Kundapra.com ಕುಂದಾಪ್ರ ಡಾಟ್ ಕಾಂ

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿಗೆ ‘ನ್ಯಾಷನಲ್ ಎಂಪ್ಲೋಯೆಬಿಲಿಟಿ ಅವಾರ್ಡ್ಸ್’

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ಎಸ್ಎಚ್ಎಲ್ ಸಂಸ್ಥೆಯಿಂದ ಕೊಡಮಾಡುವ ‘ನ್ಯಾಷನಲ್ ಎಂಪ್ಲೋಯೆಬಿಲಿಟಿ ಅವಾರ್ಡ್ಸ್ -2022’ ರಾಷ್ಟ್ರೀಯ ಪುರಸ್ಕಾರವನ್ನು ಮಿಜಾರಿನ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯವು ಪಡೆದುಕೊಂಡಿದೆ.

2022ನೇ ಸಾಲಿನ ವಿದ್ಯಾರ್ಥಿಗಳ ಆಸ್ಪೈರಿಂಗ್ ಮೈಂಡ್ಸ್ ಕಂಪ್ಯೂಟರ್ ಅಡಾಪ್ಟಿವ್ ಟೆಸ್ಟ್ (ಎಎಂಸಿಎಟಿ) ಆಧಾರಿತ ಅಂಕಗಳನ್ನು ಆಧರಿಸಿ ಆಳ್ವಾಸ್ ಸಂಸ್ಥೆಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಸಂಸ್ಥೆಯ ಈ ಸಾಧನೆ ಬಗ್ಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಪ್ರಾಂಶುಪಾಲ ಡಾ. ಪೀಟರ್ ಫೆನಾಂಡಿಸ್ ಹರ್ಷ ವ್ಯಕ್ತಪಡಿಸಿದ್ದಾರೆ.

ಎಎಂಸಿಎಟಿ ಒಂದು ಯಾಂತ್ರಿಕ ಔದ್ಯೋಗಿಕ ಪರೀಕ್ಷೆಯಾಗಿದ್ದು, 700ಕ್ಕೂ ಅಧಿಕ ಕಂಪೆನಿಗಳು ಉದ್ಯೋಗಾಕಾಂಕ್ಷಿಗಳಿಗೆ ಕಡ್ಡಾಯವಾಗಿ ಇದನ್ನು ಕೈಗೊಳ್ಳುತ್ತವೆ. ವಿದ್ಯಾರ್ಥಿಗಳ ಎಎಂಸಿಎಟಿ ಪರೀಕ್ಷೆಯ ಅಂಕಗಳನ್ನು ಪರಿಗಣಿಸಿ ಮೆರಿಟ್ ನೀಡಲಾಗುತ್ತದೆ. ಈ ಮೂಲಕ ಕಂಪೆನಿಗಳು ಕೌಶಲ್ಯಭರಿತ ಉತ್ತಮ ಅಭ್ಯರ್ಥಿಗಳನ್ನು ಆಯ್ದುಕೊಳ್ಳುತ್ತವೆ. ದೇಶದ ಸಾವಿರಾರು ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಈ ಪರೀಕ್ಷೆಯನ್ನು ನಡೆಸಲಾಗಿದ್ದು, ಅವುಗಳಲ್ಲಿ ಕೇವಲ 97 ಶಿಕ್ಷಣ ಸಂಸ್ಥೆಗಳಿಗೆ ಈ ಪುರಸ್ಕಾರ ಪುರಸ್ಕೃತವಾಗಿದ್ದು, ಅವುಗಳಲ್ಲಿ ಆಳ್ವಾಸ್ ಸಂಸ್ಥೆಯು ಒಂದು ಎನ್ನುವುದು ಗಮನಾರ್ಹ ಸಂಗತಿ.

Exit mobile version