Kundapra.com ಕುಂದಾಪ್ರ ಡಾಟ್ ಕಾಂ

ಕಿರಿಮಂಜೇಶ್ವರ ಶುಭದಾ ಆಂಗ್ಲಮಾಧ್ಯಮ ಶಾಲೆ: ವಾರ್ಷಿಕ ಕ್ರೀಡೋತ್ಸವ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ತಾಲೂಕಿನ ಕಿರಿಮಂಜೇಶ್ವರದ ಶುಭದಾ ಆಂಗ್ಲಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡೋತ್ಸವ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು.

ಕ್ರೀಡಾಕೂಟವನ್ನು ಉದ್ಘಾಟಿಸಿದ ಗಂಗೊಳ್ಳಿ ಪೋಲಿಸ್ ಠಾಣೆಯ ಉಪನಿರೀಕ್ಷಕಿ ಜಯಶ್ರೀ ಹೆಚ್. ಮಾತನಾಡಿ ಕ್ರೀಡೆಯಲ್ಲಿ ಭಾಗವಹಿಸಿ ಗೆಲ್ಲುವುದು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ ಸೋಲು ಮತ್ತು ಗೆಲುವನ್ನು ಸಮಾನಾಗಿ ಸ್ವೀಕರಿಸಿದಾಗ ಮಾತ್ರ ವ್ಯಕ್ತಿತ್ವ ವಿಕಸನಗೊಳ್ಳುವುದು ಎಂದು ಮಕ್ಕಳ ಉತ್ಸಾಹ ಮತ್ತು ಸ್ವರ್ಧಾ ಮನೋಭಾವವನ್ನು ಪ್ರಶಂಸಿದರು.

ಧ್ವಜಾರೋಹಣಗೈದು ವಂದನೆ ಸ್ವೀಕರಿಸಿದ ಬೈಂದೂರು ಪೋಲಿಸ್ ಠಾಣೆಯ ಉಪನಿರೀಕ್ಷಕ ನಿರಂಜನ್ ಗೌಡ ಕ್ರೀಡೆ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕರಿಯಾಗುತ್ತದೆ ಸದೃಢ ದೇಹದಲ್ಲಿ ಸಬಲ iನಸ್ಸು ಇರುತ್ತದೆ ಕ್ರೀಡೆ ವ್ಯಾಯಾಮದೊಂದಿಗೆ ಜೀವನೋತ್ಸಾಹ ನೀಡುತ್ತದೆ ಎಂದು ಸಂಸ್ಥೆಯ ಕ್ರೀಡಾಕೂಟದ ಅಚ್ಚುಕಟ್ಟನ ಆಯೋಜನೆಯನ್ನು ಶ್ಲಾಘಿಸಿದರು.

ಸಂಸ್ಥೆಯ ಹಿತೈಷಿ ಪುಂಡಲಿಕ ನಾಯಕ ಕ್ರೀಡಾ ಕೂಟಕ್ಕೆ ಸಾಂಕೇತಿವಾಗಿ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶುಭದಾ ಶಾಲೆಯ ಪ್ರಾಂಶುಪಾಲರಾದ ರವಿದಾಸ್ ಶಟ್ಟಿ ಮಾತನಾಡಿ ಶಿಕ್ಷಣದ ಜೊತೆಜೊತೆಗೆ ಕ್ರೀಡೆಯಲ್ಲೂ ನಮ್ಮನ್ನು ನಾವು ತೊಡಗಿಸಿಕೊಂಡರೆ ಮನಸ್ಸಿನ ಏಕಾಗ್ರತೆಯೊಂದಿಗೆ ಅದ್ಭುತ ಯಶಸ್ಸುಗಳಿಸಿ ಸದಾ ಕ್ರೀಯಾಶೀಲರಾಗಿರಲು ಸಾಧ್ಯ ಎಂದರು ಆಡಳಿತ ಮಂಡಳಿಯ ಸದಸ್ಯ ಮಂಜು ಪೂಜಾರಿ ಹಿರಿಯರಾದ ಅಬ್ದುಲ್ ರಜಾಕ್ ವಿದ್ಯಾರ್ಥಿ ನಾಯಕಿ ಯಶಸ್ವಿ ಕ್ರೀಡಾ ನಾಯಕ ವಿನ್ಯಾಸ ಬೋಧಕ ಮತ್ತು ಬೋಧಕೇತರ ಸಿಬ್ಬಂಧಿ ಉಪಸ್ಥಿತರಿದ್ದರು.

ಶಿಕ್ಷಕ ರಾಘವೆಂದ್ರ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ರತ್ನಕುಮಾರ ಕಾರ್ಯಕ್ರಮ ಸಂಘಟಿಸಿದರು. ಸಾನಿಯ ಸ್ವಾಗತಿಸಿ ಕುಮಾರಿ ಶ್ರಾವ್ಯ ನಿರೂಪಿಸಿ ಸಪ್ತಮಿ ವಂದಿಸಿದರು ವಿವಿಧ ಸ್ವರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು .

Exit mobile version