Site icon Kundapra.com ಕುಂದಾಪ್ರ ಡಾಟ್ ಕಾಂ

ಪ್ರಧಾನಮಂತ್ರಿ ಮುದ್ರಾ ಯೋಜನೆಯ ಮಾಹಿತಿ ಹಾಗೂ ಸಾಲ ಮಂಜೂರು

ಕುಂದಾಪುರ: ಕರ್ನಾಟಕ ವಿಕಾಸ ಬ್ಯಾಂಕ್ ಕುಂದಾಪುರ ಶಾಖೆಯಲ್ಲಿ ಪ್ರಧಾನಮಂತ್ರಿ ಮುದ್ರಾ ಯೋಜನೆಯ ಮಾಹಿತಿ ಹಾಗೂ ಸಾಲ ಮಂಜೂರಾತಿ ಕರ್ಯಕ್ರಮ ಜರುಗಿತು.

ಶಾಖಾ ಪ್ರಬಂಧಕ ಮೋಹನದಾಸ್ ಕಿಣಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮುದ್ರಾ ಯೋಜನೆಯ ಕಿಶೋರ ಸಾಲ ರುಪಾಯಿ 4 ಲಕ್ಷದ ಮಂಜೂರಾತಿ ಪತ್ರವನ್ನು ಫಲಾನುಭವಿ ಕುಂದಾಪುರದ ಬಾಲಾಜಿ ಟೆಕ್ಸ್‌ಟೈಲ್ಸ್ ಮಾಲಕ ಚಂದ್ರರವರಿಗೆ ಹಸ್ತಾಂತರಿಸಿದರು.

ಮುದ್ರಾ ಯೋಜನೆಯ ಹಾಗೂ ಇತರ ಸಾಲ ಸೌಲಭ್ಯದ ಮಾಹಿತಿಯನ್ನು ಶಾಖಾ ಉಪ ಪ್ರಬಂಧಕಿ ಅನಿತಾ ಕಟ್ಟಿಯವರು ಗ್ರಾಹಕರಿಗೆ ಸುವಿಸ್ತಾರವಾಗಿ ವಿವರಿಸಿದರು. ಬ್ಯಾಂಕ್‌ನ ಸಿಬ್ಬಂದಿ ಜಗದೀಶ್ ಕೆದಿಲಾಯ, ಮನೋಜ ಕುಮಾರ್ ಹಾಗೂ ರೇಷ್ಮಾ ಶೇಟ್ ಕಾರ್ಯಕ್ರಮ ನಿರ್ವಹಿಸಿದರು. ನಿತ್ಯನಿಧಿ ಸಂಗ್ರಾಹಕರಾದ ಬಿ.ಎಸ್.ದಾಮೋದರ್ ನಾಯಕ್ ಸ್ವಾಗತಿಸಿದರು ಹಾಗೂ ಸಚ್ಚಿದಾನಂದ ಎಮ್.ಎಲ್. ವಂದಿಸಿದರು.

Exit mobile version