Kundapra.com ಕುಂದಾಪ್ರ ಡಾಟ್ ಕಾಂ

ಅನುಪಯುಕ್ತ ಕಾಗದದಿಂದ ತಯಾರಾಗುತ್ತಿದೆ ಸುಂದರ ಗೊಂಬೆಗಳು

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ:
ಉಪಯೋಗಕ್ಕೆ ಬಾರದ ಕಾಗದಗಳು ಈ ಕಲಾವಿದೆ ಕೈಚಳಕದಿಂದ ಮೂರ್ತರೂಪ ಪಡೆದಿದೆ. ಅನುಪಯುಕ್ತ ಕಾಗದವನ್ನು ಬಳಸಿ ವಿಶಿಷ್ಟ್ಯ ರೀತಿಯಲ್ಲಿ ಬೊಂಬೆಗಳನ್ನು ತಯಾರಿಸಿ ಸ್ವ ಉದ್ಯೋಗಿಗಳಿಗೆ ಮಾದರಿಯಾಗಿದ್ದಾರೆ ವಿಕಲಚೇತನೆ ರಾಧಿಕಾ ಎ.ಜೆ

ತ್ಯಾಜ್ಯ ಕಾಗದವನ್ನು ಸಂಗ್ರಹಿಸಿ ಅದರಿಂದ ವಿಧ ವಿಧದ ಆಕಾರದ ಬೊಂಬೆಗಳನ್ನು ತಯಾರಿಸುವ ರಾಧಿಕಾ ತಮಿಳುನಾಡಿನ ಕೊಯಂಬೂತ್ತಿರಿನವರು. ಮೂಡಬಿದಿರೆಯ ಆಳ್ವಾಸ್ ಕಾಲೇಜು ಆಯೋಜಿಸಿದ್ದ ೨೦೨೨ನೇ ಸಾಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ವಸ್ತು ಪ್ರದರ್ಶನ ಮಳಿಗೆಯಲ್ಲಿ ರಾಧಿಕಾಗೆ ನೆರವಾಗಲು ತಮ್ಮ ಟ್ರಸ್ಟ್ ನ ಮೂಲಕ ವಕೀಲೆ ಜಯಶ್ರೀ ಬೊಂಬೆಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದಾರೆ.

ಸಣ್ಣ ಮಕ್ಕಳಿಗೆ ಯಾವುದೇ ಹಾನಿಯಾಗದಂತೆ ಕಾಗದದ ಬೊಂಬೆಗಳು ಕಣ್ಮನ ಸೆಳೆಯುತ್ತಿವೆ. ವಿಭಿನ್ನ ಭಂಗಿಯಲ್ಲಿ ನಿಂತ ಬೊಂಬೆಗಳು ವಿವಿಧ ಬಣ್ಣಗಳನ್ನು ಹೊಂದಿವೆ. ಕಾಗದದ ಬೊಂಬೆಗಳು ಕೈಗೆಟಕುವ ದರದಲ್ಲಿ ಲಭಿಸುತ್ತಿವೆ. ವಿವಿಧ ಉಡುಗೆಗಳೊಂದಿಗಿನ ಪರಿಸರ ಸ್ನೇಹಿ ಗೊಂಬೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಖರೀದಿಸುತ್ತಿದ್ದಾರೆ.

Exit mobile version