Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಶಿಕ್ಷಣ ಜ್ಞಾನ ರಾಜ್ಯ ಪ್ರಶಸ್ತಿ ಪ್ರದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಶಿಕ್ಷಣ ಜ್ಞಾನ ಸಂಸ್ಥೆಯ ವತಿಯಿಂದ ಕೊಡ ಮಾಡುವ ಈ ಬಾರಿಯ ರಾಜ್ಯ ಮಟ್ಟದ ಶಿಕ್ಷಣ ಜ್ಞಾನ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಉಡುಪಿ ಜಿಲ್ಲೆಯಿಂದ ಕಾಲೇಜು, ಪ್ರೌಢಶಾಲೆ, ಪ್ರಾಥಮಿಕ, ಪೂರ್ವ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕ್ರಮವಾಗಿ ತೆಂಕನಿಡಿಯೂರು ಕಾಲೇಜಿನ ಕನ್ನಡ ಉಪನ್ಯಾಸಕ, ಪ್ರಾಂಶುಪಾಲ ವಿಶ್ವನಾಥ ಎನ್. ಕರಬ, ಕುಂದಾಪುರ ವಲಯದ ಕೋಡಿ ಬ್ಯಾರಿಸ್ ಸಂಸ್ಥೆಯ ಮುಖ್ಯೋಪಾಧ್ಯಾಯ ಜಯಶೀಲ ಶೆಟ್ಟಿ, ಬೈಂದೂರು ವಲಯದ ಆಲೂರು-ಕಳಿಯ ಶ್ರೀಮತಿ ಜಿ. ಹೆಗಡೆ ಬ್ರಹ್ಮಾವರ ವಲಯದ ಮುಂಡಾಡಿ ಅಂಗನವಾಡಿ ಕೇಂದ್ರದ ಶಿಕ್ಷಕಿ ಜ್ಯೋತಿ ಶೆಟ್ಟಿ ಆಯ್ಕೆಯಾಗಿದ್ದರು.

ಹೊಸದುರ್ಗದಲ್ಲಿ ಇತ್ತಿಚಿಗೆ ನಡೆದ ರಾಜ್ಯ ಶೈಕ್ಷಣಿಕ ಸಮಾವೇಶದಲ್ಲಿ ಈ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

Exit mobile version