ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ: ಜಲಮಾಲಿನ್ಯ ಇತ್ತೀಚನ ದಿನಗಳಲ್ಲಿ ಹೆಚ್ಚುತ್ತಿದೆ. ನದಿಗಳಲ್ಲಿ, ಕೆರೆಗಳಲ್ಲಿ ವಾಸಿಸುವ ಜಲಚರ ಜೀವಪ್ರಬೇಧಗಳ ಜೀವಕ್ಕೆ ಧಕ್ಕೆ ಒದಗುತ್ತಿದೆ. ಈ ಜಲಮಾಲಿನ್ಯ ತಡೆದು ಜಲಚರಜೀವಿಗಳ ಉಳಿವಿಗಾಗಿ ಉಜಿರೆಯ ಎಸ್.ಡಿ.ಎಂ ಸೆಕೆಂಡರಿ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ?ರಿವರ್ ಕ್ಲೀನಿಂಗ್ ಮಷಿನ್’ ಎಂಬ ತಾಂತ್ರಿಕ ಪರಿಕರ ಕಂಡುಹಿಡಿದಿದ್ದಾರೆ.
ಮೂಡಬಿದರೆ ಆಳ್ವಾಸ್ ಕಾಲೇಜಿನಲ್ಲಿ ನಡೆಯುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರಿಯ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮದಲ್ಲಿ ವಿಜ್ಞಾನ ಮೇಳದಲ್ಲಿ ವಿದ್ಯಾರ್ಥಿಗಳು ನದಿಯನ್ನು ಶುದ್ಧೀಕರಿಸು ಈ ತಾಂತ್ರಿಕ ಪರಿಕರದ ವಿನ್ಯಾಸವನ್ನು ಪ್ರದರ್ಶಿಸುತ್ತಿದ್ದಾರೆ.
ಅನೇಕ ಜನರು ದೇವಾಸ್ಥಾನಗಳಿಗೆ ಬಂದಾಗ ತಾವು ಬಳಸಿದ ಪ್ಲಾಸ್ಟಿಕ್ ವಸ್ತುಗಳು, ಬಟ್ಟೆ, ಹೀಗೆ ಹಲವು ವಸ್ತುಗಳನ್ನು ನದಿಗಳಿಗೆ,ಕೆರೆಗಳಿಗೆ ಬಿಸಾಡುವುದರಿಂದ ಆ ನೀರು ಕಲುಷಿತಗೊಳ್ಳುತ್ತದೆ. ಅಲ್ಲಿ ವಾಸ ಮಾಡುವ ಜಲಚರ ಪ್ರಾಣಿಗಳು ಅವುಗಳನ್ನು ಸೇವಿಸಿ ಅಸುನೀಗುತ್ತಿವೆ. ಈ ಮಾಲಿನ್ಯವನ್ನು ತಡೆಯುವ ಉದ್ದೇಶದಿಂದ ‘ರೀವರ್ ಕ್ಲೀನಿಂಗ್ ಮಷಿನ್? ವಿನ್ಯಾಸ ರೂಪಿಸುವ ಯೋಜನೆ ರೂಪುಗೊಂಡಿತು. ಈ ಮಷಿನ್ ಪೇಪರ್ ಮತ್ತು ಪ್ಲಾಸ್ಟಿಕ್‌ಗಳಂತಹ ನೀರಿನ ಮೇಲೆ ತೇಲುವಂಥ ವಸ್ತುಗಳನ್ನು ನದಿಯಿಂದ ಬೇರ್ಪಡಿಸುತ್ತದೆ. ಇದು ಕಡಿಮೆ ಖರ್ಚಿನ ಮಷಿನ್ ಆಗಿದೆ.
ನೀರಿನ ಮೇಲೆ ಮಷಿನ್ ತೇಲುವಂತಾಗಿಸುವ ಥರ್ಮಾಕೋಲ್ ಬಳಸಲಾಗಿದೆ. ಪ್ಲಿಪರ್ಸ್‌ಗಳು ಚಲಿಸಲು ಸಹಾಯ ಮಾಡುತ್ತವೆ. ಕನ್ವರ್ ಬೆಲ್ಟ್ ನೀರಿನಲ್ಲಿ ಇರೋ ಕಸವನ್ನು ಮೇಲೆಕ್ಕೆ ಎತ್ತಿ ಸಂಗ್ರಹಣೆಯನ್ನು ಮಾಡಿಕೊಳ್ಳುತ್ತದೆ. ಈ ಅದ್ಬುತ್ ಮಾದರಿಯನ್ನು ಅಧ್ಯಾಪಕಿ ನೀತಾ ಜೈನ್ ನೇತೃತ್ವದಲ್ಲಿ ಫ್ರೌಢ ಶಾಲೆಯ ವಿದ್ಯಾರ್ಥಿಗಳಾದ ಕಿರಣಕುಮಾರ ಮತ್ತು ವಿನಯ್ ರೂಪಿಸಿದ್ದಾರೆ.
- ವರದಿ: ಮಹಾಂತೇಶ ಚಿಲವಾಡಗಿ, ದ್ವಿತೀಯ ವರ್ಷದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