Kundapra.com ಕುಂದಾಪ್ರ ಡಾಟ್ ಕಾಂ

ಜಾಂಬೂರಿಯಲ್ಲಿ ಸಾವಿರಾರು ಪ್ರೇಕ್ಷಕರೊಂದಿಗೆ ಖ್ಯಾತ ಹಿನ್ನಲೆ ಗಾಯಕ ಶಂಕರ್ ಮಹಾದೇವನ್ ಸಂಗೀತ ಜುಗಲ್-ಬಂದಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ಖ್ಯಾತ ಹಿನ್ನಲೆ ಗಾಯಕ ಶಂಕರ್ ಮಹಾದೇವನ್ ತಂಡದಿಂದ ಜಾಂಬೂರಿಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ನಡೆದ ಸಂಗೀತ ರಸಸಂಜೆಗೆ ಐವತ್ತು ಸಾವಿರಕ್ಕೂ ಅಧಿಕ ಪ್ರೇಕ್ಷಕರಿಗೆ ನವೋಲ್ಲಾಸ ನೀಡಿತು.

ಜಾಂಬೂರಿಯ ಎರಡನೇ ದಿನ ವನಜಾಕ್ಷಿ ಕೆ . ಶ್ರೀಪತಿ ಭಟ್ ವೇದಿಕೆಯಲ್ಲಿ ಶಂಕರ ಮಹಾದೇವನ್ ತಮ್ಮ ಮುಂಬೈ ತಂಡದೊಂದಿಗೆ ಕನ್ನಡ, ಹಿಂದಿ, ತಮಿಳು ಸೇರಿ ಕೆಲವು ಹಾಡುಗಳನ್ನು ಹಾಡಿ ಸಂಗೀತ ಪ್ರಿಯರಿಗೆ ರಸದೌತಣವನ್ನು ನೀಡಿದರು.

ಗಣನಾಯಕಯಾಕ ಗಣದೈವತಾಯ ಎಂದು ವಿಘ್ನವಿನಾಶಕ ಗಣಪತಿಯನ್ನು ತಮ್ಮ ಸುಮಧುರ ಗಾಯನದ ಮೂಲಕ ಸ್ಮರಿಸುತ್ತಾ ಸಂಗೀತ ರಸಸಂಜೆ ಕಾರ್ಯಕ್ರಮ ಪ್ರಾರಂಭಿಸಿದರು. ಬಳಿಕ ಅತಿರಥಾ ಮಹಾ ರಥಾ ಸಾರಥಿ ಎನ್ನುತ್ತಾ ಸೇರಿರುವ ಐವತ್ತು ಸಾವಿರಕ್ಕೂ ಅಧಿಕ ಪ್ರೇಕ್ಷಕರೊಂದಿಗೆ ಸಂಗೀತ ಜುಗಲ್-ಬಂದಿ ನಡೆಸಿದರು. ಪ್ರೆಟ್ಟಿ ವುಮೆನ ಹಾಡಿದರು. ಇಸ್ ದ್ ಟೈಮ್ ಟು ಡಿಸ್ಕೋ ಎನ್ನುತ್ತಾ ವೇದಿಕೆ ಮೇಲೆ ಹೆಜ್ಜೆ ಹಾಕಿದರು.

ಟ್ರಿಬ್ಯುಟ್ ಟು ಪುನೀತ್, ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ಗೆ ಕಲ್ ಹೋ ನ ಹೋ ಗಾಯನದ ಮುಖೇನ ಗೌರವ ಅರ್ಪಣೆ ಮಾಡಿದರು. ಮೌನ ಆವರಿಸಿದ ವೇದಿಕೆಗೆ ಮತ್ತದೆ ಕಳೆ ತಂದಿದ್ದು ಹಿಂದೂಸ್ತಾನಿ ಹಾಡು. ಜೈ ಜೈ ಭಜರಂಗಿ, ಕ್ಯಾಕರೇಗೆ ,ಕಜರಾರೇ ಹಾಡನ್ನು ಹಾಡಿ ಜನರನ್ನು ರಂಜಿಸಿದರು.

Exit mobile version