Kundapra.com ಕುಂದಾಪ್ರ ಡಾಟ್ ಕಾಂ

ಕರಾವಳಿಯ ಆತಿಥ್ಯ ಉದ್ಯಮದ ಹಿರಿಮೆ ಯುವ ಮೆರಿಡಿಯನ್ ಗ್ರೂಪ್ಸ್‌ಗೆ ಪ್ರಶಸ್ತಿಯ ಗರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಆ
ತಿಥ್ಯ ಉದ್ಯಮ ಹಾಗೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಗುಣಮಟ್ಟ ಕಾಯ್ದುಕೊಂಡಿರುವ ಕೋಟೇಶ್ವರದ ಯುವ ಮೆರಿಡಿಯನ್ ಗ್ರೂಪ್ಸ್, ಪ್ರಸಕ್ತ ಸಾಲಿನಲ್ಲಿ ಎರಡು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಗಿದೆ. ದಿ ಟೈಮ್ಸ್ ಗ್ರೂಪ್‌ನಿಂದ ಇಟಿ ಅಜೀವರ್ಸ್ ಅವಾರ್ಡ್ ಹಾಗೂ ಎಐಸಿ ನಿಟ್ಟೆ – ಕೆಬಿಎಲ್ ವತಿಯಿಂದ ಬೆಸ್ಟ್ ಇನೋವೇಟಿವ್ ಎಂಟರ್ಪ್ರೈಸಸ್ ಅವಾರ್ಡ್‌ಗೆ ಭಾಜನರಾಗಿದ್ದು, ಯುವ ಮೆರಿಡಿಯನ್ ಹಿರಿಮೆಗೊಂದು ಗರಿ ಮೂಡಿದಂತಾಗಿದೆ.

Watch Video

ಈ ಬಗ್ಗೆ ಯುವ ಮೆರಿಡಿಯನ್‌ನಲ್ಲಿ ಬುಧವಾರ ಆಯೋಜಿಸಲಾದ ಮಾಧ್ಯಮಗೋಷ್ಠಿಯಲ್ಲಿ ಯುವ ಮೆರಿಡಿಯನ್ ಗ್ರೂಪ್ ಆಡಳಿತ ಪಾಲುದಾರರಾದ ಬಿ. ಉದಯ ಕುಮಾರ್ ಹಾಗೂ ಬಿ. ವಿನಯ ಕುಮಾರ್ ಶೆಟ್ಟಿ ಮಾಹಿತಿ ನೀಡಿದರು.

ಪ್ರಶಸ್ತಿ ಲಭಿಸಿರುವ ಬಗ್ಗೆ ಸಂತಸ ಹಂಚಿಕೊಂಡ ಸಹೋದರರು, ಗ್ರಾಮೀಣ ಪ್ರದೇಶದಲ್ಲಿ ದಶಕದಿಂದ ಅಂತರಾಷ್ಟ್ರೀಯ ಗುಣಮಟ್ಟದ ಸೇವೆ ನೀಡುತ್ತಿರುವ ಯುವ ಮೆರಿಡಿಯ ನ್‌ನ ಯುವ ಮೆರಿಡಿಯನ್ ಬೇ ರೆಸಾರ್ಟ್ & ಸ್ಪಾ ವಿಭಾಗವು ಅಂತರಾಷ್ಟ್ರೀಯ ಮನ್ನಣೆ, ಗೌರವಕ್ಕೆ ಪಾತ್ರವಾಗಿದ್ದಲ್ಲದೆ ರಾಜ್ಯದ ಪ್ರತಿಷ್ಠಿತ ಹಾಗೂ ಮುಂಚೂಣಿಯ ಹೋಟೆಲ್‌ಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಪ್ರವಾಸೋದ್ಯಮಕ್ಕೆ ನೀಡುತ್ತಿರುವ ಉತ್ತಮ ಸಹಕಾರಕ್ಕಾಗಿ ಯುವ ಮೆರಿಡಿಯನ್ ಗ್ರೂಪ್ಸ್ ಸತತ ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನವಾಗುತ್ತಿದೆ. ಟೈಮ್ಸ್ ಗ್ರೂಪ್’ನಿಂದ ಮೆರಿಡಿಯನ್ ಬೇ ವಿಭಾಗದ ಎಕ್ಸಲೆನ್ಸಿ ಇನ್ ಲಕ್ಸುರಿ ಆ್ಯಂಡ್ ಲೈಸುರ್ ಸ್ಟೇಗಾಗಿ ಇಟಿ ಅಚೀವರ್ಸ್ ಅವಾರ್ಡ್ ಲಭಿಸಿದೆ. ಎಐಸಿ ನಿಟ್ಟೆ ಹಾಗೂ ಕರ್ನಾಟಕ ಬ್ಯಾಂಕ್ ಜಂಟಿಯಾಗಿ ಆಯೋಜಿಸಿದ ಎಂ.ಎಸ್.ಎಂ.ಇ ಬ್ಯುಸಿನೆಸ್ ಎಕ್ಸಲೆನ್ಸಿ ಅವಾರ್ಡ್ ಸಮಾರಂಭದಲ್ಲಿ ಯುವ ಇನ್ಫ್ರಾಸ್ಟ್ರಕ್ಚರ್‌ಗೆ ಬೆಸ್ಟ್ ಇನೋವೇಟಿವ್ ಎಂಟರ್’ಪ್ರೈಸಸ್ ಅವಾರ್ಡ್ ಲಭಿಸಿದೆ ಎಂದರು.

