Kundapra.com ಕುಂದಾಪ್ರ ಡಾಟ್ ಕಾಂ

ಸಂಗೀತ ಒಲಿಯಲು ಸಂಸ್ಕಾರ ಬೇಕು – ವಿದ್ವಾನ್ ಅನಂತ ಹೆಬ್ಬಾರ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸಂಗೀತವು ಸಂಸ್ಕಾರದಿಂದ ಒಲಿಯುವ ಕಲೆ. ಯಾವುದೇ ಪ್ರಕಾರದ ಸಂಗೀತವೇ ಆದರೂ ಅದರ ಮೇಲೆ ಪ್ರಭುತ್ವ ಸಾಧಿಸಲು ಅದನ್ನು ಶ್ರದ್ಧೆಯಿಂದ ಕಲಿಯಬೇಕು ಮತ್ತು ಆರಾಧಿಸಬೇಕು ಎಂದು ಸಂಗೀತ ಗುರು, ವಿದ್ವಾನ್ ಅನಂತ ಹೆಬ್ಬಾರ್ ಭಟ್ಕಳ ಹೇಳಿದರು.

ನಾವುಂದ-ಮಸ್ಕಿ ಶ್ರೀದುರ್ಗಾಪರಮೇಶ್ವರಿ ಕಲಾನಿಕೇತನ ಸಂಗೀತ ಶಾಯ ಆಶ್ರಯದಲ್ಲಿ ಇಲ್ಲಿನ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ನಡೆದ ರಾಜ್ಯ ಮಟ್ಟದ ’ಗಾನ ಸ್ವರ-೨೦೨೨’ ಕರೋಕೆ ಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದುಸ್ಥಾನಿ ಸಂಗೀತ ಗುರು ವಿದ್ವಾನ್ ಶರತ್ ನಾಡ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಾನಕಿ ಮೊಗವೀರ, ಬಡಾಕೆರೆ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮಹಾಬಲ. ಕೆ, ಹಿಂದು ಅಭ್ಯುದಯ ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ, ಗಾಯಕ ಮಂಜುನಾಥ ಸಾಲಿಯಾನ್ ತ್ರಾಸಿ ಅತಿಥಿಗಳಾಗಿದ್ದರು. ದಿನೇಶ್ ನಾಯಕವಾಡಿ ವಂದಿಸಿದರು. ನಾಗರಾಜ ದೇವಳಿ ನಿರೂಪಿಸಿದರು. ಶಂಭು ಗುಡ್ಡಮ್ಮಾಡಿ ಸಹಕರಿಸಿದರು ರಾಜ್ಯದ ವಿವಿಧೆಡೆಯ ಹಾಡುಗಾರರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

Exit mobile version