ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ: ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಜನ. ಪ್ರತಿಯೊಬ್ಬರು ಕಾಯುತ್ತಿದದ್ದೂ ಏಕ ವ್ಯಕ್ತಿಗೆ. ಸ್ವಯಂ ಸಂಭಾ?ಣೆಯಲ್ಲಿ ಬ್ಯುಸಿಯಾಗಿದ್ದ ಪ್ರತಿಯೊಬ್ಬರು ಇವರು ವೇದಿಕೆ ಬರುತಿದಂತೆ ತಥ್ ಕ್ಷಣ ಒಟ್ಟಾಗಿ ಹೋ ಹೋ ಎಂದು ದನಿಗೂಡಿಸಿದ್ದು, ವ್ಯಕ್ತಿಗೋ ವ್ಯಕ್ತಿತ್ವಕ್ಕೋ ತಿಳಿಯಲಿಲ್ಲ. ಇದು ಜಾಂಬೂರಿ ನಾಲ್ಕನೇ ದಿನ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ವಿಜಯ ಪ್ರಕಾಶ ಮತ್ತು ಬಳಗ ನೀಡಿದ ಸಂಗೀತ ರಸದೌತಣ ಕಾರ್ಯಕ್ರಮದಲ್ಲಿ ಕಂಡು ಬಂದ ಅಭೂತಪೂರ್ವ ದೃಶ್ಯ.
ಕಾರ್ಯಕ್ರಮದ ಪ್ರಾರಂಭದಲ್ಲಿ ಆಳ್ವಾಸ್ ವಿದ್ಯಾರ್ಥಿಗಳು ರೈತಗೀತೆಯಾದ ಆದ ಉಳುವಾ ಯೋಗಿಯ ನೋಡಲ್ಲಿ ಎಂಬ ಗಾಯನಕ್ಕೆ ದನಿ ಆದರೇ ಇನ್ನೊಂದೆಡೆ ವೇದಿಕೆ ಮುಂಭಾಗದಲ್ಲಿದ ಪುಣಾಣಿಗಳು ಪೂರ್ಣ ಹಾಡು ಮುಗಿಯುವವರೆಗೂ ಹಚ್ಚ ಹಸಿರಿನ ಬಾವುಟ ಹಿಡಿದು ಗೌರವ ಸೂಚಿಸಿದರು. ಇದು ಪ್ರತಿಯೊಬ್ಬ ಭಾರತೀಯನಿಗೂ ರೋಮಾಂಚಕಾರಿ ಕ್ಷಣವಾಗಿದ್ದಂತು ಸತ್ಯ.
ಇವೆಲ್ಲವನ್ನು ಖುಷಿಯಿಂದ ಆಸ್ವಾಧಿಸುತ್ತಿದ್ದ ಜನರು ಕಾತುರದಿಂದ ಕಾಯುತ್ತ ಹವಣಿಸುತ್ತಿದಿದ್ದು ಕಂಚಿನ ಕಂಟದ ವಿಜಯ ಪ್ರಕಾಶ್ ಸಂಗೀತಕ್ಕೆ. ವೇದಿಕೆಗೆ ಆಗಮಿಸಿ ನೆರೆದಿದ್ದ ಜನೋಸ್ತಮವನ್ನು ನೋಡುತ್ತಿದಂತೆ ವಿಜಯ ಪ್ರಕಾಶ್ ಅವರಲ್ಲಿ ಅತೀವ ಹೆಮ್ಮೆಯಾದದ್ದು ಅವರ ಚಹರೆಯಲ್ಲಿ ಸ್ಪ?ವಾಗಿ ಗೋಚರಿಸುತ್ತಿತ್ತು.
ಬರುತ್ತಲೇ ‘ ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ’ ಎಂದು ಪುನೀತ್ ರಾಜಕುಮಾರ್ ಅವರಿಗೆ ಹಾಡಿನ ಮೂಲಕ ಗೌರವ ನೀಡಿದರೆ ಸೇರಿದ ಜನರ ಮಧ್ಯೆ ಗುಂಪೊಂದು ಪುನೀತ್ ಅವರ ಭಾವ ಚಿತ್ರ ಪ್ರದರ್ಶಿಸಿದರು. ಆ ಕ್ಷಣ ವೇದಿಕೆ ಮೇಲೆ ಹಾಡುತ್ತಿದ್ದ ವಿಜಯ ಪ್ರಕಾಶ್ `ಹೋ ನಮ್ಮ ಅಪ್ಪು’ ಎಂದಿದ್ದು ಪ್ರತಿಯೊಬ್ಬರಲ್ಲೂ ಪುನೀತ್ ನೆನಪು ಮೆಲುಕುಹಾಕುವಂತೆ ಮಾಡಿತು. ಮುಂದೆ ಕಾಣದಂತೆ ಮಾಯವಾದನೋ ನಮ್ಮ ಶಿವ ಎನ್ನುವ ಹಾಡಿನೊಂದಿಗೆ ಸಂಗೀತದ ಜುಗಲ್‌ಬಂದಿಗೆ ಇಳಿದರು.