ಸಂಸ್ಥೆಯ ಹಿರಿಮೆಗೆ ಹಲವು ಪ್ರಶಸ್ತಿಗಳು:
ಯುವ ಮೆರಿಡಿಯನ್ ಸಮೂಹ ದೇಶದ ಪ್ರವಾಸೋದ್ಯಮ ಬೆಳವಣಿಗೆಯಲ್ಲಿ ಕೈಜೋಡಿಸಿ ಪ್ರಗತಿ ಸಾಧಿಸುತ್ತಾ ಬಂದಿದೆ. ಈವರೆಗಿನ ಸಂಸ್ಥೆ ಕಾರ್ಯಚಟುವಟಿಕೆ ಗುರುತಿಸಿ 2015ರಿಂದ 2018ರ ತನಕ ನಿರಂತರವಾಗಿ ಅಂತರಾಷ್ಟ್ರೀಯ ಗಾಲ್ಬಿಬೋ ಅವಾರ್ಡ್, 2016 ಮತ್ತು 17ರಲ್ಲಿ ಇಂಡಿಯಾ ಬೆಸ್ಟ್ ಹಾಸ್ಪಿಟಾಲಿಟಿ ಹಾಗೂ ಸೌತ್ ಬೆಸ್ಟ್ ರೆಸಾರ್ಟ್ ಪ್ರಶಸ್ತಿ, 2021ರಲ್ಲಿ ಟೈಮ್ಸ್ ಆಫ್ ಇಂಡಿಯಾದ ಬ್ಯುಸಿನೆಸ್ ಅವಾರ್ಡ್, ಅಗೋಧ ಬೆಸ್ಟ್ ರೆಸಾರ್ಟ್ ಅವಾರ್ಡ್, ಟ್ರಿಪ್ ಎಡ್ವೈಸರ್ ಬೆಸ್ಟ್ ಅವಾರ್ಡ್, ಬುಕ್ಕಿಂಗ್ ಡಾಟ್ ಕಾಮ್ ಟ್ರಾವೆಲ್ಲರ್ಸ್ ಅವಾರ್ಡ್, ಕೊಚ್ಚಿ ಐಐಟಿಎಂ 2018ರಲ್ಲಿ ಇಂಡಿಯಾ ಇಂಟರ್ನೇಶನಲ್ ವೆಡ್ಡಿಂಗ್ ಡೆಸ್ಟಿನೇಶನ್ ಅವಾರ್ಡ್ ನೀಡಿ ಗೌರವಿಸಿದೆ. ಈ ಎಲ್ಲದ್ದಕ್ಕೂ ಗರಿ ಮೂಡಿಸಿದಂತೆ ಟೈಮ್ಸ್ ಗ್ರೂಪ್ ಮತ್ತು ನಿಟ್ಟೆ ಎಂಎಸ್ಎಂಇ ಪ್ರಶಸ್ತಿ ದೊರಕಿರುವುದು ಸಂಸ್ಥೆಯು ಗ್ರಾಹಕರಿಗೆ ನೀಡುತ್ತಿರುವ ಸೇವೆಗೆ ಸಂದ ಗೌರವವಾಗಿದೆ ಎಂದರು.

