Kundapra.com ಕುಂದಾಪ್ರ ಡಾಟ್ ಕಾಂ

ತೆಕ್ಕಟ್ಟೆ ಶ್ರೀ ಮಹಾಲಿಂಗೇಶ್ವರ ಸಾಂಸ್ಕೃತಿಕ ವೇದಿಕೆಯಿಂದ ದೇವಳಕ್ಕೆ ದೀಪಗಳ ಸ್ಟಾಂಡ್ ಹಸ್ತಾಂತರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಶುದ್ಧ ಮನಸ್ಸಿನಿಂದ ಭಗವಂತನ ಸೇವೆ ಮಾಡಿದಾಗ ಮನಸ್ಸಿನ ಅಂತರಂಗ ಶುದ್ಧಿಯಾಗುತ್ತದೆ. ಕೇವಲ ನಮ್ಮ ಅಂತರಂಗ ಶುದ್ಧಿಯಾದರೇ ಸಾಲದು ಎಂಬ ನೆಲೆಯಲ್ಲಿ ಭಕ್ತರ ಅನುಕೂಲಕ್ಕಾಗಿ ಮಹಾಲಿಂಗೇಶ್ವರ ಸಾಂಸ್ಕೃತಿಕ ವೇದಿಕೆಯ ಸದಸ್ಯರು ಮಾಡಿದ ಸಮಾಜ ಸೇವೆಯ ಕಾರ್ಯ ಸಮಾಜಕ್ಕೊಂದು ಮಾದರಿಯಾಗಿದೆ ಎಂದು ಧಾಮಿ೯ಕ ಮುಖಂಡ, ತೆಕ್ಕಟ್ಟೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಹೇಳಿದರು.

ತೆಕ್ಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭಕ್ತಾಧಿಗಳಿಗೆ ದೀಪ ಬೆಳಗಿಸಲು ಅನುಕೂಲವಾಗುವಂತೆ ತೆಕ್ಕಟ್ಟೆ ಶ್ರೀ ಮಹಾಲಿಂಗೇಶ್ವರ ಸಾಂಸ್ಕೃತಿಕ ವೇದಿಕೆ ಇವರ ನೇತೃತ್ವದಲ್ಲಿ ಕೊಡುಗೆಯಾಗಿ ನೀಡಿದ ದೀಪಗಳ ಸ್ಟಾಂಡ್ ನಲ್ಲಿ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ದೇವಳಕ್ಕೆ ಹಸ್ತಾಂತರ ಮಾಡಿ ಅವರು ಮಾತನಾಡಿದರು.

ದೇವಳದ ಉತ್ಸವ ಸಮಿತಿ ಅಧ್ಯಕ್ಷ ರಾಮಮೂತಿ೯ ಪುರಾಣಿಕ್, ದೇವಳದ ಅರ್ಚಕ ಜನಾ೯ಧನ್ ಐತಾಳ್, ಉದ್ಯಮಿ ಸಂತೋಷ ನಾಯ್ಕ್ ತೆಕ್ಕಟ್ಟೆ, ಕಿರಣ್ ಪೂಜಾರಿ, ತೆಕ್ಕಟ್ಟೆ ಶ್ರೀ ಮಹಾಲಿಂಗೇಶ್ವರ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಆನಂದ ಕಾಂಚನ್, ಸುಧೀಂದ್ರ ಗಾಣಿಗ, ವಿಶ್ವನಾಥ್ ಆಚಾರ್, ವಿನೋದ ದೇವಾಡಿಗ, ಶ್ರೀನಾಥ್ ಶೆಟ್ಟಿ, ವಿಜಯ ಆಚಾರ್, ವಿನೋದ್ ಬಂಗೇರ, ಅರುಣ್ ಕುಮಾರ್ ಶೆಟ್ಟಿ, ಶಂಕರ್ ದೇವಾಡಿಗ ಮಣಿಕಂಠ, ಸುಧಾಕರ್ ಶೆಟ್ಟಿ, ಶ್ರೀಧರ್ ಆಚಾರ್, ಪ್ರಕಾಶ್ ಆಚಾರ್, ಮಹೇಶ್ ಜಡ್ಡಿನಮನೆ ಮತ್ತಿತರರು ಉಪಸ್ಥಿತರಿದ್ದರು.

Exit mobile version