Kundapra.com ಕುಂದಾಪ್ರ ಡಾಟ್ ಕಾಂ

ಕಾಂತಾರಕ್ಕೆ 50ರ ಸಂಭ್ರಮ: ದುಬೈನಲ್ಲಿ ರಿಷಬ್ ಶೆಟ್ಟಿ ಅವರೊಂದಿಗೆ ಸಂಭ್ರಮಿಸಿದ ಕನ್ನಡಿಗರು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ವಿಶ್ವದಾದ್ಯಂತ ಸದ್ದು ಮಾಡುತ್ತಾ, ಭಾರತೀಯ ಚಿತ್ರರಂಗದಲ್ಲಿ ಹತ್ತಾರು ದಾಖಲೆಗಳನ್ನು ಬರೆದ ಕರಾಳಿಯ ಮಣ್ಣಿನ ಕಥೆಯ ಎಳೆಯನ್ನು ಒಳಗೊಂಡ ‘ಕಾಂತಾರ’ ಸಿನಿಮಾ 50 ದಿನಗಳನ್ನು ಪೂರೈಸಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ದುಬೈ ಪ್ರವಾಸದಲ್ಲಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಪ್ರಗತಿ ರಿಷಬ್ ಶೆಟ್ಟಿ ಅವರು ದಂಪತಿಗಳು ಶುಕ್ರವಾರ ದುಬೈನ ಹಯತ್ ರೆಜೆನ್ಸಿ ಥಿಯೇಟರ್’ನಲ್ಲಿ ಅಭಿಮಾನಿಗಳೊಂದಿಗೆ ಸಿನಿಮಾ ವೀಕ್ಷಿಸಿ 50 ದಿನಗಳ ಗೆಲುವನ್ನು ಸಂಭ್ರಮಿಸಿದರು.

watch video

ಈ ವೇಳೆ ಫಾರ್ಚೂನ್ ಗ್ರೂಪ್ಸ್ ಪ್ರವರ್ತಕ, ನಮ್ಮ ಕುಂದಾಪ್ರ ಕನ್ನಡ ಬಳಗದ ಗೌರವಾಧ್ಯಕ್ಷರಾದ ವಕ್ವಾಡಿ ಪ್ರವೀಣ ಕುಮಾರ್ ಶೆಟ್ಟಿ, ಅಬುದಾಬಿ ಕನ್ನಡ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಉದ್ಯಮಿ ಹರೀಶ್ ಶೇರಿಗಾರ್, ಕನ್ನಡ ಪಾಠಶಾಲಾ ಮುಖ್ಯಸ್ಥರಾದ ಶಶಿಧರ್ ನಾಗರಾಜಪ್ಪ, ಯುಎಇನ ಓಎಂಜಿ ಸಿನಿಮಾ ವಿತರಕರಾದ ಸೆಂಥಿಲ್ ಹಾಗೂ ಈಶ್ವರಿದಾಸ್ ಶೆಟ್ಟಿ ದುಬೈ ಕನ್ನಡಿಗ ಮಲ್ಲಿಕಾರ್ಜುನ ಗೌಡ ಮೊದಲಾದವರು ಉಪಸ್ಥಿತರಿದ್ದರು.

ಥಿಯೇಟರಿನಲ್ಲಿ 300ಕ್ಕೂ ಹೆಚ್ಚು ಅಭಿಮಾನಿಗಳು ಹಾಗೂ ಹಿತೈಷಿಗಳೊಂದಿಗೆ ಸಂಪೂರ್ಣ ಸಿನಿಮಾ ವೀಕ್ಷಿಸಿದ ರಿಷಬ್ ಶೆಟ್ಟಿ ದಂಪತಿಗಳು, ಪ್ರತಿಯೊಬ್ಬರೊಂದಿಗೆ ಮಾತನಾಡಿ ಸಂತಸ ಹಂಚಿಕೊಂಡರು. ಈ ವೇಳೆ ಕಾಂತರ 50ರ ಸಂಭ್ರಮದ ಕೇಕ್ ಕತ್ತರಿಸಿ ಬಳಿಕ ರಿಷಬ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

Exit mobile version