Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಗೆ ವೆಂಟನಾ ಫೌಂಡೇಶನ್‌ನಿಂದ ಜೆನರೇಟರ್ ಕೊಡುಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಉಡುಪಿಯ ವೆಂಟನಾ ಫೌಂಡೇಶನ್ ವತಿಯಿಂದ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ 15 ಕೆ.ವಿ.ಯ ಜೆನರೇಟರನ್ನು ಇತ್ತೀಚಿಗೆ ಕೊಡುಗೆಯಾಗಿ ನೀಡಲಾಯಿತು.

ಉಡುಪಿಯ ಮಾಹಿತಿ ತಂತ್ರಜ್ಞಾನದ ದಿಗ್ಗಜ ಸಂಸ್ಥೆ 99 ಗೇಮ್ಸ್ ಆನ್‌ಲೈನ್ ಉಪಾಧ್ಯಕ್ಷೆ ಹಾಗೂ ವೆಂಟನಾ ಫೌಂಡೇಶನ್ ಟ್ರಸ್ಟಿ ಶಿಲ್ಪಾ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಜೆನರೇಟರ್ ಹಸ್ತಾಂತರಿಸಿ ಮಾತನಾಡಿ ವೆಂಟನಾ ಫೌಂಡೇಶನ್ ಮೂಲಕ ಉಡುಪಿ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸರಕಾರಿ ಕನ್ನಡ ಮಾಧ್ಯಮ ಶಾಲೆಗೆ ಮೂಲ ಸೌಕರ್ಯವನ್ನು ಒದಗಿಸುವುದು. ಪರಿಸರ ಹಾಗೂ ಜಲ ಸಂರಕ್ಣಣೆ ವಿಭಾಗದಲ್ಲಿ ಕೆರೆಯ ಸ್ವಚ್ಚತೆ, ಗಿಡಗಳನ್ನು ಬೆಳೆಸಿ ಕಾಡಿನ ನಿರ್ಮಾಣ, ಕಲೆ, ಸಂಸ್ಕೃತಿಯ ಉಳಿವು ಮುಂತಾದ ಆಯಾಮದಲ್ಲಿ ಧನಸಹಾಯ ನೀಡಲಿದ್ದೇವೆ. ರೋಹಿತ್ ಭಟ್ ಅವರ ನೇತೃತ್ವದಲ್ಲಿರುವ ಈ ಫೌಂಡೇಶನ್ ಸಮಾನ ಮನಸ್ಕರೊಂದಿಗೆ ಆರಂಭಗೊಂಡಿದೆ ಎಂದರು.

ಗ್ರಾಮೀಣ ಭಾಗದಲ್ಲಿರುವ ಈ ಅಕಾಡೆಮಿ ದೇಶ ವಿದೇಶಗಳಲ್ಲಿ ಯಕ್ಷಗಾನ ಗೊಂಬೆಯಾಟದ ಪ್ರದರ್ಶನ ನೀಡಿ ಹೆಸರುವಾಸಿಯಾಗಿದೆ. ಈ ಅಕಾಡೆಮಿಯಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚು ಕಾರ್ಯಕ್ರಮ ನಡೆಯಲಿ. ಗೊಂಬೆಯಾಟಕ್ಕೆ ಸಂಬಂದಿಸಿದ ಸರ್ವ ಪ್ರಾಕಾರದಲ್ಲಿ ಕಾರ್ಯ ನಡೆದು ಇನ್ನಷ್ಟು ಪ್ರಖ್ಯಾತಿ ಹೊಂದಲಿ ಎಂದು ಶುಭ ಹಾರೈಸಿದರು.

ಶಿಲ್ಪಾ ಭಟ್ ರವರನ್ನು ಅಕಾಡೆಮಿಯ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಯು.ಎಸ್.ಶೆಣೈ, ರೂಪಾ ಪ್ರಭು, ಜಯಮಾಲಾ ಶೆಣೈ, ಹೆಚ್. ಸುಬ್ರಾಯ ಶೆಣೈ, ತಲ್ಲೂರು ಸುರೇಶ್, ರತ್ನಾಕರ್ ಪೈ, ನಾಗೇಶ್ ಶ್ಯಾನುಭಾಗ್, ಉದಯ ಭಂಡಾರ್‌ಕಾರ್, ವಸಂತಿ ಆರ್. ಪಂಡಿತ್, ಅಕಾಡೆಮಿಯ ಸದಸ್ಯರು, ಗೊಂಬೆಯಾಟ ಮಂಡಳಿಯ ಕಲಾವಿದರು, ವೆಂಟನಾ ಫೌಂಡೇಶನ್‌ನ ಇತರ ಸದಸ್ಯರಾದ ರವಿಂದ್ರ ರಾವ್, ಶೈಲಜಾ ರಾವ್, ವಿಘ್ನೇಶ್ ಶೇಟ್ ಮತ್ತಿತರು ಉಪಸ್ಥಿತರಿದ್ದರು. ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ರವರು ತಮಗೆ ಬೆಳಕು ನೀಡಿದ ವೆಂಟನಾ ಸಂಸ್ಥೆಗೆ ಧನ್ಯವಾದ ಸಲ್ಲಿಸಿ ಶುಭ ಹಾರೈಸಿದರು.

Exit mobile version