Kundapra.com ಕುಂದಾಪ್ರ ಡಾಟ್ ಕಾಂ

’ಅಂಗೈಯಲ್ಲಿ ಆರೋಗ್ಯ – ಅಕ್ಯೂಪ್ರೆಶರ್’ ಮಾಹಿತಿ ಶಿಬಿರ

ಗಂಗೊಳ್ಳಿ: ನಮ್ಮ ಅಂಗೈಯಲ್ಲಿಯೇ ನಮ್ಮ ಆರೋಗ್ಯವಿದೆ. ಪ್ರತಿನಿತ್ಯ ನಮ್ಮ ಹಸ್ತ ಮತ್ತು ಪಾದಗಳನ್ನು ನಿರ್ದಿಷ್ಟ ರೀತಿಯಲ್ಲಿ ಸ್ಪರ್ಶಿಸುವ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ. ನಿಯಮಿತ ಆಹಾರ ಪದ್ಧತಿ ಹಾಗೂ ಅಕ್ಯೂಪ್ರೆಶರ್ ಪದ್ಧತಿ ನಮ್ಮ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಲು ಸಹಕಾರಿಯಾಗುತ್ತದೆ. ಪ್ರತಿನಿತ್ಯ ಇದನ್ನು ಮಾಡುವುದರಿಂದ ನಮ್ಮ ಆರೋಗ್ಯದಲ್ಲಿ ಮತ್ತು ದೈನಂದಿನ ಚಟುವಟಿಕೆಗಳಲ್ಲಿ ಸಾಕಷ್ಟು ಬದಲಾವಣೆ ಕಂಡುಕೊಳ್ಳಲು ಸಾಧ್ಯವಿದೆ ಎಂದು ನಾರಾಯಣ ಆಚಾರ್ ಸಾಲಿಗ್ರಾಮ ಹೇಳಿದರು.

ಅವರು ಗಂಗೊಳ್ಳಿಯ ಸೇವಾಸಂಗಮ ನಿವೇದಿತಾ ಶಿಶು ಮಂದಿರದ ಆಶ್ರಯದಲ್ಲಿ ಶಿಶು ಮಂದಿರದ ನಗರ ಜಯವಂತ ನಾಯಕ್ ಸಭಾಭವನದಲ್ಲಿ ಜರಗಿದ ಮಾತೆಯ ದಸರಾ ಶಿಬಿರದಲ್ಲಿ ’ಅಂಗೈಯಲ್ಲಿ ಆರೋಗ್ಯ – ಅಕ್ಯೂಪ್ರೆಶರ್’ ಕುರಿತ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಶು ಮಂದಿರದ ಅಧ್ಯಕ್ಷ ಶ್ರೀನಿವಾಸ ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಶು ಮಂದಿರದ ಸಂಚಾಲಕ ಡಾ.ಕಾಶೀನಾಥ ಪೈ, ಕಾರ್ಯದರ್ಶಿ ಸವಿತಾ ಯು.ದೇವಾಡಿಗ, ಶಿಶು ಮಂದಿರದ ಸದಸ್ಯರಾದ ಬಿ.ರಾಘವೇಂದ್ರ ಪೈ, ಉಷಾ ಪಿ.ಮಡಿವಾಳ, ವಸಂತಿ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು. ಮಾತಾಜಿ ಶೈಲಾ ಸ್ವಾಗತಿಸಿದರು. ಮಾತಾಜಿ ಸುಮನಾ ಕಾರ್ಯಕ್ರಮ ನಿರೂಪಿಸಿದರು.

Exit mobile version