Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ನ್ಯಾಯಾಲಯದಲ್ಲಿ ವಕೀಲರ ದಿನಾಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ವಕೀಲರ ಸಂಘ ಬೈಂದೂರು ಇದರ ನೇತೃತ್ವದಲ್ಲಿ ಬೈಂದೂರು ನ್ಯಾಯಾಲಯದಲ್ಲಿ ವಕೀಲರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಬೈಂದೂರು ಸಂಚಾರಿ ಪೀಠದ ನ್ಯಾಯಾಧೀಶರಾದ ಧನೇಶ ಮುಗಳಿ ಇವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಸಮಾಜದಲ್ಲಿ ವಕೀಲರ ಪ್ರಾಮುಖ್ಯತೆ ಬಗ್ಗೆ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಸರಕಾರಿ ಉಪ ಅಭಿಯೋಜಕರಾದ ಇಂದಿರಾ ನಾಯಕ್ ಮತ್ತು ಹಿರಿಯ ವಕೀಲರಾದ ಜೇ.ಎನ್ ಸಭಾಸ್ಟಿನ್ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಬೈಂದೂರು ವಕೀಲರ ಸಂಘದ ಅಧ್ಯಕ್ಷರಾದ ಮೋಬಿ ಪಿ.ಸಿ ವಹಿಸಿದ್ದರು. ಕಾರ್ಯದರ್ಶಿ ಪ್ರಶಾಂತ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷರಾದ ಚಿಕ್ಕಯ್ಯ ಶೆಟ್ಟಿ ಧನ್ಯವಾದ ಸಮರ್ಪಣೆ ಮಾಡಿದರು. ಈ ಸಮಯದಲ್ಲಿ ಎಲ್ಲಾ ವಕೀಲ ಮಿತ್ರರು, ಹಾಗೂ ಸಾರ್ವಜನಿಕರು, ನ್ಯಾಯಾಲಯದ ಸಿಬ್ಬಂದಿ ವರ್ಗ ಮತ್ತು ಪೋಲಿಸ್ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Exit mobile version