Kundapra.com ಕುಂದಾಪ್ರ ಡಾಟ್ ಕಾಂ

ಕನ್ನಡ ಸಾಹಿತ್ಯ ಪರಿಷತ್ತು ಕುವೈತ್ ಘಟಕದ ಅಧ್ಯಕ್ಷರಾಗಿ ಸುರೇಶ್ ರಾವ್ ನೇರಂಬಳ್ಳಿ ನೇಮಕ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುವೈತ್:
ಗಲ್ಫ್ ರಾಷ್ಟ್ರ ಕುವೈತ್ ನಲ್ಲಿ ಕಳೆದ 20 ವರ್ಷಗಳಿಂದ ಕರ್ನಾಟಕ ಮೂಲದ ಹಲವಾರು ಸಂಘ-ಸಂಸ್ಥೆಗಳಲ್ಲಿ ಆಡಳಿತ ಮಂಡಳಿ, ಕಾರ್ಯಕಾರಿ ಸಮಿತಿಗಳಲ್ಲಿ ಸೇವೆ ಸಲ್ಲಿಸಿರುವ ಹಾಗೂ ಪ್ರಸ್ತುತ ಕುವೈತ್ ಕನ್ನಡ ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ, ಸುರೇಶ್ ರಾವ್ ನೇರಂಬಳ್ಳಿಯವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿಯವರು ಕನ್ನಡ ಸಾಹಿತ್ಯ ಪರಿಷತ್ತಿನ ಕುವೈತ್ ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ.

ಕುವೈತ್ ನಲ್ಲಿ ಕನ್ನಡ ಹಾಗೂ ಕನ್ನಡ ಪರ ಸೇವೆಯ ಅಂಗವಾಗಿ ಪ್ರಪ್ರಥಮ ಕನ್ನಡ ಚಲನಚಿತ್ರ ಬಿಡುಗಡೆ ಹಾಗೂ ನಂತರದ ನಿರಂತರ ಚಲನಚಿತ್ರಗಳ ವಿತರಣೆ ಮತ್ತು ಪ್ರದರ್ಶನ, ಸಮಾಜ ಸೇವೆಯ ಭಾಗವಾಗಿ ಕೋವಿಡ್ ನಮಹಾಮಾರಿಯ ಸಮಯದಲ್ಲಿ ಭಾರತೀಯರಿಗಾಗಿ, ವೈಯಕ್ತಿಕವಾಗಿ ಹಾಗೂ ಇತರ ಸಂಘಟನೆಗಳ ಸಹಯೋಗದೊಂದಿಗೆ ನೆಡೆಸಿದ ದಿನಸಿ ಮತ್ತು ಆಹಾರ ಪೊಟ್ಟಣಗಳ ವಿತರಣೆ, ಜೀವರಕ್ಷಕ ಔಷಧಗಳ ವಿತರಣೆ, ಅತಂತ್ರರಾಗಿ ಭಾರತಕ್ಕೆ ಮರಳಲು ಕಾಯುತ್ತಿದ್ದ ಪ್ರಯಾಣಿಕರಿಗೆ ಸಂಬಂಧಪಟ್ಟ ಮಂತ್ರಿಗಳು, ಅಧಿಕಾರಿಗಳ ಸಹಯೋಗದೊಂದಿಗೆ ’ಚಾರ್ಟಡ್ ಪ್ಲೈಟ್’ ಹಾಗೂ ’ವಂದೇ ಭಾರತ್ ಮಿಷನ್’ ವಿಮಾನಗಳ ವ್ಯವಸ್ಥೆಯಲ್ಲಿ ಸಂಯೋಜಕರಾಗಿ ನೀಡಿರುವ ಸೇವೆ, ಲಾಕ್ ಡೌನ್, ಸೀಲ್ಡ್ ಡೌನ್ ಸಮಯದಲ್ಲೂ ಕುವೈತ್ ನ ಪೊಲೀಸ್ ಇಲಾಖೆ, ಮಿಲಿಟರಿಯವರ ಅನುಮತಿಯೊಂದಿಗೆ ಹಾಗೂ ಕರ್ಫ್ಯೂವಿನ ಬಿಡುವಿನ ಸಮಯದಲ್ಲಿ ತಮ್ಮ ಕಾರಿಗೆ ಅನುಮತಿ ಸಿಗದಿದ್ದಾಗ ಸೈಕಲ್ ನಲ್ಲಿ ಮಾಡಿರುವ ವಿತರಣೆ ಇನ್ನಿತರ ಸೇವಾ ಕಾರ್ಯಗಳನ್ನು ಕರ್ನಾಟಕ ಸರಕಾರದ ಮೂಲಕ ಜಿಲ್ಲಾ ಆಡಳಿತ ಗುರುತಿಸಿ ಈಗಾಗಲೆ, ’ಹೊರನಾಡು ಕನ್ನಡಿಗ’ ಹಾಗೂ ’ಸಮಾಜ ಸೇವೆ’ ವಿಭಾಗಗಳಲ್ಲಿ ’ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಕ್ತದಾನಕ್ಕಾಗಿ ರಾಯಭಾರಿಯವರಿಂದ ಸನ್ಮಾನ, ಕರ್ನಾಟಕ-ಕೇರಳ ಕನ್ನಡ ಸಮ್ಮೇಳನದ ರಾಷ್ಟ್ರೀಯ ಪ್ರಶಸ್ತಿ, ಕವಿಗೋಷ್ಥಿಯ ಅಧ್ಯಕ್ಷತೆ, ಕನ್ನಡ ಭವನ ಹಾಗೂ ಗ್ರಂಥಾಲಯ ವಿಭಾಗದಿಂದ ’ಪಯಸ್ವಿನಿ ಪ್ರಶಸ್ತಿ’ ಹಾಗೂ ’ಸೇವಾರತ್ನ ಪ್ರಶಸ್ತಿ’, ’ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ’, ಕರ್ನಾಟಕದ ರತ್ನ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ಇವರು ಈಗಾಗಲೆ ಗಲ್ಫ್ ಕನ್ನಡಿಗರ ಒಕ್ಕೂಟ ಮತ್ತು ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ಸಂಘಟನೆಗಳ ಕುವೈತ್ ಪ್ರತಿನಿಧಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ,

Exit mobile version