Kundapra.com ಕುಂದಾಪ್ರ ಡಾಟ್ ಕಾಂ

ಜಾಂಬೂರಿಯಲ್ಲಿ ಪ್ರಕೃತಿಪರ ಗೊಂಡೋ ಆರ್ಟ್ ಪ್ರಭಾವಳಿ

ಕುಂದಾಪ್ರ ಡಾಟ್ ಕಾಂ ವರದಿ.
ವಿದ್ಯಾಗಿರಿ:
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಂಸ್ಕೃತಿಯ ಜಂಬೂರಿಯ ಕಲಾ ಪ್ರದರ್ಶನದಲ್ಲಿ ಗೊಂಡೋ ಆರ್ಟ್ ಪ್ರಕಾರದ ಪರಿಸರಸ್ನೇಹಿ ಚಿತ್ರಗಳು ಗಮನ ಸೆಳೆಯುತ್ತಿವೆ.

ಆದಿವಾಸಿ ಕೌಟುಂಬಿಕ ಹಿನ್ನೆಲೆಯ ಕಲಾವಿದರು ಪ್ರಕೃತಿಯನ್ನು ಆರಾಧಿಸುತ್ತಾರೆ. ಪ್ರಕೃತಿಯೇ ಇವರಿಗೆ ದೇವರು. ಪ್ರಕೃತಿಯನ್ನು ಭಕ್ತಿಭಾವದಿಂದ ನೋಡುವ ಇವರ ದೃಷ್ಟಿಕೋನ ಆಧರಿಸಿ ರೂಪಿತವಾಗುವ ಚಿತ್ರಕಲಾ ಕೌಶಲ್ಯವೇ ಗೊಂಡೋ ಆರ್ಟ್. ಈ ಪ್ರಕಾರದ ಕಲಾತ್ಮಕ ಚಿತ್ರಗಳು ಕಲಾಪ್ರದರ್ಶನದಲ್ಲಿ ಆಕರ್ಷಿಸುತ್ತಿವೆ. ಗೊಂಡೋ ಆರ್ಟ್ ಮೂಲತಃ ಮಧ್ಯಪ್ರದೇಶದ ಆದಿವಾಸಿಗಳ ಪರಂಪರೆಯ ಭಾಗವಾಗಿ ಬೆಳೆದು ಬಂದ ಕಲೆ.

ಪ್ರಕೃತಿ ಆಧಾರಿತ ಚಿತ್ರಗಳಾದ ಸೂರ್ಯ, ಚಂದ್ರ, ಮೈದುಂಬಿ ಹರಿಯುವ ಜಲಪಾತ, ಗಿರಿ ಶಿಖರಗಳ ಸೌಂದರ್ಯ, ಪ್ರಾಣಿ-ಪಕ್ಷಿ, ಹುಳ ಹುಪ್ಪಟೆಗಳ ಸೂಕ್ಷ್ಮ ಕಲಾಚಿತ್ರವನ್ನು ನೈಸರ್ಗಿಕ ಬಣ್ಣಗಳಿಂದಲೆ ಬಿಡಿಸಿರುವುದು ಬಹಳ ವಿಶೇ?ವಾಗಿದೆ. ಅಪರೂಪದಲ್ಲಿ ಅಪರೂಪವಾದ ಈ ಕಲೆಯನ್ನು ಬುಡಕಟ್ಟು ಜನಾಂಗದ ಪ್ರತಿನಿಧಿಗಳು ವಿಶೇಷ ಉತ್ಸವಗಳಲ್ಲಿ ಪ್ರದರ್ಶನಕ್ಕಿಟ್ಟು ಮಾರಾಟ ಮಾಡುತ್ತಿದ್ದಾರೆ. ಪ್ರಕೃತಿಯನ್ನೆ ಆರಾಧ್ಯ ದೈವವಾಗಿ ನಂಬಿಕೊಂಡಿರುವ ಇವರು ತಮ್ಮ ಕಲೆಯಲ್ಲೂ ಅದನ್ನೇ ಪ್ರತಿಬಿಂಬಿಸಿ, ಪರಿಸರ ಪರವಾದ ಕಾಳಜಿಯೊಂದಿಗೆ ಎಲ್ಲರ ಮನಸೆಳೆಯುತ್ತಿದ್ದಾರೆ.

Exit mobile version