ಮೆರಿಡಿಯನ್ ಬೇ ಐಶಾರಾಮಿ ಪೋರ್ ಸ್ಟಾರ್ ಡಿಲಕ್ಸ್ ರೆಸಾರ್ಟ್ ಆಗಿದ್ದು ಲಕ್ಸೂರಿಯಸ್ ರೂಮ್ಸ್ ಮತ್ತು ವಿಶಾಲ ಕನ್ವೆನ್ಶನ್ ಸವಲತ್ತು ಹೊಂದಿರುವ ಕರಾವಳಿ ಕರ್ನಾಟಕದ ಏಕೈಕ ಸಂಸ್ಥೆಯಾಗಿದೆ. ಎಕ್ಸಿಕ್ಯೂಟಿವ್ ರೂಮ್ಸ್, ಸೂಪರಿಯರ್ ರೂಮ್ಸ್, ಕ್ಲಬ್ ರೂಮ್ಸ್, ಡಿಲಕ್ಸ್ ರೂಮ್, ಸೂಟ್ ರೂಮ್ಸ್ ಗಳು ಇಲ್ಲಿವೆ. ಸ್ಥಳೀಯ ಆಹಾರ ಖಾದ್ಯಗಳು ಲಭಿಸುತ್ತವೆ. ಸ್ವಾಸ್ಥ್ಯ ಮೆರಿಡಿಯನ್ ನೇಚರ್ ಕ್ಯೂರ್ ಯೋಗ ಕೇಂದ್ರ ಇಲ್ಲಿದೆ. ಪ್ರವಾಸಿಗರಿಗೆ ಪ್ರಕೃತಿ ಚಿಕಿತ್ಸೆ, ಯೋಗ ಸೌಕರ್ಯ ಒದಗಿಸಲಾಗಿದೆ. 30 ಸಾವಿರ ಚದರ ವಿಸ್ತೀರ್ಣದ ಬೇ ರೇಸಾರ್ಟ್ ಎಂಡ್ ಸ್ಟಾ ವೀಕ್ಷಣೆಗೆ ಮನಸ್ಸಿಗೆ ಮುದ ನೀಡುತ್ತದೆ. ಸ್ಪಾದಲ್ಲಿ ಅತ್ಯಾಧುನಿಕ ಸ್ವಿಮ್ಮಿಂಗ್ ಪೂಲ್, ಜಿಮ್ ಜತೆಯಲ್ಲಿ ಚೆಸ್, ಕ್ಯಾರಮ್, ಸ್ನೂಕರ್, ಲಾಂಗ್ ಟೆನ್ನಿಸ್, ಪುಟ್ಬಾಲ್, ಬ್ಯಾಡ್ಮಿಂಟನ್, ವಾಲಿಬಾಲ್, ಕ್ರಿಕೆಟ್, ಎಟಿವಿ ಬೈಕ್ ರೈಡ್, ಗಾಲ್ಫ್ ಕಾರ್ರೈಡ್ ಮತ್ತು ಸೈಕ್ಲಿಂಗ್ಗೆ ಅವಕಾಶವಿದೆ. ಆತಿಥ್ಯ, ಕರಾವಳಿ ತೀರಗಳ ದರ್ಶನ ಸಂಸ್ಥೆ ಹೆಸರುವಾಸಿಯಾಗಿದೆ ಎಂದರು.

