Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ವಿದುಷಿ ಸುಜಾತ ಗುರವ್ ಹಿಂದುಸ್ಥಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸಂಗೀತ ಭಾರತಿ ಟ್ರಸ್ಟ್ ಕುಂದಾಪುರ ಮತ್ತು ಆರ್. ಕೆ. ಸಂಜೀವ ರಾವ್ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ ಖಂಬದಕೋಣೆ ಆಶ್ರಯದಲ್ಲಿ ಕುಂದಾಪುರದ ಹೋಟೆಲ್ ಪಾರಿಜಾತದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ವಿದುಷಿ ಸುಜಾತ ಗುರವ್ ಅವರಿಂದ ಹಿಂದುಸ್ಥಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮ ನಡೆಯಿತು. ತಬಲಾದಲ್ಲಿ ಟಿ. ರಂಗ ಪೈ ಮಣಿಪಾಲ, ಹಾರ‍್ಮೋನಿಯಂನಲ್ಲಿ ಶಶಿಕಿರಣ ಮಣಿಪಾಲ ಸಹಕರಿಸಿದ್ದರು.

ಪ್ರಮೀಳಾ ಕುಂದಾಪುರ ಮಾತನಾಡಿ ಶ್ರೀಮತಿ ಸುಶೀಲಾ ಸಂಜೀವ ರಾವ್, ಶ್ರೀಮತಿ ನಿರ್ಮಲಾ ಪ್ರಕಾಶ್ ರಾವ್ ಹಾಗೂ ಪ್ರಕಾಶ್ ರಾವ್ ಸ್ಮಾರಕವಾಗಿ ಸಂಗೀತ ಕಾರ್ಯಕ್ರಮ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇವೆ ಎಂದರು.

ಸಂಗೀತ ಭಾರತಿ ಕಾರ್ಯದರ್ಶಿ ಕೆ. ನಾರಾಯಣ ಕಲಾವಿದರನ್ನು ಪರಿಚಯಿಸಿದರು. ಸಂಗೀತ ಭಾರತಿ ಟ್ರಸ್ಟಿಗಳಾದ ಸೀತಾರಾಮ ನಕ್ಕತ್ತಾಯ, ಕೆ. ಶಾಂತಾರಾಮ ಪ್ರಭು, ಡಾ. ಎಚ್. ಆರ್. ಹೆಬ್ಬಾರ್ ಕಲಾವಿದರನ್ನು ಗೌರವಿಸಿದರು. ರೇಖಾ ಕಾರಂತ, ಸುಪ್ರಸನ್ನ ನಕ್ಕತ್ತಾಯ ಉಪಸ್ಥಿತರಿದ್ದರು. ಯು. ಎಸ್. ಶೆಣೈ ಕಾರ್ಯಕ್ರಮ ನಿರೂಪಿಸಿದರು.

Exit mobile version