Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ತಾಲೂಕಿಗೆ ಖಾಯಂ ಕೋರ್ಟ್ ಮಂಜೂರು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ತಾಲೂಕಿನಲ್ಲಿ ಪ್ರಸ್ತುತ ವಾರದ ಎರಡು ದಿನಗಳ ಸಂಚಾರಿ ನ್ಯಾಯಾಲಯದ ಬದಲಿಗೆ ಖಾಯಂ ಆಗಿ ಸಿವಿಲ್ ನ್ಯಾಯಾಧೀಶರು & ಜೆ.ಎಂ.ಎಫ್.ಸಿ ನ್ಯಾಯಾಲಯ ಕಾರ್ಯಾಚರಿಸಲಿದೆ. ರಾಜ್ಯ ಉಚ್ಛ ನ್ಯಾಯಾಲಯದ ರಿಜಿಸ್ಟಾರ್ ಜನರಲ್ ಪ್ರಸ್ತಾವನೆಗೆ ಡಿ.28ರಂದು ಸರಕಾರದ ಮಂಜೂರಾತಿ ದೊರೆತಿದೆ.

ಕಾರ್ಕಳದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು & ಜೆ.ಎಂ.ಎಫ್‌ಸಿ ನ್ಯಾಯಾಲಯವನ್ನು ಹಾಲಿ ಇರುವ ಹುದ್ದೆಗಳೊಂದಿಗೆ ಬೈಂದೂರಿಗೆ ಸ್ಥಳಾಂತರಿಸಿ, ಸಿವಿಲ್ ನ್ಯಾಯಾಧೀಶರು & ಜೆ.ಎಂ.ಎಫ್.ಸಿ ನ್ಯಾಯಾಲಯ ಬೈಂದೂರು, ಉಡುಪಿ ಎಂದು ಮರುಪದನಾಮೀಕರಣಗೊಳಿಸಲು ಸೂಚಿಸಲಾಗಿದೆ. ಜನವರಿ ಮೊದಲ ವಾರದಿಂದಲೇ ಖಾಯಂ ನ್ಯಾಯಾಲಯ ಆರಂಭಗೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: ► ಬೈಂದೂರು ಸಂಚಾರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಉದ್ಘಾಟನೆ – https://kundapraa.com/?p=57565 .

ಬೈಂದೂರು ತಾಲೂಕಿಗೆ ಆರಂಭದಲ್ಲಿ ಸಂಚಾರಿ ನ್ಯಾಯಾಲಯ ಹಾಗೂ ಇದೀಗ ಖಾಯಂ ನ್ಯಾಯಾಲಯವನ್ನು ತರವಲ್ಲಿ ವಿಶೇಷ ಮುತುವರ್ಜಿ ವಹಿಸಿದ್ದ ಸಂಸದ ಬಿ. ವೈ. ರಾಘವೇಂದ್ರ ಹಾಗೂ ಸಹಕರಿಸಿದ ಸಿಎಂ ಕಛೇರಿ, ಉಡುಪಿ ನ್ಯಾಯಾಂಗ ಇಲಾಖೆ, ರಾಜ್ಯ ಕಾನೂನು ಇಲಾಖೆ, ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರಿಗೆ ಬೈಂದೂರು ಬಾರ್ ಅಸೋಸಿಯೇಷನ್ ಕೃತಜ್ಞತೆ ಸಲ್ಲಿಸಿದೆ.

Exit mobile version