ಯುವ ಇನ್ಫ್ರಾಸ್ಟ್ರಕ್ಚರ್ಸ್ 2012ರಲ್ಲಿ ಆರಂಭಗೊಂಡಿದ್ದು ವಿಶ್ವಖ್ಯಾತಿಯ ಕನ್ವೆನ್ಸನ್ ಸೆಂಟರ್, ಅಮ್ಯೂಸ್ಮೆಂಟ್ ಪಾರ್ಕ್, ಮೆರಿಡಿಯನ್ ಬೇ ರೆಸಾರ್ಟ್, ಮಿನಾಲ್ ಬಾಂಕ್ವೆಟ್ ಮಿನಿ ಹಾಲ್, ಓಪೆರಾ ಪಾರ್ಕ್ ಅಲ್ಲದೆ ವಿಶಾಲ ಪಾರ್ಕಿಂಗ್ ಒಳಗೊಂಡಿದೆ. ಬಾನಯಾನ ಟ್ರಿ ಆವರಣದಲ್ಲಿ ತೆರೆದ ಅಂಕಣದಲ್ಲಿ 3 ಸಾವಿರ ಮಂದಿ ಕುಳಿತು ವೀಕ್ಷಿಸಬಹುದಾದ ಸುಂದರ ಪರಿಸರ ರೂಪಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ವಿಶ್ವದರ್ಜೆಯ ಸೌಂಡ್ ಗ್ರೂಪ್ ಬಾಂಕ್ವೆಟ್ ಹಾಲ್ ಗ್ರಾಮೀ ಬಾಲ್ ರೂಮ್ ಸೇವೆಗೆ ಸಜ್ಜುಗೊಂಡಿದೆ. ಇಲ್ಲಿ 1200 ಮಂದಿ ಏಕಕಾಲದಲ್ಲಿ ಕುಳಿತು ವೀಕ್ಷಿಸಬಹುದಾಗಿದೆ. ಯುವ ಕನ್ವೆನ್ಸನ್ ಸೆಂಟರ್ ಮತ್ತು ಅಮ್ಯೂಸ್ಮೆಂಟ್ ಅತಿ ಹೆಚ್ಚು ಜನಪ್ರಿಯತೆ ಗಳಿಸಿದೆ. ಕುಟುಂಬ ಸಮೇತರಾಗಿ ಸಮಯ ಕಳೆಯಲು ಅನುಕೂಲವಾಗಿದೆ ಎಂದರು.

