Kundapra.com ಕುಂದಾಪ್ರ ಡಾಟ್ ಕಾಂ

ಕೃಷಿಸಿರಿಯಲ್ಲಿ ಗೊಂಬೆಗಳ ಬೆರಗು!

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ:
ಕೃಷಿಸಿರಿಯ ಸುತ್ತಮುತ್ತಲೆಲ್ಲಾ ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಗುಂಪಿನ ಚಲನವಲನಗಳ ನಡುವೆ ನೂರಕ್ಕೂ ಹೆಚ್ಚು ಬೆದರು ಗೊಂಬೆಗಳು ಗಮನ ಸೆಳೆಯುತ್ತಿದ್ದವು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಕೃಷಿಮೇಳದ ಸಮೀಪವಿರುವ ತರಕಾರಿ ಹಾಗೂ ಹೂವಿನ ತೋಟದ ನಡುವೆ ಬೆದರು ಗೊಂಬೆಗಳನ್ನು ನಿಲ್ಲಿಸಿರುವುದು ಆಕರ್ಷಕವಾಗಿ ಕಾಣುತ್ತಿದೆ.

ತೋಟದಲ್ಲಿರುವ ಹೂವು ಹಾಗೂ ತರಕಾರಿಗಳಿಗೆ ಯಾವುದೇ ಪ್ರಾಣಿ ಪಕ್ಷಿಗಳಿಂದ ಹಾನಿಯಾಗಬಾರದು ಎನ್ನುವ ಉದ್ದೇಶದಿಂದ ನಿಲ್ಲಿಸುವ ಗೊಂಬೆಗಳೇ ತೋಟಕ್ಕೆ ಹೆಚ್ಚು ಆಕರ್ಷಣೆಯನ್ನು ನೀಡುವಂತಿದ್ದು ಜಾಂಬೂರಿಯಲ್ಲಿ ಅವುಗಳ ಚಿತ್ರಣವನ್ನು ಸೆರೆ ಹಿಡಿಯುವವರ ಸಂಖ್ಯೆಯು ಹೆಚ್ಚಾಗಿದೆ.

ಹುಲ್ಲಿನಿಂದ ತಯಾರಿಸಿದ ಗೊಂಬೆಗಳಿಗೆ ಮಡಕೆಯ ಮುಖವಾಡವನ್ನು ಹಾಕಿ ಅದಕ್ಕೆ ಟೋಪಿಯನ್ನು ಹಾಕಿ ಅಲಂಕಾರ ಮಾಡಿ ನಿಲ್ಲಿಸಿರುವ ಭಂಗಿ ನೋಡುಗರಿಗೆ ಜೀವಂತ ವ್ಯಕ್ತಿ ತೋಟದ ಕಾವಲಿಗೆ ನಿಂತಂತಿತ್ತು. ಒಂದೆಡೆ ವಿಭಿನ್ನರೀತಿಯ ತರಕಾರಿಗಳು ನೋಡುಗರನ್ನು ಆಕರ್ಷಿಸಿದರೆ ಮತ್ತೊಂದೆಡೆ ಈ ಬೆದರು ಗೊಂಬೆಗಳು ಜನರನ್ನು ಆಕರ್ಷಿಸುವ ಮೂಲಕ ಜಾಂಬೂರಿಯ ಸೌಂದರ್ಯವನ್ನು ಇಮ್ಮಡಿಗೊಳಿಸಿದವು.

Exit mobile version