Kundapra.com ಕುಂದಾಪ್ರ ಡಾಟ್ ಕಾಂ

ರೋಟರಿ ವಲಯ 1ರ ಕ್ರೀಡಾಕೂಟ ‘ಆಟೋಟ – 2022’: ರೋಟರಿ ಕುಂದಾಪುರಕ್ಕೆ ಸಮಗ್ರ ಪ್ರಶಸ್ತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ರೋಟರಿ ಕ್ಲಬ್ ಕುಂದಾಪುರದ ಆತಿಥ್ಯದಲ್ಲಿ ರೋಟರಿ ವಲಯ 1ರ ಕ್ರೀಡಾ ಸ್ಪರ್ಧೆಗಳು ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆಯಿತು.

ಭಾರತದ ವಿಶೇಷ ಚೇತನ ಕ್ರಿಕೆಟ್ ತಂಡದ ಪ್ರಮುಖ ಎಸೆತಗಾರ ಪ್ರಥ್ವಿರಾಜ್ ಶೆಟ್ಟಿ ಕ್ರೀಡಾಕೂಟದ ಉದ್ಘಾಟನೆ ಮಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರ ರೋಟರಿ ಕ್ಲಬ್ ಅಧ್ಯಕ್ಷ ವೆಂಕಟೇಶ ನಾವುಂದ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಾಂಸ್ಕೃತಿಕ ಸಭಾಪತಿ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ, ಜಿಲ್ಲಾ ಮೆಂಬರ್ಸಿಪ್ ಚೇರ್ಮನ್ ಕೆ.ಕೆ.ಕಾಂಚನ್, ವಲಯ 1ರ ಅಸಿಸ್ಟೆಂಟ್ ಗವರ್ನರ್ ಡಾ. ಉಮೇಶ್ ಪುತ್ರನ್, ವಲಯ ಟ್ರೈನರ್ ರವಿರಾಜ್ ಶೆಟ್ಟಿ, ವಲಯ ಲೆಪ್ಟಿನೆಂಟ್ ಡಾ. ಪೂರ್ಣೀಮ ಭವಾನಿ ಶಂಕರ್, ಡಾ. ಸಂದೀಪ್ ಕುಮಾರ್ ಶೆಟ್ಟಿ, ವಲಯ ಕ್ರೀಡಾ ಸಂಯೋಜಕ ಪ್ರದೀಪ್ ವಾಜ್ ಹಾಗೂ ಕುಂದಾಪುರ ರೋಟರಿ ಕ್ಲಬ್ ಕ್ರೀಡಾ ಸಭಾಪತಿ ರಂಜಿತ್ ಶೆಟ್ಟಿ ಉಪಸ್ಥಿತರಿದ್ದರು.

ರೋಟರಿ ಕ್ಲಬ್ ಕುಂದಾಪುರ ಪ್ರಥಮ ಸ್ಥಾನ ಗಳಿಸುವುದರೊಂದಿಗೆ ಸದಸ್ಯರು ಭಾಗವಹಿಸಿ ಕ್ರೀಡಾ ಸ್ಪರ್ಧೆಗಳಲ್ಲಿ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ರೋಟರಿ ಕುಂದಾಪುರದ ಅಧ್ಯಕ್ಷರಾದ ವೆಂಕಟೇಶ್ ನಾವುಂದ ನೇತ್ರತ್ವದಲ್ಲಿ ಕಾರ್ಯದರ್ಶಿ ರೊ ನಾಗರಾಜ್ ಶೆಟ್ಟಿ, ಆನ್ ಅಧ್ಯಕ್ಷೆ ಸ್ಮಿತಾ ವೆಂಕಟೇಶ್ ಸಹಕಾರ ಹಾಗೂ ಕುಂದಾಪುರ ರೋಟರಿ ಕ್ಲಬ್ ಕ್ರೀಡಾ ಸಭಾಪತಿ ರಂಜಿತ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ರೋಟರಿ ಕುಂದಾಪುರ ಸ್ಪರ್ಧೆಯಲ್ಲಿ ಭಾಗವಹಿಸಿತ್ತು.

ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಚಕ್ರವರ್ತಿ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಹಾಗೂ ರೋಟರಿ ಕುಂದಾಪುರದ ಹಿರಿಯ ಸದಸ್ಯ ಶ್ರೀಪಾದ್ ಉಪಾಧ್ಯಾಯ, ಅಸಿಸ್ಟೆಂಟ್ ಗವರ್ನರ್ ಡಾ.ಉಮೇಶ್ ಪುತ್ರನ್, ವಲಯ ಸೇನಾನಿ ಡಾ. ಪ್ರವೀಣ್ ಶೆಟ್ಟಿ ಇನ್ನಿತರ ಪ್ರಮುಖ ರೋಟರಿ ಗಣ್ಯರು ಉಪಸ್ಥಿತರಿದ್ದರು. ಅಧ್ಯಕ್ಷ ವೆಂಕಟೇಶ ನಾವುಂದ ಸ್ವಾಗತಿಸಿದರು ಹಾಗೂ ಕಾರ್ಯದರ್ಶಿ ನಾಗರಾಜ ಶೆಟ್ಟಿ ವಂದಿಸಿದರು.

Exit mobile version