Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ರಾಷ್ತ್ರೀಯ ಸೇವಾ ಯೋಜನೆ ಚಟುವಟಿಕೆಗಳ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು ಇಲ್ಲಿ 2022-23ನೇ ಸಾಲಿನ ರಾಷ್ತ್ರೀಯ ಸೇವಾ ಯೋಜನೆಯ ಉದ್ಘಾಟನಾ ಕಾರ್ಯಕ್ರಮ ನೇರವೇರಿತು.

ಬೈಂದೂರಿನ ವಲಯ ಅರಣ್ಯಾಧಿಕಾರಿಗಳಾದ ಸಿದ್ದೇಶ್ವರ ಕೆ. ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ, ಪರಿಸರವನ್ನು ಉಳಿಸುವಲ್ಲಿ ಮತ್ತು ಉತ್ತಮ ಪರಿಸರವನ್ನು ಬೆಳೆಸುವಲ್ಲಿ ವಿದ್ಯಾರ್ಥಿಗಳ ಪಾತ್ರ, ಪ್ರತಿಯೊಬ್ಬ ವಿದ್ಯಾರ್ಥಿಯು ಒಂದೊಂದು ಗಿಡವನ್ನು ನೆಡುವ ಸಂಕಲ್ಪ, ಬೇಸಿಗೆ ಅವಧಿಯಲ್ಲಿ ಪಕ್ಷಿಗಳಿಗೆ ನೀರನ್ನು ನೀಡುವುದು ಹೀಗೆ ಹಲವು ವಿಚಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷರಾದ ಪ್ರಾಂಶುಪಾಲರಾದ ಡಾ. ರಘು ನಾಯ್ಕ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿದ್ದ ತಮ್ಮ ಹಿಂದಿನ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ರಾಷ್ಟ್ರೀಯ ಸೇವಾ ಯೋಜನೆಯ ಘಟಕ ೧1ರ ಯೋಜನಾಧಿಕಾರಿ ನಾಗರಾಜ ಶೆಟ್ಟಿ, ಪ್ರಾಧ್ಯಾಪಕರಾದ ಮೋಹನಕುಮಾರ, ಶ್ರೀ ಹೆಚ್ ಜೆ, ಸವಿತಾ ಎಸ್, ಮಣಿಕಂಠ ಉಪಸ್ಥಿತರಿದ್ದರು.

ಮನಿಷಾ ದ್ವಿತೀಯ ಬಿ ಬಿ ಎ ಕಾರ್ಯಕ್ರಮದ ನಿರೂಪಣೆ, x ಪಲ್ಲವಿ ಮರಾಠಿ ದ್ವಿತೀಯ ಬಿ ಬಿ ಎ ಪ್ರಾರ್ಥನೆ, ಕು ಸೌಜನ್ಯ ಶೆಟ್ಟಿ ಪ್ರಥಮ ಬಿ ಕಾಂ ಸ್ವಾಗತ, ರೂಪ ದ್ವಿತೀಯ ಬಿ.ಕಾಂ ವಂದಿಸಿದರು.

Exit mobile version