ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕೊಗಿ೯ ಗ್ರಾಮ ಹೊಸಮಠದ ಕಂಬಳಗದ್ದೆ ಮನೆ ಸ್ವಾತಂತ್ರ್ಯ ಹೋರಾಟಗಾರ ಸಿ. ರಾಜಗೊಪಾಲ ಶೆಟ್ಟಿ ಅವರ ಮನೆಗೆ ನಾಮ ಫಲಕ ಅಳವಡಿಸಲಾಯಿತು.
ಸ್ವರಾಜ್ಯ75 ಸಂಘಟನೆಯ ನೇತ್ರತ್ವದಲ್ಲಿ ಜನ ಸೇವಾ ಟ್ರಸ್ಟ್ ಮೂಡುಗಿಳಿಯಾರು,ಉಸಿರು ಕೋಟ, ಹಸ್ತ ಚಿತ್ತ ಫೌಂಡೇಶನ್, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಘಟಕ, ರಾಷ್ಟ್ರೀಯ ಸೇವಾ ಯೋಜನೆ ಘಟಕ, ಕಾಳಾವರ ವರದರಾಜ ಶೆಟ್ಟಿ ಸರಕಾರಿ ಪ್ರಥಮ ದಜೆ೯ ಕಾಲೇಜು, ಗ್ರಾಮಸ್ಥರ ಸಹಕಾರದಿಂದ ಆಯೋಜಿಸಲಾದ ಹೊಂಬೆಳಕು ಕಾರ್ಯಕ್ರಮದಲ್ಲಿ 20ನೇ ಮನೆಗೆ ಸ್ವಾತಂತ್ರ್ಯ ಹೋರಾಟಗಾರರ ಮನೆ ನಾಮಫಲಕ ಅಳವಡಿಸಲಾಯಿತು.
ಕಾಳಾವರ ಎಂ. ವರದರಾಜ್ ಶೆಟ್ಟಿ ಸರಕಾರಿ ಪ್ರಥಮ ದಜೆ೯ ಕಾಲೇಜು ಪ್ರಾಂಶುಪಾಲರಾದ ಡಾ. ರಾಜೇಂದ್ರ ಎಸ್. ನಾಯಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಾಮಾಜಿಕ ಕಾಯ೯ಕತೆ೯ಯಾಗಿ ಗುರುತಿಸಿಕೊಂಡಿರುವ ಶಾರದಾ ಡೈಮಂಡ್ ನಾಮ ಫಲಕ ಅನಾವರಣಗೊಳಿಸಿದರು.
ಡಾ. ಉದಯ ಕುಮಾರ್ ಶೆಟ್ಟಿ ಅವರು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಕರಾವಳಿಗರ ಕೊಡುಗೆಯ ಬಗ್ಗೆ ವಿಚಾರ ಹಂಚಿಕೊಂಡರು.
ಕಾಯ೯ಕ್ರಮದ ಅಧ್ಯಕ್ಷತೆಯನ್ನು ಕೊಗಿ೯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೌರೀಶ್ ಹೆಗ್ಡೆ ವಹಿಸಿದ್ದರು. ಜಯಂತಿ ಶೆಟ್ಟಿ ಹಾಗೂ ದಿನಕರ್ ಆರ್. ಶೆಟ್ಟಿ ವೇದಿಕೆ ಹಂಚಿಕೊಂಡರು.
ಸೌಪಣಿ೯ಕಾ ಬಸ್ರೂರು ಅವರು ನೇತಾಜಿ ಸುಭಾಶ್ ಚಂದ್ರಭೋಷ್ ಹಾಗೂ ಭಗತ್ ಸಿಂಗ್ ಚಿತ್ರ ಬಿಡಿಸುವುದರ ಮೂಲಕ ಎಲ್ಲರ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ , ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಸ್ಥರಾದ ನಿಶ್ಚಿತ್ ಶೆಟ್ಟಿ ಬಳ್ಕೂರು,ಸಂಕೇತ್ ಶೆಟ್ಟಿ, ಸಚೀನ್ ಶೆಟ್ಟಿ, ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಯೋಜಕರು ಸಂತೋಷ್ ನಾಯ್ಕ, ಸುಚಿತ್ರ ಮತ್ತಿತ್ತರ ಗಣ್ಯರು ಉಪಸ್ಧಿತರಿದ್ದರು.
ಸ್ವರಾಜ್ಯ 75 ಕಾಯ೯ಕ್ರಮದ ಸಂಚಾಲಕ ಪ್ರದೀಪ ಕುಮಾರ್ ಬಸ್ರೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಸುಕೇಶ್ ಶೆಟ್ಟಿ ಕಾಯ೯ಕ್ರಮ ನಿರೂಪಿಸಿದರು. ಅನನ್ಯ ಧನ್ಯವಾದಗೈದರು.