ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ಪ್ರತಿನಿತ್ಯ ಸಾವಿರಾರು ವಿಧ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಇಲ್ಲಿ ಸುಭದ್ರತೆಯನ್ನು ಕಾಯ್ದುಕೊಳ್ಳಲು ಅಗ್ನಿ ಶಾಮಕ ದಳದ ಸೇವಕರು ಸಕಲ ಸಿದ್ದತೆಗಳೊಂದಿಗೆ ಕಾರ್ಯನಿರತರಾಗಿದ್ದರು.
ಜಾಂಬೂರಿಯಲ್ಲಿ ಮುಂಜಾಗೃತ ಕ್ರಮವಾಗಿ ಪ್ರತಿ ಕ್ಷಣದ ಕಾರ್ಯಚರಣೆಗೆ ಸ್ಪಂದಿಸಲು 8 ಫೈರ್ ಎಂಜಿನ್, 9 ಅಗ್ನಿ ಬೈಕ್‌ಗಳು ಹಾಗೂ ಎರಡು ಕ್ಯು.ಆರ್.ವಿ ವಾಹನದ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಮಂಗಳೂರಿನ ಮುಖ್ಯ ಅಗ್ನಿ ಶಾಮಕ ಅಧಿಕಾರಿ ಜಿ.ತಿಪ್ಪೆಸಾಮಿ ಮಾರ್ಗದರ್ಶನದಲ್ಲಿ ಮಂಗಳೂರು, ಉಡುಪಿ ಮತ್ತು ಮೈಸೂರು ವಿಭಾಗದ ಏಳು ಡಿ.ಎಫ್.ಒ ಅಧಿಕಾರಿಗಳು ಸತತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಟ್ಟೂ ೯೮ ಅಗ್ನಿ ಸೇವಕ ಸಿಬ್ಬಂದಿಗಳು ಯಾವುದೇ ಕಠಿಣ ಪರಿಸ್ಥಿತಿ ಬಂದರೂ ಎದುರಿಸಲು ಸಿದ್ಧರಾಗಿದ್ದರು.
ತುರ್ತು ಪರಿಸ್ಥತಿಯಲ್ಲಿ ಮಾಹಿತಿ ದೊರಕಲು ಒಂದು ಮುಖ್ಯ ಕಂಟ್ರೋಲ್ ರೂಂ ಮತ್ತು ಎಂಟು ಫೈರ್ ಎಂಜಿನ್ ಜೊತೆಗೆ ಎಂಟು ಅಗ್ನಿ ಬೈಕ್‌ಗಳು ವಿದ್ಯಾಗಿರಿಯ ಎಂಟು ಪ್ರಮುಖ ಸ್ಥಳಗಳಲ್ಲಿ ಸಿದ್ಧಪಡಿಸಲಾಗಿದೆ. ಕಿರಿದಾದ ಸ್ಥಳದಲ್ಲಿಯೂ ಸರಾಗವಾಗಿ ಸಂಚರಿಸುವ ಕ್ಯು.ಆರ್.ವಿ ವಾಹನವನ್ನು ವಿಶೇಷವಾಗಿ ಸಿದ್ದಪಡಿಸಲಾಗಿದೆ. ಅವಘಡ ಸಂಭವಿಸಿದ ಪ್ರತಿಕ್ಷಣದಲ್ಲಿ ಕಂಟ್ರೋಲ್ ರೂಂ ಗೆ ಮಾಹಿತಿಯನ್ನು ಹತ್ತಿರದ ವಾಹನಕ್ಕೆ ತಲುಪಿಸಲಾಗುತ್ತದೆ. ಆಗ ತುರ್ತು ಕಾರ್ಯಚರಣೆ ನಡೆಯುತ್ತದೆ.
ಜಾಂಬೂರಿಯ ಸುರಕ್ಷತೆಯನ್ನು ಅಗ್ನಿ ಶಾಮಕದಳ ಅಧಿಕಾರಿಗಳು ಪರಿಶೀಲಿಸಿ, ಯಾವುದೇ ಅವಘಡಗಳು ಆಗದಂತಹ ಸುರಕ್ಷಿತ ವಲಯ ಎಂದು ದೃಢೀಕರಿಸಿದ್ದಾಗಿ ಎಂದು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ವಸಂತ್ ಕುಮಾರ್ ತಿಳಿಸಿದರು.
ಈ ನಡುವೆ ಸ್ಕೌಟ್ಸ್ ಮತ್ತು ಗೈಡ್ಸ್ ವಿಧ್ಯಾರ್ಥಿಗಳಿಗೆ ಬೆಂಕಿ ಅಪಘಾತಗಳಿಂದ ತಪ್ಪಿಸಿಕೊಳ್ಳುವ ಮಾರ್ಗೊಪದೇಶವನ್ನು ಅಣಕು ಕಾರ್ಯಾಚರಣೆ ಮೂಲಕ ತಿಳಿಸುವ ಕಾಯವನ್ನು ಅಗ್ನಿಶಾಮಕದಳದ ಸಿಬ್ಬಂದಿಗಳು ಮಾಡಿದ್ದಾರೆ.
- ವರದಿ: ವಿವೇಕ್ ಚಂದ್ರನ್, ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಮ್.ಸಿ ಉಜಿರೆ