Kundapra.com ಕುಂದಾಪ್ರ ಡಾಟ್ ಕಾಂ

ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ: 5 ಮೇಳಗಳಿಗೆ ಚಾಲನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ಭಾರತ್ ಸ್ಕೌಟ್ಸ್ – ಗೈಡ್ಸ್ ವತಿಯಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಆರಂಭಗೊಂಡ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ಆಯೋಜನೆಗೊಂಡಿರುವ ವಿವಿಧ ಮೇಳಗಳನ್ನು ಸಾಂಕೇತಿಕವಾಗಿ ನೀಟ್ ಲಾಂಗ್ ಟರ್ಮ್ ಕಟ್ಟಡದಲ್ಲಿ ಉದ್ಘಾಟಿಸಲಾಯಿತು.

ಕಲಾಮೇಳವನ್ನು ಚಿತ್ರ ಕಲಾವಿದ ಕೆ ಕೆ ಕೃಷ್ಣ ಶೆಟ್ಟಿ, ವಿಜ್ಞಾನ ಮೇಳವನ್ನು ಇಸ್ರೋದ ಮಾಜಿ ವೈಜ್ಞಾನಿಕ ಕಾರ್ಯದರ್ಶಿ ಡಾ. ದಿವಾಕರ್, ಕೃಷಿ ಮೇಳವನ್ನು ಉದ್ಯಮಿ ಶ್ರೀಪತಿ ಭಟ್, ಪುಸ್ತಕ ಮೇಳವನ್ನು ಮೂಲ್ಕಿ ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಹಾಗೂ ಆಹಾರ ಮೇಳವನ್ನು ಕೆ. ಪಿ ಮಿಶ್ರಾ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ತದ ನಂತರ ಅರಣ್ಯ ಚಾರಣಕ್ಕೆ ಚಾಲನೆ ನೀಡಲಾಯಿತು.

ಸೌಟ್ಸ್-ಗೈಡ್ಸ್ ರಾಜ್ಯ ಆಯುಕ್ತ ಪಿ. ಜಿ. ಆರ್ ಸಿಂದಿಯಾ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಉಪಸ್ಥಿತರಿದ್ದರು.

ಪೂರ್ವಾಹ್ನ ೯.೩೦ರಿಂದ ರಾತ್ರಿ ೯.೦೦ರವರೆಗೆ ಜನಮನ ತಣ ಸುವ ಅಪೂರ್ವ ಕಾರ್ಯಕ್ರಮಗಳೊಂದಿಗೆ ೫ ಬೃಹತ್ ಮೇಳಗಳು ನಡೆಯಲಿವೆ.

ಕೃಷಿಮೇಳ :
ಎ.ಜಿ.ಕೊಡ್ಗಿ ಆವರಣದಲ್ಲಿ ೧೨ ಎಕರೆ ವಿಸ್ತಾರದ ಪಾರಂಪರಿಕ ತರಕಾರಿ ತೋಟ.
೧೦೦ ವಿಧ ತರಕಾರಿಗಳ ಅತ್ಯಾಕರ್ಷಕ ನೈಜ ತೋಟ.
ದೇಶ-ವಿದೇಶಗಳ ಬಾಳೆ, ತೆಂಗು, ಧಾನ್ಯ, ೫೩೦ ವಿಧ ಭತ್ತ, ವಿವಿಧ ಗೆಡ್ಡೆ ಗೆಣಸುಗಳು,
ವಿಶಾಲ ನೈಜ ಪುಷ್ಪಾಲಂಕಾರದಿಂದ ಸುತ್ತುವರಿದ ಕೃಷಿ ಸಿರಿ ಆವರಣ.

ವಿಜ್ಞಾನಮೇಳ:
ಪ್ರಾಥಮಿಕದಿಂದ ಸ್ನಾತಕೋತ್ತರದವರೆಗಿನ ವಿದ್ಯಾರ್ಥಿಗಳು ಅಗತ್ಯವಾಗಿ ನೋಡಲೇ ಬೇಕಾದ ವಿವಿಧ ವಿಜ್ಞಾನ ಮಾದರಿಗಳ ಪ್ರದರ್ಶನ
ವೈಜ್ಞಾನಿಕ ಆಟಿಕೆಗಳ ಪ್ರದರ್ಶನ ಮತ್ತು ಮಾರಾಟ
ಮತ್ಸ್ಯ ಪ್ರದರ್ಶನ, ಏರೋಪ್ಲೇನ್ ಎಕ್ಸಿಬಿಶನ್
ಪುಸ್ತಕಮೇಳ:
ಪ್ರಾದೇಶಿಕ, ಪ್ರಾಂತೀಯ, ದೇಶೀಯ ಮತ್ತು ಅಂತಾರಾಷ್ಟ್ರೀಯ ಭಾಷೆಗಳ ಅಸಂಖ್ಯ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ.
ವಿವಿಧ ಅಕಾಡೆಮಿಗಳು, ವಿಶ್ವವಿದ್ಯಾನಿಲಯದ ಪ್ರಸರಾಂಗಗಳು ಭಾಗಿ

ಕಲಾಮೇಳ:
ದೇಶ-ವಿದೇಶಗಳ ಪ್ರತಿಭಾನ್ವಿತ ಕಲಾವಿದರ ಸಂಗಮದ ಚಿತ್ರಕಲೆ, ಶಿಲ್ಪಕಲೆ, ವ್ಯಂಗ್ಯ ಚಿತ್ರ ಹಾಗೂ ಫೋಟೋಗ್ರಫಿ ರಚನೆ ಮತ್ತು ಪ್ರದರ್ಶನ.

ಆಹಾರ ಮೇಳ:
ಸಾಂಪ್ರದಾಯಿಕ ಮತ್ತು ಆಧುನಿಕ ವೈವಿಧ್ಯಮಯ ಸಸ್ಯಹಾರಿ ಮತ್ತು ಮಾಂಸಾಹಾರಿ ಆಹಾರ ಮಳಿಗೆಗಳು,
ಹಣ್ಣುಹಂಪಲುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.

Exit mobile version