Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಮಂಗಳೂರು ವಿವಿ ಮಟ್ಟದ ಪುರುಷರ & ಮಹಿಳೆಯರ ಕರಾಟೆ ಚಾಂಪಿಯನ್ ಶಿಪ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಪುರುಷರ ಮತ್ತು ಮಹಿಳೆಯರ ಕರಾಟೆ ಚಾಂಪಿಯನ್ ಶಿಪ್ ಸೋಮವಾರ ನಡೆಯಿತು.

ಭಂಡಾರ್ಕಾರ್ಸ್ ಪದವಿ ಕಾಲೇಜ್ ವಿಶ್ವಸ್ಥ ಪ್ರಕಾಶ್ ಟಿ. ಸೋನ್ಸ್ ಉದ್ಘಾಟಿಸಿ, ಸಾವಿರಾರು ಮಕ್ಕಳು ಕರಾಟೆಯಿಂದ ಶಿಸ್ತು ಕಲಿಯುತ್ತಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆಲುವು ಪಡೆದ ಕರಾಟೆ ಪಟುಗಳಿಗೆ ವಿಶ್ವವಿದ್ಯಾಲಯದ ವತಿಯಿಂದ ಆರ್ಥಿಕ ನೆರವು ನೀಡಬೇಕು ಎಂದರು.

ಭಂಡಾರ್ಕಾರ್ಸ್ ಪದವಿ ಕಾಲೇಜ್ ಪ್ರಾಂಶುಪಾಲ ಡಾ. ಎನ್.ಪಿ.ನಾರಾಯಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬ್ಲ್ಯಾಕ್ ಬೆಲ್ಟ್ 5 ಡ್ಯಾನ್ ಸಂದೀಪ್ ಪೂಜಾರಿ, ದಕ್ಷಿಣ ಕನ್ನಡ ಉಡುಪಿ ಕರಾಟೆ ಅಧ್ಯಕ್ಷ ಪ್ರವೀಣ್ ಕುಮಾರ್, ಮಂಗಳೂರು ವಿಶ್ವವಿದ್ಯಾಲಯ ಸಹಾಯಕ ದೈಹಿಕ ನಿರ್ದೇಶಕ ಹರಿದಾಸ್ ಕೂಳೂರು ಉಪಸ್ಥಿತರಿದ್ದರು.

ಭಂಡಾರ್ಕಾರ್ಸ್ ಪದವಿ ಕಾಲೇಜಿನ ದೈಹಿಕ ನಿರ್ದೇಶಕ ಶಂಕರನಾರಾಯಣ. ಕೆ ಸ್ವಾಗತಿಸಿದರು. ದೈಹಿಕ ನಿರ್ದೇಶಕಿ ವನಿತಾ ವಂದಿಸಿದರು. ವಿದ್ಯಾರ್ಥಿನಿ ಚಂದ್ರಿಕಾ ಕಾರ್ಯಕ್ರಮ ನಿರೂಪಿಸಿದರು.

Exit mobile version