Kundapra.com ಕುಂದಾಪ್ರ ಡಾಟ್ ಕಾಂ

ಜಾಂಬೂರಿಯಲ್ಲಿ ‘ಅಗ್ನಿಹೋತ್ರಿ’ ರಾಕೆಟ್ ಮಾದರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ:
ಭಾರತ ಅಂತರಿಕ್ಷರಂಗದಲ್ಲಿ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರ. ‘ವಿಕ್ರಮ್ ಸಾರಾಬಾಯಿ’ ರನ್ನು ಪಡೆದ ಹೆಮ್ಮೆಯ ದೇಶ. ಅವರ ಪರಿಕಲ್ಪನೆಯಂತೆ ಭಾರತದಲ್ಲಿ ರಾಕೆಟ್ ತಂತ್ರಜ್ಞಾನ ಅಭಿವೃದ್ದಿ ಪಥದತ್ತ ಸಾಗಿದ್ದನ್ನು ನಾವು ಕಂಡಿದ್ದೇವೆ ಪ್ರಪಂಚದಾದ್ಯಂತ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸಾಧಿಸಲು ನವೀನ ರೀತಿಯ ಪ್ರಯತ್ನಗಳು ನಡೆಯುತ್ತಲೇ ಇವೆ. ಆತ್ಮನಿರ್ಭರ ಭಾರತದ ಪರಿಕಲ್ಪನೆಯನ್ನು ಅಳವಡಿಸಿಕೊಂಡು ಇಂದು ಸ್ವದೇಶಿ ವಸ್ತುಗಳ ಬಳಕೆಯ ಮೂಲಕ ರಾಕೆಟ್ ಗಳನ್ನು ತಯಾರಿಸುತ್ತಿದೆ. ಅಂತಹದ್ದೇ ಪ್ರಯತ್ನವನ್ನು ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರು ಮಾಡಿ ತೋರಿಸಿದ್ದಾರೆ. ಅರೇಏನಿದು ಆವಿಷ್ಕಾರ ಅಂತೀರಾ ಇಲ್ಲಿದೆ ನೋಡಿ.

ಇದು ‘ಅಗ್ನಿಹೋತ್ರಿ’ ಏರೋಸ್ಪೇಸ್ ಮಾದರಿ. ಆಡ್ಯಾರು ಸಹ್ಯಾದ್ರಿ ಕಾಲೇಜಿನ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ವಿಭಾಗದ ವಿದ್ಯಾರ್ಥಿ ಮಹಾಭಲೇಶ್ವರ ಭಟ್ ಅಭಿವೃದ್ದಿಪಡಿಸಿದ್ದಾರೆ. ಇಂದು ದಿನಕ್ಕೊಂದರಂತೆ ರಾಕೆಟ್‌ಗಳನ್ನು ಉಡಾಯಿಸಲಾಗುತ್ತಿದೆ. ರಾಕೆಟ್‌ಗಳನ್ನು ತಯಾರಿಸಲು ತಗುಲುವ ವೆಚ್ಚ ಹೆಚ್ಚಾಗುತ್ತಿದೆ. ರಾಕೆಟ್ ಲಾಂಚರ್‌ಗಳನ್ನು ನಿರ್ಮಾಣ ಮಾಡಲು ವಿಮಾನಕ್ಕೆ ತಗುಲುವ ವೆಚ್ಚವೇ ಅಧಿಕ. ಈ ಅಧಿಕ ವೆಚ್ಚವನ್ನು ತಗ್ಗಿಸುವ ಉದ್ದೇಶವನ್ನಿಟ್ಟುಕೊಂಡು ನಿರ್ಮಿಸಿಲಾದ ವಿಶೇಷ ಮಾದರಿ ಇದಾಗಿದೆ.

ಏರೋಪ್ಲೇನ್ ಭೂಮಿಗೆ ಬಂದು ಲ್ಯಾಂಡ್‌ಆದ ಹಾಗೆ ರಾಕೆಟ್‌ನ್ನು ಲ್ಯಾಂಡ್ ಮಾಡುವ ಮೂಲಕ ಪುನಃ ರಾಕೆಟ್‌ನ್ನು ಬಳಸಿಕೊಳ್ಳಬಹುದಾಗಿದೆ. ಇದನ್ನೇ ಗಮನದಲ್ಲಿರಿಸಿಕೊಂಡು ಪ್ರತಿಭಾನ್ವಿತ ವಿದ್ಯಾರ್ಥಿ ಮರುಬಳಕೆಯ ಕ್ರಯೋಜಿನಿಕ್ ಎಂಜಿನ್‌ನನ್ನು ವಿನ್ಯಾಸಗೊಳಿಸಿದ್ದಾರೆ. ಉಡಾಯಿಸಲಾದ ರಾಕೆಟ್‌ಗಳಿಂದ ಬೇರ್ಪಡುವ ಫ್ಯುಯೆಲ್ ಟ್ಯಾಂಕ್ ಮತ್ತು ರಾಕೆಟ್‌ನ ಅವಶೇಷಗಳನ್ನು ಮರುಬಳಕೆ ಮಾಡುವ ಸಲುವಾಗಿ ರಚಿಸಲಾಗಿದೆ. ಭಾರತದಲ್ಲಿಇದೇ ಮೊದಲ ವಿನೂತನ ಯೋಜನೆಇದಾಗಿದ್ದು, ಡಿಸೆಂಬರ್ ಅಂತ್ಯದೊಳಗೆ ಅಗ್ನಿಹೋತ್ರಿ ರಾಕೆಟ್‌ನ್ನು ಉಡಾಯಿಸಲಿದ್ದೇವೆ ಎಂದು ಅಭಿಪ್ರಾಯಪಟ್ಟರು.

ವರದಿ: ರಂಜಿತ್‌ಕುಮಾರ್ ಕೆ ಎಸ್., ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಮ್.ಸಿ ಉಜಿರೆ

Exit mobile version