ಇದಾಗುತ್ತಲೇ ತಮ್ಮ ತಂಡದವರೆಲ್ಲರನ್ನೂ ವಿನೂತನವಾಗಿ ಪರಿಚಯಿಸಯಿಸಿದ್ದು ಮಾತ್ರ ಬೆಳೆದ ಮರ ಹೇಗೆ ನೆರಳಾಗಬಹುದು ಎನ್ನುವುದಕ್ಕೆ ಪ್ರತ್ಯಕ್ಷ ಉದಾಹರಣೆ ನೀಡುವಂತಿತ್ತು. ಬೆಳ್ಳಗೆದ್ದು ಯಾರಾ ಮುಖವಾ ನಾನು ನೋಡಿದೆ ಹಾಡು ಹೇಳುತ್ತಿದಂತೆ ವಿದ್ಯಾರ್ಥಿಗಳು ಅಲೆಲೆ ಅಲೆಲೆ ಎಂದು ಬಹಳ ಉತ್ಸುಹಕತೆಯಿಂದ ದನಿಗೂಡಿಸಿದರು. ಇದು ನೆರೆದಿರುವವರ ಸಂಗೀತ ಅಭಿರುಚಿ ತಿಳಿಸುತ್ತಿತ್ತು. ಸೇರಿದ ಜನರ ನೀರಿಕ್ಷೆಗೂ ಮೀರಿ ಕಾಂತಾರ ಯಶಸ್ಸನ್ನು ಸಂಭ್ರಮಿಸಿ ತಂಡಕ್ಕೇ ಅಭಿನಂದನೇ ಸಲ್ಲಿಸುತ್ತಲೇ ಸಿಂಗಾರ ಸೀರಿಯೇ ಗಾಯನ ಹೇಳುತ್ತಿದ್ದರೇ ಸಂಗೀತ ಪ್ರಿಯರ ಸಂತಸಕ್ಕೆ ಪಾರವೇರಲಿಲ್ಲ, ಈ ಮಧ್ಯದಲ್ಲಿ ಕರ್ತವ್ಯ ನಿರತ ಪೋಲಿಸ್ ದನಿಗೂಡಿಸಿದ್ದು ಎಲ್ಲರ ಗಮನಹೇಳಿಸಿತು. ಹಾಗೇ ಸರಿಗಮಪಾ ಖ್ಯಾತಿಯ ಐಶ್ವರ್ಯ ರಂಗರಾಂಜನ್ ಅಪ್ಪ ಐ ಲವ್ ಯು ಅಪ್ಪ ಎನ್ನುತ್ತಿದಂತೆ ಮಕ್ಕಳು ಸಾಹಿತ್ಯವನ್ನು ಅನುಭವಸಿಕೊಂಡೆ ಹಾಡಿನ ಸವಿಯುತ್ತಿದ್ದರು.
ತುಳುವರ ಹಂಬಲದಂತೆ ತುಳು ಭಾ?ಯಲ್ಲಿ ಮೊಕೆದ ಸಿಂಗಾರಿ ಹಾಡಿಗೆ ದನಿಆಗುತ್ತಲೇ ತುಳುನಾಡಿನ ಜನರ ಮುಖದಲ್ಲಿ ಎಲ್ಲಿಲ್ಲದ ಹೆಮ್ಮೆ ನೆಲೆಮಾಡಿತ್ತು. ತದ ನಂತರ ಅಯ್ಯಯೋ ನಗತ್ತಾವಳಾ,ತಳವಲ್ಲ ತಂಬೂರಿ ಹುಟ್ಟಿದರೇ ಕನ್ನಡ ನಾಡಿನಲ್ಲಿ ಹುಟ್ಟಬೇಕು,ತಮಿಳು ತೆಲುಗಿನ ಮಿಶ್ರಿತ ಹೋಸಾನಾ ಹೀಗೆ ಕೆಲವು ಭಾ?ಗಳ ಹಲವು ಹಾಡನ್ನು ಹೇಳಿ ನೇರದವರನ್ನು ರಂಜಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಜೈ ಹೋ ಹಾಡನ್ನು ಹೇಳುತ್ತ ಇನ್ನೆನೂ ವಿರಾಮನೀಡಬೇಕು ಎನ್ನುತ್ತಿರುವಾಗ ಆಳ್ವಾಸ್ ಸಾಂಸ್ಕೃತಿಕ ವಿದ್ಯಾರ್ಥಿಗಳ ತಂಡ ವೇದಿಕೆ ಬದಿಯಲ್ಲಿ ಒಟ್ಟಾಗಿ ಬಂದು ಜೈ ಹೋ ಹಾಡಿಗೆ ದನಿ ಗೂಡಿಸಿದ್ದು ವಿನೋದತೆಗೆ ಕಾರಣವಾಯಿತು. ಹೀಗೆ ಗಾಯಕ ವಿಜಯ್ ಪ್ರಕಾಶ್ ಸಂಗೀತದ ಪ್ರಕಾಶತೆಯನ್ನು ಆಳ್ವಾಸ್ ಅಂಗಳದಲ್ಲಿ ಪಸರಿಸಿದರು.