Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಜನಸೇವಾ ಟ್ರಸ್ಟ್ ನೇತೃತ್ವದಲ್ಲಿ ಗಾಂಜಾ ವಿರುದ್ಧ ಜಾಗೃತಿ ನಡಿಗೆ – ವಾಕಥಾನ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ನ.9:
ನಶೆ ಏರಿಸುವ ಗಾಂಜಾ ಮೊದಲಾದ ಪದಾರ್ಥಗಳು ಜೀವನ ನೆಮ್ಮದಿ ಕಿತ್ತು ತಿನ್ನುವುದಲ್ಲದೆ, ಸಮಾಜದ ಸ್ವಾಸ್ಥ್ಯ ಕೆಡಿಸಿ, ಕೌಂಟುಂಬಿಕ ಬದುಕು ನಾಶ ಮಾಡುತ್ತಿದೆ. ಯುವ ಸಮಾಜ ಜಾಗೃತಿ ಹೆಜ್ಜೆ ಇಡಬೇಕು ಎಂದು ಇಲ್ಲಿನ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ನ್ಯಾಯಾಧೀಶ ಅಬ್ದುಲ್ ರಹೀಂ ಹುಸೇನ್ ಶೇಕ್ ಹೇಳಿದರು.

ಜನಸೇವಾ ಟ್ರಸ್ಟ್ ಮೂಡುಗಿಳಿಯಾರು, ಡಾ. ಬಿ.ಬಿ. ಹೆಗ್ಡೆ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು, ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘ ಆಶ್ರಯದಲ್ಲಿ ಕುಂದಾಪುರ ಪದವಿಪೂರ್ವ ಕಾಲೇಜು ಆವರಣದಲ್ಲಿ ಮಂಗಳವಾರ ನಡೆದ ಗಾಂಜಾ ವಿರುದ್ಧ ಜಾಗೃತ ನಡಿಗೆ ವಾಕಥಾನ್ ಒಂದು ಹೆಜ್ಜೆ ಒಂದ ಅಮುಲು ಮುಕ್ತ ಭಾರತಕ್ಕಾಗಿ ನಡೆದ ಕಾರ್ಯಕ್ರಮದಲ್ಲಿ ಡೋಲು ನುಡಿಸಿ ಉದ್ಘಾಟಿಸಿ ಮಾತನಾಡಿ ನಶಾ ಪ್ರಪಂಚ ಕಾಲೇಜು ಕರಿಡಾರ್‌ಗಳಿಗೂ ಪ್ರವೇಶ ಪಡುತ್ತಿರುವುದ ಬೇಸರದ ವಿಷಯವಾಗಿದ್ದು, ಸಮಾಜದ ಎಚ್ಚರಿಸುವ ಕಾರ್ಯ ಮಾಡಬೇಕಿದೆ ಎಂದರು.

ಕುಂದಾಪುರ ಹಿರಿಯ ಸಿವಿಲ್ ನ್ಯಾಯಾಧೀಶ ರಾಜು ಎನ್., ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಶ್ರೀನಾಥ ರಾವ್, ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜ್ ಪ್ರಾಂಶುಪಾಲ ಪ್ರೊ. ಕೆ. ಉಮೇಶ್ ಶೆಟ್ಟಿ ಕೊತ್ತಾಡಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಜಿ. ರಾಮಕೃಷ್ಣ, ಉಪಪ್ರಾಂಶುಪಾಲ ಕಿರಣ್ ಹೆಗ್ಡೆ, ಡಾ. ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ, ಜನಸೇವಾ ಟ್ರಸ್ಟ್‌ನ ಪ್ರವೀಣ್ ಯಕ್ಷಿಮಠ, ಅರುಣ್ ಕುಮಾರ ಶೆಟ್ಟಿ, ಲೋಕೇಶ್ ಅಂಕದಕಟ್ಟೆ, ಡಿ.ಜೆ ರಂಜು, ವಕೀಲರಾದ ಪ್ರಮೋದ್ ಹಂದೆ, ಕೃಷ್ಣರಾಜ್ ಶೆಟ್ಟಿ ಚೋರಾಡಿ, ರಾಜಾರಾಮ್ ಶೆಟ್ಟಿ, ಉಮೇಶ್ ಶೆಟ್ಟಿ ಶಾನ್ಕಟ್ಟು, ವಿಕಾಸ್ ಹೆಗ್ಡೆ ಕೊಳ್ಕೆರೆ ಇದ್ದರು.

ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಗಾಂಜಾ ಜಾಗೃತಿಗಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಕಾಲು ನಡಿಗೆ ಜಾಥಾ ನಡೆಸಿದರು.

ಜನಸೇವಾ ಟ್ರಸ್ಟ್ ಉದಯ ಶೆಟ್ಟಿ ಪಡುಕೆರೆ ಸ್ವಾಗತಿಸಿದರು. ಜನಸೇವಾ ಟ್ರಸ್ಟ್‌ನ ವಸಂತ ಗಿಳಿಯಾರ್ ಪ್ರಾಸ್ತಾವಿಕ ಮಾತನಾಡಿದರು. ವಕೀಲ ಉದಯ ಕುಮಾರ್ ಶೆಟ್ಟಿ ಕಾಳಾವರ ವಂದಿಸಿದರು. ಕೆ.ಸಿ. ರಾಜೇಶ್ ನಿರೂಪಿಸಿದರು.

Exit mobile version