Kundapra.com ಕುಂದಾಪ್ರ ಡಾಟ್ ಕಾಂ

ಸವಿತಕ್ಕನ ಅಳ್ಳಿಬ್ಯಾಂಡ್‌ನಿಂದ ಸಾಹಿತ್ಯಕ ಮಾಧುರ್ಯ ಸೌರಭ

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ:
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತರಾಷ್ಟ್ರಿಯ ಸಾಂಸ್ಕೃತಿಕ ಜಾಂಬೂರಿಯ ‘ಸವಿತಕ್ಕ ಅಳ್ಳಿ ಬ್ಯಾಂಡ್’ ಕಾರ್ಯಕ್ರಮವು ಕನ್ನಡದ ತತ್ವಪದಕಾರರ ತಾತ್ವಿಕ ಗೀತೆಗಳು ಮತ್ತು ಆಧುನಿಕ ಕವಿಗಳ ಕಾವ್ಯಕಾಣ್ಕೆ ಆಧಾರಿತ ಸಂಗೀತ ಮಾಧುರ್ಯವನ್ನು ಕಟ್ಟಿಕೊಟ್ಟಿತು.

ಆಳ್ವಾಸ್ ಸಂಸ್ಥೆಯ ವಿದ್ಯಾಗಿರಿಯ ಕೆ.ವಿ ಸುಬ್ಬಣ್ಣ ಬಯಲು ರಂಗ ಮಂದಿರದಲ್ಲಿ ಬೆಂಗಳೂರಿನ ಸವಿತಕ್ಕ ಮತ್ತು ಬಳಗದ ಕಲಾವಿದರು ತತ್ವಪದ ಮತ್ತು ಆಧುನಿಕ ಕಾವ್ಯದ ರಸವತ್ತಾದ ಸಂಯೋಜನೆಯೊಂದಿಗಿನ ವಿವಿಧ ಗೀತೆಗಳನ್ನು ಪ್ರಸ್ತುತಪಡಿಸಿ ರಂಜಿಸಿದರು.

ಖ್ಯಾತ ಗಾಯಕಿ ಸವಿತಕ್ಕ, ರಾಜೀವ ಅಗಳಿ, ಓಂಬ್ಬೆ ಗೌಡ್ರು, ಬಸಂಜಿ ಪ್ರಸಾದ, ಯಶಸ್ವಿನಿ ಅವರ ಸುಮಧುರ ಧ್ವನಿಯ ಮೂಲಕ ಕನ್ನಡದ ಶ್ರೇಷ್ಠ ಕವಿಗಳ ಕವಿತೆಗಳ ಆಸ್ವಾದ ಪ್ರೇಕ್ಷಕರಿಗೆ ದಾಟಿಕೊಂಡಿತು.

ಸವಿತಕ್ಕ ಅವರು ?ಹಾವಾದ್ರು ಕಚ್ಚಬಾರ್ದಾ? ಮತ್ತು ?ಸೋಜಗಾದ ಸುಜಿ ಮಲ್ಲಿಗೆ ಅವರು ಪ್ರಸ್ತುತಪಡಿಸಿದ ತಕ್ಷಣ ವ್ಯಾಪಕ ಚಪ್ಪಾಳೆಗಳ ಮೆಚ್ಚುಗೆ ವ್ಯಕ್ತವಾಯಿತು. ಅವರು ಹಾಡಿದ ? ಯಾಕೆ ಬಡಿದಾಡ್ತಿ ತಮ್ಮ ? ಹಾಡು ಯುವ ಮನಸುಗಳನ್ನು ಸೆಳೆಯಿತು.

ರಾಜೀವ ಅಗಳಿ ಬೇಂದ್ರೆ ಅವರ ? ಶ್ರಾವಣ ಬಂತು ? ಮತ್ತು ? ಕುರುಡು ಕಾಂಚಾಣ ಕುಣಿಯುತಲಿತ್ತು? ಹಾಡು ಅನೇಕ ವಿದ್ಯಾರ್ಥಿಗಳಿಗೆ ಇಷ್ಟವಾಯಿತು. ಶಿಶುನಾಳ ಷರೀಫರ ಅವರ ?ತರವಲ್ಲ ತಗಿ ನಿನ್ನ ತಂಬೂರಿ? ಪ್ರೇಕ್ಷಕರಿಗೆ ಖುಷಿ ನೀಡಿತು.

ಓಂಬ್ಬೆ ಗೌಡ್ರು ಸಂತ ಶಿಶುನಾಳು ಶರಿಫರ ಅವರ ? ಕೇಳ ಜಾಣ ಶಿವ ಧ್ಯಾನ ಮಾಡಣ್ಣ ? ಮತ್ತು ? ಏಳು ಏಳು ಜನುಮದ ಶಿವ ಭಕ್ತ? ಹಾಡಿಗೆ ಎಲ್ಲರೂ ವಿದ್ಯಾರ್ಥಿಗಳು ಖುಷಿಯಿಂದ ಚಪ್ಪಾಳೆಯನ್ನು ತಟ್ಟಿದರು.

ಬಸಂಜಿ ಪ್ರಸಾದ ಅವರು ಸಂತ ಶಿಶುನಾಳು ಶರಿಫರ ?ಕೋಡಗನ ಕೋಳಿ ನುಂಗಿತ್ತ ? ಹಾಡು ಹಾಡಿ ಗಮನ ಸೆಳೆದರು. ಯಶಸ್ವಿನಿ ಅವರು ?ರಾಗಿ ಬಿಸೋ ಕಲ್ಲೆ ಚಿನ್ನ ರನ್ನರ ಕಲ್ಲೆ? ಹಾಡಿದ ಉತ್ತರ ಕರ್ನಾಟಕದ ಶೈಲಿಯ ಜನಪದಕ್ಕೆ ತಲೆದೂಗಿದರು.

ಗಣೇಶ ಪ್ರಸಾದ ಮತ್ತು ಪುಣ್ಯಶೆ ಕುಮಾರ ( ಕೀಬೊಂಡ ) ಅರವಿಂದ ( ಗೀಟಾರ್ ) ಶಂಕರ ಎಸ್ ( ರಿದಂ ಪ್ಯಾಡ್ ) ಶ್ರೀನಿವಾಸ ( ಢೋಲಕ್ ) ಪುಟ್ಟರಾಜ್ ( ತಬಲಾ ) ಸಾಥ್ ನೀಡಿದರು.ವಿದ್ಯಾರ್ಥಿನಿ ನಿಹಾರಿಕ ಶೆಟ್ಟಿ ಸ್ವಾಗತಿಸಿ ನಿರೂಪಿಸಿದರು.

ವರದಿ: ಮಹಾಂತೇಶ ಚಿಲವಾಡಗಿ, ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಮ್.ಸಿ ಉಜಿರೆ
ಚಿತ್ರಗಳು: ಆಶಿಶ್ ಜಿ.ಯಾದವ್

Exit mobile version