Kundapra.com ಕುಂದಾಪ್ರ ಡಾಟ್ ಕಾಂ

ವಕೀಲರ ರಕ್ಷಣಾ ಕಾಯಿದೆ ಜಾರಿಗೆ ಒತ್ತಾಯಿಸಿ ಬೈಂದೂರು ವಕೀಲರ ಜಾಥಾ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ವಕೀಲರ ರಕ್ಷಣಾ ಕಾಯಿದೆಯನ್ನು ಬೆಳಗಾವಿಯ ಅಧಿವೇಶನದಲ್ಲಿ ಜಾರಿಗೆ ತರುವಂತೆ ಒತ್ತಾಯಿಸಿ ಬೈಂದೂರು ವಕೀಲರ ಸಂಘವು ಬೈಂದೂರು ನ್ಯಾಯಾಲಯದಿಂದ ತಹಶೀಲ್ದಾರ ಅವರ ಕಚೇರಿಯ ವರೆಗೆ ಜಾಥ ನಡೆಸಿ, ಬೈಂದೂರು ತಹಶೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬೈಂದೂರು ವಕೀಲ ಸಂಘದ ಅಧ್ಯಕ್ಷರಾದ ಮೋಬಿ ಪಿ.ಸಿ, ಕಾರ್ಯದರ್ಶಿ ಪ್ರಶಾಂತ್ ಪೂಜಾರಿ, ಮಾಜಿ ಅಧ್ಯಕ್ಷರಾದ ದೇವಿದಾಸ್ ಮೇಸ್ತ, ಲಿಂಗಪ್ಪ ಆರ್ ಮೇಸ್ತ, ಮೊಹಮ್ಮದ್ ಇಲಿಯಾಸ್ ಹಾಗೂ ಬೈಂದೂರು ವಕೀಲ ಸಂಘದ ಸದಸ್ಯರು ಪಾಲ್ಗೊಂಡಿದ್ದರು.

ಮನವಿ ಸ್ವೀಕರಿಸಿದ ಶ್ರೀಕಾಂತ್ ಹೆಗ್ಡೆ ಮಾತನಾಡಿ ತಕ್ಷಣವೇ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.

Exit mobile version