ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ೧೬ನೇ ಹಂತದ ಸ್ವಚ್ಛ ಕಡಲತೀರ ಹಸಿರು ಕೋಡಿ ಅಭಿಯಾನ ಇತ್ತಿಚಿಗೆ ಹಮ್ಮಿಕೊಳ್ಳಲಾಗಿತ್ತು.
ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲೆ ಅಶ್ವಿನಿ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸ್ವಚ್ಛತಾ ಜಾಗೃತಿ ಫಲಕ ಹಾಗೂ ಜಾಗೃತಿ ಘೋಷದೊಂದಿಗೆ ಕೋಡಿ ನಾಗರಿಕ ವೃಂದದವರಿಗೆ ಕಡಲತೀರ ಮತ್ತು ಪರಿಸರ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜಾಗೃತಿ ಅಭಿಯಾನವು ಊರಿನ ವಿವಿಧೆಡೆಯಲ್ಲಿಸಂಚರಿಸುವುದರೊಂದಿಗೆ, ಸುಂದರ ತಾಣ ಸೀ ವಾಕ್ ನಲ್ಲಿ ಅಂತ್ಯಗೊಂಡಿತು. ತದನಂತರದಲ್ಲಿ ಕೋಡಿ ಕಡಲತೀರ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.
ವಿವಿಧ ವಿಭಾಗಗಳ ಮುಖ್ಯಸ್ಥರು, ಶಿಕ್ಷಕ- ಶಿಕ್ಷಕೇತರರು, ವಿದ್ಯಾರ್ಥಿಗಳು , ಆಡಳಿತ ಮಂಡಳಿಯ ಸದಸ್ಯರು , ರಕ್ಷಕ – ಶಿಕ್ಷಕ ಸಂಘದ ಸದಸ್ಯರು, ಪೋಷಕರು, ಹಳೆ ವಿದ್ಯಾರ್ಥಿಗಳು, ಊರಿನ ಗಣ್ಯರು ಹಾಗೂ ಪರಿಸರ ಪ್ರಿಯರು ಈ ೧೬ ನೇ ಅಭಿಯಾನದಲ್ಲಿ ಬಹು ಉತ್ಸಾಹದಿಂದ ಪಾಲ್ಗೊಂಡರು. ಈ ಸ್ವಚ್ಛತೆಯ ಪವಿತ್ರ ಕಾಯಕದಲ್ಲಿ ಪಾಲ್ಗೊಂಡ ಸರ್ವರಿಗೂ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ. ಕೆ. ಎಂ ಅಬ್ದುಲ್ ರೆಹಮಾನ್ ಅಭಿನಂದಿಸಿದರು