Kundapra.com ಕುಂದಾಪ್ರ ಡಾಟ್ ಕಾಂ

ಸೌಟ್ಸ್-ಗೈಡ್ಸ್ ಅಂತರರಾಷ್ಟ್ರೀಯ ಜಾಂಬೂರಿ: ಬೃಹತ್ ಸ್ವಚ್ಛತಾ ಅಭಿಯಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ಭಾರತ್ ಸೌಟ್ಸ್-ಗೈಡ್ಸ್ ವತಿಯಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಭಾಗವಾಗಿ ಬೃಹತ್ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಜಾಂಬೂರಿಯ ಎರಡನೇ ದಿನವಾದ ಗುರುವಾರ 8 ಕಡೆಗಳಲ್ಲಿ ಸುಮಾರು 5,000 ಸ್ಕೌಟ್ಸ್-ಗೈಡ್ಸ್ ಪ್ರಶಿಕ್ಷಾರ್ಥಿಗಳು ಹಾಗೂ ಇನ್ನಿತರ ಸ್ವಯಂಸೇವಕರು ಸ್ವಚ್ಛತಾ ಕಾರ್ಯ ಕೈಗೊಂಡರು.

ವಿದ್ಯಾರ್ಥಿಗಳ ಜತೆಗೆ ಗ್ರಾಮ ಪಂಚಾಯತ್ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಸ್ಥಳೀಯ ಶಾಲಾ ಕಾಲೇಜುಗಳ ಎನ್‌ಎಸ್‌ಎಸ್ ಹಾಗೂ ಎನ್‌ಸಿಸಿ ಸ್ವಯಂಸೇವಕರು ಹಾಗೂ ಸಾರ್ವಜನಿಕರು ಸ್ವಚ್ಛತೆಯಲ್ಲಿ ಭಾಗವಹಿಸಿದರು.

ದ.ಕ ಜಿಲ್ಲಾಧಿಕಾರಿ ರವಿ ಕುಮಾರ್ ಎಂ. ಆರ್, ದ.ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಪ್ರಾಂಶುಪಾಲ ಡಾ. ಕುರಿಯನ್, ಅಕ್ಷಯ್ ಜೈನ್, ನಿತಿನ್, ಕುಮಾರಸ್ವಾಮಿ, ದೀಪಕ್ ಕೊಳಕೆ, ಮೂಸಾ ಶರೀಫ್, ನಿತಿನ್ ಪೂಜಾರಿ, ಅಮರ್ ಕೋಟೆ, ತನ್ವಿ ರೈ, ರಂಜಿತಾ ಆಚಾರ್ಯ, ಸುಧಾಕರ್ ಪೂಂಜಾ ಇನ್ನಿತರರು ಈ ಸ್ವಚ್ಚತಾ ಅಭಿಯಾನದ ನೇತೃತ್ವ ವಹಿಸಿದರು.

ನೇತ್ರಾವತಿ ತಂಡ
೬೫೦ ವಿದ್ಯಾರ್ಥಿಗಳು ಹಾಗೂ ಇನ್ನಿತರ ಸ್ಥಳೀಯರನ್ನೊಳಗೊಂಡ ನೇತ್ರಾವತಿ ತಂಡವು ವಾಮಂಜೂರಿನಿಂದ ಗುರುಪುರದವರೆಗೆ ರಸ್ತೆಯ ಇಕ್ಕೆಲಗಳನ್ನು ಸ್ವಚ್ಚಗೊಳಿಸಿದರು.

ಶರಾವತಿ ತಂಡ
ಕಾರ್ಕಳದ 8 ರಸ್ತೆಗಳಲ್ಲಿ ಸ್ವಚ್ಚತೆ ಕೈಗೊಂಡ ಶರಾವತಿ ತಂಡದ ೨೫೦ ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳು, ಭುವನೇಂದ್ರ ಕಾಲೇಜಿನ 150 ಎನ್‌ಎಸ್‌ಎಸ್ ಸ್ವಯಂಸೇವಕರು ದಾನ ಶಾಲೆ, ಗ್ಯಾಸ್ ಗೋಡೌನ್, ಆನೆಕೆರೆ, ಮೂರುಮಾರ್ಗ, ಸಾಣೂರು, ಪುಲ್ಕೇರಿ, ಅನಂತಶಯನ ರಸ್ತೆಗಳಲ್ಲಿ ಒಟ್ಟು ೫ ಕಿಮೀ ಸ್ವಚ್ಚತೆ ಹಮ್ಮಿಕೊಂಡರು.

ಶಾಂಭವಿ ತಂಡ
ಮೂಲ್ಕಿ ಕಾರ್ನಾಡು ಜಂಕ್ಷನ್‌ನಿಂದ ಕಿಲ್ಪಾಡಿ ರೈಲ್ವೇ ಸ್ಟೇಷನ್‌ವರೆಗೆ, ಬಪ್ಪನಾಡು ದೇವಾಲಯದಿಂದ ಪುನರೂರಿನವರೆಗೆ ಶಾಂಭವಿ ತಂಡವು ಸುಮಾರು 7.2ಕಿ.ಮೀ ರಸ್ತೆಯನ್ನು ಸ್ವಚ್ಚಗೊಳಿಸಿದರು. ೨೫೦ ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳು, 50 ಎನ್‌ಸಿಸಿ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರ ಸ್ವಯಂಸೇವಕರು ಇದರ ಭಾಗವಾಗಿದ್ದರು.

ಎತ್ತಿನಹೊಳೆ ತಂಡ
ಎತ್ತಿನಹೊಳೆ ತಂಡವು ಬಂಟ್ವಾಳ-ಮೂಡುಬಿದಿರೆ ಜಂಕ್ಷನ್‌ನಿಂದ ಸೊರ್ನಾಡು ಅಂಗನವಾಡಿಯವರೆಗೆ ಸುಮಾರು 7.5 ಕೀಮೀನಷ್ಟು ರಸ್ತೆಯನ್ನು ಸ್ವಚ್ಚಗೊಳಿಸಿದರು. ೨೫೦ ಸೌಟ್ಸ್-ಗೈಡ್ಸ್ ವಿದ್ಯಾರ್ಥಿಗಳು,ಅಮ್ಟಾಡಿ ಗ್ರಾಮ ಪಂಚಾಯತ್ ಅಧಿಕಾರಿಗಳು, ಪಂಜಿಕಲ್ ಗ್ರಾ.ಪಂ ಸದಸ್ಯರು, ಆಶಾ ಕಾರ್ಯಕರ್ತೆಯರು ಹಾಗೂ ಸ್ಥಳೀಯರು ಸೇರಿದಂತೆ 800 ಮಂದಿ ಈ ಸ್ವಚ್ಛತೆಯಲ್ಲಿ ಪಾಲ್ಗೊಂಡರು.

ಇತರ ತಂಡಗಳು
ಹೊಸ್ಮಾರಿನ ಈದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 5 ಕೀಮೀ ಸ್ವಚ್ಚತೆಯನ್ನು ಪಯಸ್ವಿನಿ ತಂಡ, ಬೆಳ್ಮಣ್‌ನಲ್ಲಿ ಸ್ವರ್ಣಹೊಳೆ ತಂಡ ಜತೆಗೆ ಫಲ್ಗುಣಿ ಹಾಗೂ ನಂದಿನಿ ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದರು.

Exit mobile version