ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಾಥ ಪಂಥದ ಸಂಪ್ರದಾಯದಂತೆ ಹಳಗೇರಿಯ ಜೋಗಿ ಸಮುದಾಯದಿಂದ ಪೂಜಿಸಲ್ಪಡುತ್ತಿರುವ ಅಪರೂಪದ ದೇಗುಲಗಳಲ್ಲಿ ತೆಂಕಬೆಟ್ಟು ಶ್ರೀ ಕಾಲಭೈರವ ದೇವಸ್ಥಾನವೂ ಒಂದಾಗಿದೆ. ದೇವಸ್ಥಾನ ನವೀಕರಣಗೊಳ್ಳುವುದರೊಂದಿಗೆ ದೈನಂದಿನ ಧಾರ್ಮಿಕ ವಿಧಿ ವಿಧಾನಗಳನ್ನು ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳುವುದು ಭಕ್ತವರ್ಗದ ಕರ್ತವ್ಯವಾಗಿದೆ ಎಂದು ಯಡಮೊಗೆಯ ಶ್ರೀ ಕ್ಷೇತ್ರ ಸಿದ್ಧಪೀಠ ಕೊಡಚಾದ್ರಿ ಹಲವರಿ ಮಠದ ಪೀಠಾಧ್ಯಕ್ಷರಾದ ಶ್ರೀ ಫೀರ್ ಯೋಗಿ ಜಗದೀಶನಾಥ್ಜೀ ಹೇಳಿದರು.
ಯಡಮೋಗೆಯ ಶ್ರೀ ಕ್ಷೇತ್ರ ಸಿದ್ಧಪೀಠ ಕೊಡಚಾದ್ರಿ ಹಲವರಿ ಮಠದ ಆವರಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ತೆಂಕಬೆಟ್ಟುವಿನ ಶ್ರೀ ಕಾಲಭೈರವ ದೇವಸ್ಥಾನದಲ್ಲಿ ಜನವರಿ 26ರಿಂದ 30ರ ತನಕ ಜರುಗಲಿರುವ ‘ನವೀಕೃತ ಶಿಲಾದೇಗುಲ ಲೋಕಾರ್ಪಣೆ – ಪುನರ್ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವ’ ಮೊದಲಾದ ಧಾರ್ಮಿಕ – ಸಾಂಸ್ಕೃತಿಕ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಆಶೀರ್ವದಿಸಿದ ಸ್ವಾಮೀಜಿಯವರು, ಬಳಿಕ ಮಾತನಾಡಿ, ತೆಂಕಬೆಟ್ಟುವಿನ ದೇವಾಲಯ ನಿರ್ಮಾಣಕ್ಕೆ ಸಾಕಷ್ಟು ಶ್ರಮವಹಿಸಿರುವ ಬಗ್ಗೆ ತಿಳಿದಿದ್ದು, ದೇವಸ್ಥಾನ ಉತ್ತಮವಾಗಿ ನಿರ್ಮಾಣಗೊಂಡಿದೆ. ಶ್ರೀ ಕಾಲಭೈರವ ದೇವರ ಹಾಗೂ ಗುರೂಜಿಯ ಆಶೀರ್ವಾದ ಸದಾ ಭಕ್ತವರ್ಗದ ಮೇಲಿರಲಿದೆ ಎಂದರು.
ಈ ವೇಳೆ ಕ್ಷೇತ್ರದ ಪ್ರಧಾನ ತಂತ್ರಿ ರಘುರಾಮ ಮಧ್ಯಸ್ಥ ನೀಲಾವರ, ಕುಂದಾಪುರ ಜೋಗಿ ಸಮಾಜ ಸೇವಾ ಸಂಘದ ಅಧ್ಯಕ್ಷ ಪಾಂಡುರಂಗ ಜೋಗಿ ಕೋಟೇಶ್ವರ, ಅಖಿಲ ಕರ್ನಾಟಕ ನಾಥಪಂಥ ಜೋಗಿ ಸಮಾಜ ಸೇವಾ ಸಮಿತಿ ರಿ. ಕುಂದಾಪುರದ ಅಧ್ಯಕ್ಷ ದೇವರಾಜ ಜೋಗಿ ಬೈಂದೂರು, ಕಂಡ್ಲೂರು ಕನ್ನೀಕಾ ಪರಮೇಶ್ವರಿ ದೇವಳದ ಆಡಳಿತ ಮೊಕ್ತೇಸರ ಚಂದ್ರಶೇಖರ ಜೋಗಿ ಕಂಡ್ಲೂರು, ಉದ್ಯಮಿ ಶ್ರೀನಿವಾಸ ಜೋಗಿ ಬೆಂಗಳೂರು, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಮಾಜಿ ಧರ್ಮದರ್ಶಿ ನರಸಿಂಹ ಹಳಗೇರಿ, ಭಾರ್ಗವ ಜೋಗಿ ಬೆಂಗಳೂರು, ಸಂದೇಶ್ ಜೋಗಿ ಹಕ್ಲಾಡಿ, ಕಾಲಭೈರವ ಸೇವಾ ಸಂಘದ ಅಧ್ಯಕ್ಷ ಕೃಷ್ಣಕುಮಾರ್ ಜೋಗಿ ಮೇಲ್ಮನೆ, ಕಂಬದಕೋಣೆ ಗ್ರಾಪಂ ಸದಸ್ಯ ಸುಬ್ರಹ್ಮಣ್ಯ ಜೋಗಿ ಕೆಳಮನೆ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಹಾಗೂ ಬೈಂದೂರು ಜೋಗಿ ಸಮಾಜ ಸೇವಾ ಸಂಘದ ಅಧ್ಯಕ್ಷ ದಯಾನಂದ ಜೋಗಿ, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಹರೀಶ್ ಜೋಗಿ ಕಡೆಮನೆ, ಹಿರಿಯರಾದ ದಯಾನಂದ ಜೋಗಿ ಕಡೆಮನೆ, ಗಣಪಯ್ಯ ಜೋಗಿ ಕೆಳಮನೆ, ಗೋಪಾಲ ಜೋಗಿ ಕೆಳಾಮನೆ, ಮಂಜಯ್ಯ ಜೋಗಿ ಕೆಳಮನೆ, ಚಂದ್ರ ಜೋಗಿ ತೆಂಕಬೆಟ್ಟು, ಕೃಷ್ಣಯ್ಯ ಜೋಗಿ ಅಂಕದಕಟ್ಟೆ, ಶೇಖರ ಜೋಗಿ ಮೂಡುಗೋಪಾಡಿ, ಸದಸ್ಯರಾದ ಜಗದೀಶ್ ಜೋಗಿ ಕಡೆಮನೆ, ನಾಗೇಶ್ ಜೋಗಿ ಕಡೆಮನೆ, ರಾಘವೇಂದ್ರ ಜೋಗಿ ನಡುಮನೆ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಟಿ.ಎಸ್. ನಾಗೇಶ್ ಜೋಗಿ ಕೆಳಮನೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ರಮೇಶ್ ಜೋಗಿ ಹಳಗೇರಿ ಸ್ವಾಗತಿಸಿ, ಧನ್ಯವಾದಗೈದರು. ರಾಘವೇಂದ್ರ ಜೋಗಿ ಕಟ್ಬೆಲ್ತೂರು ಕಾರ್ಯಕ್ರಮ ನಿರೂಪಿಸಿದರು.