Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಪ.ಪೂ. ವಿದ್ಯಾರ್ಥಿಗಳ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟ ಉದ್ಘಾಟನೆ, ಆಕರ್ಷಕ ಪುರಮೆರವಣಿಗೆ

ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನಲ್ಲಿ ಯಶಸ್ವಿ ವಾಲಿಬಾಲ್ ಪಂದ್ಯಾಟ ಆಯೋಜನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಡಿ.8:
ತಾಲೂಕಿನ ಸುಣ್ಣಾರಿಯ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನಲ್ಲಿ ಪ.ಪೂ. ಶಿಕ್ಷಣ ಇಲಾಖೆ, ಸುಣ್ಣಾರಿ ಸುಜ್ಞಾನ ಎಜುಕೇಶನ್ ಟ್ರಸ್ಟ್ ಹಾಗೂ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಡಿ.8 ರಿಂದ ಡಿ.10ರ ತನಕ ನಡೆಯಲಿರುವ ಪ.ಪೂ. ವಿದ್ಯಾರ್ಥಿಗಳ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟ ಗುರುವಾರ ಸಂಜೆ ಉದ್ಘಾಟನೆಗೊಂಡಿತು.

Watch Video

ಉಡುಪಿಯ ಶ್ರೀ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಗುರುವಾರ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಆಶೀರ್ವಚನ ನೀಡಿ, ವಾಲಿಬಾಲ್ ಕ್ರೀಡೆಯು ಆಟದ ಜತೆ ಬದುಕಿನ ಪಾಠವನ್ನು ಕಲಿಸುತ್ತದೆ. ಬದುಕಿನಲ್ಲಿ ಬರುವ ಹೊಡೆತಗಳಿಗೆ ಕುಗ್ಗದೆ, ಮುಂದುವರೆಯುವುದರಿಂದ ಜೀವನೋತ್ಸಾಹವದ ಜತೆ ಯಶಸ್ಸು ದೊರಕುತ್ತದೆ ಎಂದು ಹೇಳಿದರು.

ಪಥ ಸಂಚಲನದ ಗೌರವ ರಕ್ಷೆ ಸ್ವೀಕರಿಸಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ ಶಿಕ್ಷಣದಲ್ಲಿ ಪಠ್ಯದ ಜತೆಗೆ ಕ್ರೀಡೆಯೂ ಅಗತ್ಯ. ಕ್ರೀಡಾಪಟುಗಳಿಗೆ ನೀಡುವಂತಹ ಪ್ರೋತ್ಸಾಹ ಧನ ಸಹಿತ ಮೂಲ ಸೌಕರ್ಯಗಳನ್ನು ಹೆಚ್ಚಿಸುವ ಮೂಲಕ ಸರಕಾರ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡಬೇಕು ಎಂದು ಹೇಳಿದರು.

ಮಾಜಿ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ವಿದೇಶದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಇರುವ ಪ್ರೋತ್ಸಾಹ ಹಾಗೂ ಅನುದಾನ ನಮ್ಮ ದೇಶದಲ್ಲಿ ಇಲ್ಲ. ಹಾಗಾಗಿ ದೇಶದಲ್ಲಿ ಕ್ರೀಡೆ ಅತ್ಯಂತ ಕಡೆಗಣಿಸಲ್ಪಟ್ಟ ಕ್ಷೇತ್ರವಾಗಿದೆ. ಶಿಕ್ಷಣ ಇಲಾಖೆಯು ಕ್ರೀಡೆಗೆ ಒತ್ತು ಕೊಟ್ಟಲ್ಲಿ ಮಾತ್ರ ದೇಶದ ಕ್ರೀಡಾ ಕ್ಷೇತ್ರ ಉತ್ತುಂಗಕ್ಕೇರುವುದು ಎಂದರು.

