Site icon Kundapra.com ಕುಂದಾಪ್ರ ಡಾಟ್ ಕಾಂ

ಕರಾಟೆ ಚಾಂಪಿಯನ್ಶಿಪ್: ವಿಶ್ವ ವಿನಾಯಕ ಸಿಬಿಎಸ್ಇ ಸ್ಕೂಲ್ ವಿದ್ಯಾರ್ಥಿಗಳ ಸಾಧನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಉಡುಪಿಯಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ಶಿಪ್ನಲ್ಲಿ ವಿಶ್ವವಿನಾಯಕದ ವಿದ್ಯಾರ್ಥಿಗಳು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗಳಿಸಿ ಸಾಧನೆಯನ್ನು ತೊರಿರುತ್ತಾರೆ.

ವಿದ್ಯಾರ್ಥಿಗಳಾದ ಆರ್ಯಾನ್ಶ್ ಭಟ್, ಹಶ್ಮಿತ್ ಗಣೇಶ್, ವಿ. ಗೌತಮ್, ಶ್ರೀಜಿತ್, ಅನೀಶ್ ಶೆಟ್ಟಿ, ಅವನಿ ಶೆಟ್ಟಿ, ದಿವಿನ್ ಪಿ. ಶೆಟ್ಟಿ ಹಾಗೂ ಮನೀಶ್ ಕಟಾ ಹಾಗೂ ಕುಮಿಟೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಗಳಿಸಿ ಶಾಲೆ ಹಾಗೂ ಊರಿಗೆ ಕೀರ್ತಿಯನ್ನು ತಂದಿರುತ್ತಾರೆ.

ವಿಜೇತ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಮೇನೇಜಿಂಗ್ ಡೈರೆಕ್ಟರ್ ಪ್ರಭಾಕರ ಶೆಟ್ಟಿಯವರು, ಶಾಲಾ ಪ್ರಾಂಶುಪಾಲರಾದ ನಿತಿನ್ ಡಿ ಆಲ್ಮೇಡಾರವರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿಯವರು ಉಪಸ್ಥಿತರಿದ್ದರು.

Exit mobile version