Kundapra.com ಕುಂದಾಪ್ರ ಡಾಟ್ ಕಾಂ

ತೆಂಗಿನಕಾಯಿಯಲ್ಲಿ ಮೂಡಿದ ಗಣ್ಯಮಾನ್ಯರ ಕಲಾಕೃತಿ

ಐಶ್ವರ್ಯ ಕೋಣನ | ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ:
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಕರಕುಶಲ ವಸ್ತು ಪ್ರದರ್ಶನದಲ್ಲಿ ಖ್ಯಾತನಾಮರ ಚಿತ್ರಗಳು ತೆಂಗಿನ ಕಾಯಿಯಲ್ಲಿ ಮೂಡಿದ್ದವು. ಅಬ್ದಲ್ ಕಲಾಂ, ಬುದ್ಧ, ಬಸವಣ್ಣ, ಶಿವಾಜಿಯ ಕೆತ್ತನೆಗಳು, ಪರಮೇಶ್ವರ ಸ್ವರೂಪ ವಿನ್ಯಾಸಗಳು ವಿಶೇಷವೆನ್ನಿಸಿದವು. ಅಲ್ಲದೇ ಜೋಕರ್, ಎತ್ತಿನ ಗಾಡಿ ಮತ್ತು ಪ್ರಾಣಿಗಳ ವಿನ್ಯಾಸಗಳು ತೆಂಗಿನ ಕಾಯಿ ಕೆತ್ತನೆಯಲ್ಲಿ ಕಾಣಿಸಿಕೊಂಡವು.

ತೆಂಗಿನಕಾಯಿಯ ವಿನೂತನ ವಿನ್ಯಾಸಗಳಲ್ಲಿ, ಶಿವ, ಗಣೇಶ, ಹಾಗೂ ಇನ್ನಿತರ ತೆಂಗಿನಕಾಯಿಯ ಮೂರ್ತಿಗಳು ಗಮನಸೆಳೆದವು, ಧಾರವಾಡದ ಜಗದೀಶ್ ಅವರು ತೆಂಗಿನ ಕಾಯಿಯಲ್ಲಿ ವಿವಿಧ ಬಗೆಯ ಕಲಾಕೃತಿಗಳನ್ನು ರೂಪಿಸುವುದರ ಮೂಲಕ ಹಲವರ ಗಮನ ಸೆಳೆದಿದ್ದಾರೆ.

ತಾವು ಹಿರಿಯರಿಂದ ಕಲಿತ ಕೌಶಲ್ಯವನ್ನು ಹೊಸ ಪೀಳಿಗೆಗೂ ದಾಟಿಸಬೇಕು ಎಂಬ ಆಶಯದೊಂದಿಗೆ ತೆಂಗಿನ ಕಾಯಿಯ ಚಿತ್ರಗಳನ್ನು ಕೆತ್ತಿ ಮಾರಾಟ ಮಾಡುತ್ತಿದ್ದಾರೆ. ತೆಂಗಿನಕಾಯಿಯಲ್ಲಿ ಮೂಡಿರುವ ಈ ವಿಶೇಷ ವಿನ್ಯಾಸ ನೋಡಲು ಸಾವಿರಾರು ಜನ ಬರುತಿದ್ದಾರೆ.

ತೆಂಗಿನಕಾಯಿಯಂದರೆ ಅಡುಗೆಗೆ ಅಥವಾ ಎಳನೀರಿಗೆ ಅಷ್ಟೇ ಎಂದು ತಿಳಿದಿದ್ದವರು ಇಲ್ಲಿಗೆ ಭೇಟಿ ನೀಡಿದ ಮೇಲೆ ಅಚ್ಚರಿಪಟ್ಟರು.

Exit mobile version