ಕುಂದಾಪುರಕ್ಕೂ ಗರಿ:
ಯುವ ಮೆರಿಡಿಯನ್ ಬೇ ರೇಸಾರ್ಟ್ ಎಂಡ್ ಸ್ಪಾನಿಂದಾಗಿ ಬೆಳೆಯುತ್ತಿರುವ ನಗರ ಕುಂದಾಪುರ ನಗರ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸುತ್ತಿದೆ. ಯುವ ಮೆರಿಡಿಯನ್’ಗೆ ಭೇಟಿ ನೀಡುವ ಪ್ರವಾಸಿಗರಿಗೆ ಕುಂದಾಪುರ ಸುತ್ತಮುತ್ತಲಿನ ಅತ್ಯುತ್ತಮ ಬೀಚ್, ಪ್ರಾಚೀನ ದೇಗುಲ, ವಿಪುಲ ಸೌಂದರ್ಯದ ಪಶ್ಚಿಮಘಟ್ಟಗಳ ದರ್ಶನ ಮಾಡಿಸಲಾಗುತ್ತಿದೆ. ಕುಂದಾಪುರಕ್ಕೆ ಮೊದಲು ಹೆಲಿ ಟೂರಿಸಂ ಪರಿಚಯಿಸಿ ನಾನಾ ಕಡೆಯ ಪ್ರವಾಸಿಗರನ್ನು ಹೆಲಿಕಾಪ್ಟರ್ ಮೂಲಕ ಕುಂದಾಪುರದ ಬೀಚ್, ಪಶ್ಚಿಮಘಟ್ಟಗಳ ದರ್ಶನ ಮಾಡಿಸಲಾಗಿದೆ. ಹೋಟೆಲ್ನಲ್ಲಿ ತಂಗುವ ಪ್ರವಾಸಿಗರಿಗೆ ಸೀಸ್ಪೋರ್ಟ್ಸ್ನ ಅವಕಾಶವನ್ನು ಕೂಡ ಕಲ್ಪಿಸಲಾಗಿದೆ. ಜೊತೆಗೆ ನಮ್ಮ ಸಂಸ್ಕೃತಿ, ಕಲೆ ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ. ಸಂಸ್ಥೆಯ ಸೇವೆಯ ಜೊತೆಯಲ್ಲಿ ಕುಂದಾಪುರದ ಎಲ್ಲಾ ಸಾಂಸ್ಕೃತಿಕ, ಸಾಮುದಾಯಿಕ ಚಟುವಟಿಕೆಯಲ್ಲಿ ಸಕ್ರೀಯವಾಗಿದೆ. ರಾಷ್ಟ್ರೀಯ ಕಲಾ ಶಿಬಿರ ಹಾಗೂ ವಿವಿಧ ಕಾರ್ಪೊರೇಟ್ ಈವೆಂಟ್ ನಿರಂತರವಾಗಿ ಆಯೋಜಿಸಲಾಗುತ್ತಿದೆ. ಎಂದು ಬಿ. ಉದಯ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಸಂಸ್ಥೆಯ ಹೋಟೆಲ್ ಸಹಿತ ಇನ್ನಿತರ ವಿಭಾಗಗಳು ಅತ್ಯಾಧುನಿಕ ಸೌಕರ್ಯಗಳಿಂದ ಕೂಡಿರುವ ಬಗ್ಗೆ ಪ್ರವಾಸಿಗರು ಮೆಚ್ಚುಗೆ ಸೂಚಿಸುತ್ತಿರುವುದು ಅತೀವ ಸಂತಸ ತಂದಿರುವ ಜೊತೆಗೆ ಪ್ರವಾಸೋದ್ಯಮ ಆತಿಥ್ಯ ಉದ್ಯಮಕ್ಕೆ ಪ್ರಶಸ್ತಿ ದೊರೆತಿರುವುದು ಇನ್ನಷ್ಟು ಪ್ರೇರಣೆ ಒದಗಿಸಿದೆ. ಕುಂದಾಪುರದ ಜನಸಮುದಾಯ ನೀಡಿರುವ ಪ್ರೋತ್ಸಾಹದಿಂದ ಎಲ್ಲಾ ಸಾಧನೆ ಸಾಧ್ಯವಾಗಿದ್ದು ಈ ಪ್ರಶಸ್ತಿಯೂ ಕುಂದಾಪುರದ ಜನತೆಗೆ ಸಲ್ಲುತ್ತದೆ ಎಂದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಜನರಲ್ ಮೆನೇಜರ್ ಶರತ್ ಉಪಸ್ಥಿತರಿದ್ದರು.

ಇದನ್ನೂ ಓದಿ:
► ಯುವ ಮೆರಿಡಿಯನ್ ಗ್ರೂಪ್ಸ್‌ಗೆ ‘ಟೈಮ್ಸ್ ಬಿಸಿನೆಸ್ ಅವಾರ್ಡ್ 2021’ – https://kundapraa.com/?p=46899 .
► ಯುವ ಮೆರಿಡಿಯನ್‌ ಗೆ ‘ಬೆಸ್ಟ್ ರೆಸಾರ್ಟ್’ ಪ್ರಶಸ್ತಿ, ಆಹಾರ ಗುಣಮಟ್ಟಕ್ಕಾಗಿ ‘ಐಎಸ್‌ಓ’ ಸರ್ಟಿಫಿಕೇಟ್ – https://kundapraa.com/?p=16368 .
► ಕುಂದಾಪುರಕ್ಕೂ ಬಂತು ಹೆಲಿ ಟೂರಿಸಂ. ಯುವ ಮೆರಿಡಿಯನ್‌ನಲ್ಲಿ ಪ್ರಾಯೋಗಿಕ ಹಾರಾಟಕ್ಕೆ ಚಾಲನೆ – https://kundapraa.com/?p=13624 .

Exit mobile version