Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ‘ಬಿ’ ಮಾನ್ಯತೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (NAAC) ನಡೆಸಿದ ಎರಡನೇ ಹಂತದ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು 2.50 ಅಂಕಗಳೊಂದಿಗೆ (CGPA) ” ಬಿ” ಮಾನ್ಯತೆ ಪಡೆದಿದೆ.

“ನ್ಯಾಕ್ ಮೊದಲ ಹಂತದ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಕಾಲೇಜು 2.05 CGPA ಅಂಕಗಳೊಂದಿಗೆ “ಬಿ ಮಾನ್ಯತೆ” ಪಡೆದಿದ್ದು, ಪ್ರಸ್ತುತ ಕಾಲೇಜಿನ ಕಾರ್ಯ ಕ್ರಮ ಚಟುವಟಿಕೆಗಳ ವಿಸ್ತರಣೆಯಿಂದಾಗಿ ಹೆಚ್ಚಿನ ಅಂಕಗಳೊಂದಿಗೆ (2.50 CGPA) “ನ್ಯಾಕ್ ಬಿ” ಮಾನ್ಯತೆ ದೊರೆತಿದೆ.

ಈ ಬಗ್ಗೆ ಮಾಹಿತಿ ನೀಡಿದ ಕಾಲೇಜು ಪ್ರಾಂಶುಪಾಲರಾದ ಡಾ. ರಘು ನಾಯ್ಕ್ ಅವರು, ನ್ಯಾಕ್ ‘ಬಿ’ ಮಾನ್ಯತೆ ದೊರೆಯುವಲ್ಲಿ ಸಹಕರಿಸಿದ ಐಕ್ಯೂಎಸಿ ಸಂಚಾಲಕರಾದ ಡಾ. ಅಶ್ವತ್ ದೇವರಾಯ್ ನಾಯ್ಕ್, ಸಹ ಸಂಚಾಲಕರಾದ ವಿನೋದ್ ನೀಲಪ್ಪ ಬಸುಪಟ್ಟದ, ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಶಾಸಕರಾದ ಬಿ. ಎಂ. ಸುಕುಮಾರ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿಯ ಸರ್ವ ಸದಸ್ಯರು, ಸಂಸದರಾದ ಬಿ. ವೈ. ರಾಘವೇಂದ್ರ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರವೀಣ್ ಚಂದ್ರ ಶೆಟ್ಟಿ ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು, ಪೋಷಕರು,ಕಾಲೇಜಿನ ಎಲ್ಲಾ ಉಪನ್ಯಾಸಕ ಮಿತ್ರರು, ಅತಿಥಿ ಉಪನ್ಯಾಸಕ ಮಿತ್ರರು, ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿ ಮಿತ್ರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

Exit mobile version