Kundapra.com ಕುಂದಾಪ್ರ ಡಾಟ್ ಕಾಂ

ಶರೀರ ರೋಮಾಂಚನ ಸ್ಥಿತಿಯೇ ಕುಂಡಲಿನಿ ಜಾಗೃತಿ

ಕುಂದಾಪುರ: ವ್ಯಾಯಾಮ ಆಸನಗಳಿಗಿಂತ ಮುಂದುವರಿದು ದೇಹ, ಮನಸ್ಸು ಮತ್ತು ಉಸಿರಿನ ಮೇಲೆ ನಿಯಂತ್ರಣ ಸಾಧಿಸುವುದೇ ಯೋಗ, ಮನಸ್ಸನ್ನು ಒಂದೆಡೆ ತಡೆಗಟ್ಟಿ ಅಂತರಾತ್ಮದ ಕಡೆಗೆ ತಿರುಗಿಸಿ ಆತ್ಮಾಭಿಮುಖವಾಗಿ ಶರೀರ ರೋಮಾಂಚನ ಸ್ಥಿತಿಯತ್ತ ಸಾಗುವುದೇ ಕುಂಡಲಿನಿ ಜಾಗೃತಿ ಎಂದು ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಧಾಕರ ವಕ್ವಾಡಿ ಹೇಳಿದರು.

ಅವರು ಶಂಕರನಾರಾಯಣ ಮಾವಿನಕೊಡ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ.ಪೂ ಶಿಕ್ಷಣ ಇಲಾಖೆ ಬೆಂಗಳೂರು, ಶ್ರೀ ಮೂಕಾಂಬಿಕ ಪ.ಪೂ.ಕಾಲೇಜು ಕೊಲ್ಲೂರು ಇವರ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ‘ಕುಂಡಲಿನಿ ಯೋಗದಿಂದ ವ್ಯಕ್ತಿತ್ವ ವಿಕಸನ’ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದರು.

ನಿವೃತ್ತ ಮುಖ್ಯ ಶಿಕ್ಷಕ ಮಂಜಯ್ಯ ಹೆಗ್ಡೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಅರುಣ ಪ್ರಕಾಶ ಶೆಟ್ಟಿ ಮಾತನಾಡಿ, ಸದೃಢವಾದ ದೇಹದಲ್ಲಿ ಉತ್ತಮ ಮನಸ್ಸನ್ನು ಸೇರಿದಾಗ ಮನೋಬಲ ಸಾಧಿಸಲು ಸಾದ್ಯ ಎಂದರು.

ಅಂಗನವಾಡಿ ಶಿಕ್ಷಕಿ ಸುಜಾತ, ಆಶಾ ಕಾರ್ಯರ್ತೆ ವಸಂತಿ, ಶಿಬಿರಾಧಿಕಾರಿ ನಾಗರಾಜ ಅಡಿಗ, ವಾಸುದೇವ ಉಡುಪ ಉಪಸ್ಥಿತರಿದ್ದರು. ಅಕ್ಷಯ ಹೆಗ್ಡೆ ಸ್ವಾಗತಿಸಿದರು. ಗಣೇಶ್ ಕೊಠಾರಿ ಕಾರ್ಯಕ್ರಮ ನಿರೂಪಿಸಿದರು. ರಚನಾ ವಂದಿಸಿದರು.

Exit mobile version