ರಾಷ್ಟ್ರೀಯ ವಾಲಿಬಾಲ್ ಪಟು ಹೆಮ್ಮಾಡಿಯ ರೈಸನ್ ಬೆನೆಟ್ ರೆಬೆಲ್ಲೋ ಅವರನ್ನು ಸಮ್ಮಾನಿಸಲಾಯಿತು. ಕ್ರೀಡಾ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಸ್ರೂರು ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಉದ್ಯಮಿಗಳಾದ ಉದ್ಯಮಿಗಳಾದ ಎಂ. ಮಹೇಶ್ ಹೆಗ್ಡೆ, ಎಂ. ದಿನೇಶ್ ಹೆಗ್ಡೆ, ಪ.ಪೂ. ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಾರುತಿ, ಸೌಕೂರು ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್. ಮಂಜಯ್ಯ ಶೆಟ್ಟಿ ಸಬ್ಲಾಡಿ, ಹೊಂಬಾಡಿ-ಮಂಡಾಡಿ ಗ್ರಾ.ಪಂ. ಅಧ್ಯಕ್ಷ ಸತೀಶ್ ಮಡಿವಾಳ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಜೀವನ್ ಶೆಟ್ಟಿ, ಪಂದ್ಯಾಟದ ರಾಜ್ಯ ವೀಕ್ಷಕ ಮಹಾಂತೇಶ, ಕ್ರೀಡಾ ನಿರ್ದೇಶಕ ದಿನೇಶ್ ಶೆಟ್ಟಿ, ಉದ್ಯಮಿಗಳಾದ ಜಯಶೀಲ ಶೆಟ್ಟಿ ಘಟಪ್ರಭ, ಯುವ ಮೆರಿಡಿಯನ್ ಉದಯ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಎಕ್ಸಲೆಂಟ್ ಪ.ಪೂ. ಕಾಲೇಜು ಪ್ರಾಂಶುಪಾಲ ಡಾ| ರಮೇಶ ಶೆಟ್ಟಿ ಪ್ರಸ್ತಾವಿಸಿದರು. ಸುಜ್ಞಾನ್ ಟ್ರಸ್ಟ್ ಕೋಶಾಧಿಕಾರಿ ಭರತ್ ಶೆಟ್ಟಿ ಸ್ವಾಗತಿಸಿ, ಟ್ರಸ್ಟ್ ಕಾರ್ಯದರ್ಶಿ ಪ್ರತಾಪ್ಚಂದ್ರ ಶೆಟ್ಟಿ ವಂದಿಸಿದರು. ರಾಜ್ಯ ಮಟ್ಟದ ವಾಲಿಬಾಲ್ ಆಟಗಾರ ಅನುಜ್ ಕುಮಾರ್ ಪ್ರತಿಜ್ಞಾ ವಿಧಿ ಬೋಧಿಸಿ, ಶಿಕ್ಷಕ ಸತೀಶ್ ಶೆಟ್ಟಿ ಚಿತ್ರಪಾಡಿ ನಿರೂಪಿಸಿದರು.

ಆಕರ್ಷಕ ಪುರಮೆರವಣಿಗೆ:
ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟ ಉದ್ಘಾಟನೆಗೂ ಮುನ್ನ ಆಕರ್ಷಕ ಪುರಮೆರವಣಿಗೆ ಜರುಗಿತು. ರಾಜ್ಯದ 31 ಜಿಲ್ಲೆಗಳ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಪುರಮೆರವಣಿಗೆಯಲ್ಲಿ ಭಾಗವಹಿಸಿದ್ದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಉಮೇಶ್ ಪುತ್ರನ್ ಮೆರವಣಿಗೆಯ ನಾಮಫಲಕ ಅನಾವರಣಗೊಳಿಸಿದರು. ಪ.ಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಾವುಟ ಹಾರಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಎಂ.ಎಂ. ಹೆಗ್ಡೆ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಎಂ. ಮಹೇಶ್ ಹೆಗ್ಡೆ, ಎಕ್ಸಲೆಂಟ್ ಪ.ಪೂ. ಕಾಲೇಜು ಪ್ರಾಂಶುಪಾಲ ಡಾ| ರಮೇಶ ಶೆಟ್ಟಿ, ಸುಜ್ಞಾನ್ ಟ್ರಸ್ಟ್ ಕೋಶಾಧಿಕಾರಿ ಭರತ್ ಶೆಟ್ಟಿ, ಟ್ರಸ್ಟ್ ಕಾರ್ಯದರ್ಶಿ ಪ್ರತಾಪ್ಚಂದ್ರ ಶೆಟ್ಟಿ, ವಿವಿಧ ಕಾಲೇಜುಗಳ ಉಪನ್ಯಾಸರುಗಳು, ಮೊದಲಾದವರು ಉಪಸ್ಥಿತರಿದ್ದರು.

ಘಟೋತ್ಕಚ, ಗೋರಿಲ್ಲಾ, ಬೌನ್ಸರ್, ಹೊನ್ನಾವರದ ಬ್ಯಾಂಡ್ ಸೆಟ್, ಕೋಡಿ ಗೊಂಬೆ, ಎಸ್ಸಿಸಿ ಸೇವಾದಳ, ಯಕ್ಷಗಾನ ವೇಷ, ಕೇರಳ ಚಂಡೆ, ತಟ್ಟಿರಾಯ, ೆಕ್ಸಲೆಂಟ್ ವಿದ್ಯಾರ್ಥಿಗಳ ಹೂಗಳ ಪ್ರದರ್ಶನ, ಹುಲಿವೇಷ, ಕುಂದಾಪುರ ಕೊರಗರ ಡೋಲು. ಸ್ಕೌಟ್ & ಗೌಡ್ಸ್ ಮೆರವಣಿಗೆಯ ಮೆರಗು ಹೆಚ್ಚಿಸಿದವು.

Exit mobile version