Kundapra.com ಕುಂದಾಪ್ರ ಡಾಟ್ ಕಾಂ

ಸಾಂಸ್ಕೃತಿಕ ಜಾಂಬೂರಿಯಲ್ಲಿ ಅರಳಿದ ಬೃಹತ್ ಗಾಳಿಪಟ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಭಾರತ್ ಸೌಟ್ಸ್-ಗೈಡ್ಸ್ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಕಲಾ ಮೇಳದಲ್ಲಿ ಪ್ರದರ್ಶಿಸಲಾದ ಬೃಹತ್ ಗಾಳಿಪಟ ಗಮನಸೆಳೆಯುತ್ತಿದೆ. ಟೀಂ ಮಂಗಳೂರು ಚಿತ್ರಕಲಾವಿದ ದಿನೇಶ್ ಹೊಳ್ಳ ಅವರ ವಿನ್ಯಾಸ ಹಾಗೂ ಪರಿಕಲ್ಪನೆಯಲ್ಲಿ ನಿರ್ಮಾಣಗೊಂಡ 54 ಅಡಿ ಉದ್ದ 16 ಅಡಿ ಅಗಲದ ವಿಶೇಷ ಗಾಳಿಪಟ ಇದಾಗಿದೆ.

ಗಾಳಿಪಟವು ಬೃಹತ್ ಗಾತ್ರವಷ್ಟೇ ಅಲ್ಲದೇ ಅದರ ಪ್ರತಿ ಅಂಚಿನಲ್ಲೂ ತುಳುನಾಡಿನ ಸಂಸ್ಕೃತಿಯನ್ನು ಚಿತ್ರಿಸಲಾಗಿದೆ. ಭೂತಾರಾಧನೆ, ಕಂಬಳ, ಪೀಲಿವೇ?, ನಾಗರಾಧನೆ, ಕರಾವಳಿ ಕಿನಾರೆ, ಮೀನುಗಾರಿಕೆ ಹೀಗೆ ತುಳುನಾಡಿನ ನೂರಾರು ಸಂಸ್ಕೃತಿಯನ್ನು ಚಿತ್ರಿಸಿ ಒದರನಂತರ ಇನ್ನೊಂದನ್ನು ಪೋಣಿಸಲಾಗಿದೆ. ಬಣ್ಣಗಳ ಆಯ್ಕೆ ಅಭೂತಪೂರ್ವವಾಗಿ ಒದಕ್ಕೊಂದು ಅಚ್ಚುಕಟ್ಟಾಗಿ ಹೊಂದಾಣಿಕೆ ಮಾಡಲಾಗಿದೆ.

ಟೀಂ ಮಂಗಳೂರು ಈ ಹಿಂದೆ ೩೬ ಅಡಿ ಎತ್ತರದ ಗಾಳಿಪಟವನ್ನು ನಿರ್ಮಿಸಿ ದಾಖಲೆ ನಿರ್ಮಿಸಿದ್ದರು. ಈಗ 50 ಅಡಿ ಗಾಳಿ ಪಟ ನಿರ್ಮಿಸಿ ಮತ್ತೊಮ್ಮೆ ಇತಿಹಾಸ ಬರೆದಿದ್ದಾರೆ. ಈ ಗಾಳಿಪಟವನ್ನು ಕೊಡೆ ತಯಾರಿಸಲು ಬಳಸುವ ನೈಲಾನ್ ಬಟ್ಟೆಯಿಂದ ನಿರ್ಮಿಸಲಾಗಿದ್ದು, ಕೆಲವು ವ?ಗಳ ಕಾಲ ಇದನ್ನು ಪ್ರದರ್ಶಿಸಬಹುದು ಎಂದು ತಂಡದವರು ಹೇಳುತ್ತಾರೆ. ಎರಡು ತಿಂಗಳಿಗೂ ಅಧಿಕ ಸಮಯದಲ್ಲಿ ಕಲಾವಿದರ ತಂಡ ಗಾಳಿಪಟವನ್ನು ಸಿದ್ಧಗೊಳಿಸಿದೆ.

Exit mobile version