್ತು ಅಲ್ಲದೆ ಇನ್ನಿತರ ಎಲ್ಲಾ ವ್ಯವಸ್ಥೆಗಳ ಹೇಗೆ ಬಳಸಿಕೊಳ್ಳಬೇಕು ಎನ್ನೋದು ಗೊತ್ತಿರುತ್ತದೆ. ವಿದ್ಯೆಗಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ ಎಂದು ಅದಮಾರು ಮಠ ಕಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಹೇಳಿದರು.
ಕೋಟೇಶ್ವರ ವಕ್ವಾಡಿ ಬಾಂಡ್ಯಾ ಎಜುಕೇಶನ್ ಟ್ರಸ್ಟ್ ಗುರುಕುಲ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಶುಕ್ರವಾರ ಟ್ರಸ್ಟ್ ವತಿಯಿಂದ ನಿರ್ಮಿಸಿದ ಶ್ರೀ ಶಾರದಾ ದೇವಿ ಹಾಗೂ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣ ಮಾಡಿ ಮಾತನಾಡಿದರು.
ವಿದ್ಯೆಯಿದ್ದವನಿಗೆ ಅದನ್ನು ಹೇಗೆ ಬಳಸಬೇಕು ಎಂಬುದರ ಅರಿವು ಇರಬೇಕು. ವಿದ್ಯೆ ಸಾತ್ವಿಕ ಮಾರ್ಗದಿಂದ ಪಡೆಯಬೇಕು. ಸಹನೆ, ಏಕಾಗ್ರತೆ ನಿರಂತರ ಪ್ರಯತ್ನ ಇದ್ದರೆ ವಿದ್ಯೆ ಒಲಿಯುತ್ತದೆ. ವಿದ್ಯೆ,ಬುದ್ದಿ ಸಂಪತ್ತು ಎಲ್ಲವೂ ಇದ್ದ ಅದನ್ನು ಸದ್ವಿನಿಯೋಗ ಮಾಡದಿದ್ದರೆ ನಿಷ್ಪ್ರಯೋಜಕ ಎಂದರು.
ಬಾಂಡ್ಯ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿ, ಸಂಸ್ಕಾರಯುತ ಶಿಕ್ಷಣದಿಂದ ಸತ್ಪ್ರಜೆಗಳಾಗಲು ಸಾಧ್ಯ. ನಮ್ಮ ತನ ಉಳಿಸಿಕೊಂಡು ಮುನ್ನೆಡೆದರೆ ಯಶಸ್ಸು ತಾನಾಗೆ ಒಲಿಯುತ್ತದೆ ಎಂದರು.
ಬಾಂಡ್ಯಾ ಎಜುಕೇಶನ್ ಟ್ರಸ್ಟ್ ಜಂಟಿ ಕಾರ್ಯನಿರ್ವಾಹಕ ನಿರ್ದೇಶಕರಾದ ಬಾಂಡ್ಯಾ ಸುಭಾಸ್ ಶೆಟ್ಟಿ ಮತ್ತು ಅನುಪಮಾ ಎಸ್.ಶೆಟ್ಟಿ ಸ್ವಾಮೀಜಿ ಅವರ ಗೌರವಿಸಿದರು. ಸ್ವಾಮಿ ವಿವೇಕಾನಂದ ಹಾಗೂ ಶಾರದಾ ಮೂರ್ತಿ ನಿರ್ಮಿಸಿದ ಕಲಾವಿದ ವೇಣುಗೋಪಾಲ ಆಚಾರ್ಯ ಕುಂಬ್ಳೆ ಅವರ ಶ್ರೀ ಈಶಪ್ರಿಯ ಸ್ವಾಮೀಜಿ ಗೌರವಿಸಿದರು.
ಗುರುಕುಲ ವಿದ್ಯಾಸಂಸ್ಥೆ ವಾರ್ಡನ್ ತಿಲಕ್, ಸ್ವಾಮಿ ವಿವೇಕಾನಂದ ಕುರಿತು ಮಾತನಾಡಿದರು. ಕಲಾವಿದ ಪುರುಷೋತ್ತಮ ಅಡ್ವೆ ಇದ್ದರು.
ಗುರುಕುಲ ಶಿಕ್ಷಣ ಸಂಸ್ಥೆ ಸಂಗೀತ ಶಿಕ್ಷಕಿ ಪೂರ್ವಿಕಾ ಪ್ರಾರ್ಥಿಸಿದರು. ಅನುಪಮಾ ಎಸ್.ಶೆಟ್ಟಿ ಸ್ವಾಗತಿಸಿದರು. ಶಿಕ್ಷಕಿ ವಿಶಾಲ ನಿರೂಪಿಸಿದರು.